Monday, 12th May 2025

ಕೃಷಿ ಕಾಯ್ದೆ ವಿಚಾರವಾಗಿ ಒಂದು ಹೆಜ್ಜೆ ಹಿಂದೆ ಹೋಗಿರಬಹುದು, ಆದರೆ ಮುನ್ನುಗ್ಗುತ್ತೇವೆ: ತೋಮರ್‌ ಸಂಚಲನ

Narendra Singh Tomar

ನವದೆಹಲಿ: ವಿವಾದಿತ ಕೃಷಿ ಕಾಯ್ದೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಹೇಳಿಕೆ ಸಂಚಲನ ಸೃಷ್ಟಿಸಿದೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ತೋಮರ್ ಅವರು, ‘ಕೃಷಿ ಕಾಯ್ದೆ ವಿಚಾರವಾಗಿ ಒಂದು ಹೆಜ್ಜೆ ಹಿಂದೆ ಹೋಗಿರಬಹುದು. ಆದರೆ ಮುನ್ನುಗ್ಗುತ್ತೇವೆ ಎಂದು ಹೇಳಿ ದ್ದಾರೆ.

‘ರೈತರ ಅನುಕೂಲಕ್ಕಾಗಿ ಭವಿಷ್ಯದಲ್ಲಿ ಮತ್ತೆ ಮುಂದಕ್ಕೆ ತೆರಳಲಿದ್ದೇವೆ. ಕೃಷಿ ಕಾನೂನುಗಳಲ್ಲಿ ಬದಲಾವಣೆಗಳೊಂದಿಗೆ ಮತ್ತೆ ತರಲಿದ್ದೇವೆ ಎಂದು ಘೋಷಿಸಿದ್ದಾರೆ.

ದೆಹಲಿ ಗಡಿಯಲ್ಲಿ ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ವರ್ಷದಿಂದ ನಿರಶನ ನಡೆಸುತ್ತಿದ್ದ ರೈತರು ವಾರದ ಹಿಂದಷ್ಟೇ ತಮ್ಮ ಶಿಬಿರಗಳನ್ನು ಖಾಲಿ ಮಾಡಿ ತೆರಳಿದ್ದರು. ಈ ಕ್ರಮದಲ್ಲಿ ಕೇಂದ್ರ ಸಚಿವ ತೋಮರ್‌ ಹೇಳಿಕೆ ಸಂಚಲನ ಮೂಡಿಸಿದೆ.