Monday, 12th May 2025

ಪಶುಪತಿನಾಥ ದೇವಾಲಯಕ್ಕೆ 3,700 ಕೆಜಿ ತೂಕದ ಘಂಟೆ ಪ್ರತಿಷ್ಠಾಪನೆ

ಮಂಡ್ಸೌರ್‌: ಮಧ್ಯಪ್ರದೇಶದ ಮಂಡ್ಸೌರ್‌’ನಲ್ಲಿ ಮುಸ್ಲಿಂ ಮೇಸ್ತ್ರಿ ನಹ್ರು ಖಾನ್ ಎಂಬವರು ಪಶುಪತಿನಾಥ ದೇವಾಲಯದ ಆವರಣದಲ್ಲಿ 3,700 ಕೆಜಿ ತೂಕದ ಬೃಹತ್‌ ಘಂಟೆಯನ್ನು ಪ್ರತಿಷ್ಠಾಪಿಸಿದ್ದಾರೆ.

ಭಾರೀ ತೂಕವಿದ್ದ ಕಾರಣ ಅಳವಡಿಸಲು ಸಾಧ್ಯವಿಲ್ಲವೆಂದು ಹಾಗೆಯೇ ಇಡ ಲಾಗಿತ್ತು. ಮಹಾಘಂಟೆಯನ್ನು ನಹ್ರು ಖಾನ್‌ ದೇವಾಲಯದ ಆವರಣದಲ್ಲಿ ತೂಗು ಹಾಕಿದ್ದಾರೆ. ಮಹಾಘಳಿಗೆಯಲ್ಲಿಯೇ ಘಂಟೆಯನ್ನು ಪ್ರತಿಷ್ಠಾಪಿಸಿದ್ದಾರೆ. ನಹ್ರು ಖಾನ್‌ ಹಲವು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಈ ಹಿಂದೆಯೂ ತೊಡಗಿಕೊಂಡಿದ್ದಾರೆ.

ಹಿಂದು ದೇವಾಲಯದಲ್ಲಿ ಘಂಟೆ ಅಳವಡಿಸಿರುವ ಅವರ ಕಾರ್ಯದ ಬಗ್ಗೆ ಶಾಸಕ ಯಶಪಾಲ್‌ ಸಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿ ದ್ದಾರೆ. 3700 ಕೆಜಿ ತೂಕದ ಘಂಟೆ ನೇತು ಹಾಕುವುದು ಸುಲಭದ ಕೆಲಸವಾಗಿರಲಿಲ್ಲ. ನಹ್ರು ಖಾನ್‌ ಅವರು ಸತತ 15 ದಿನಗಳ ಕಾಲ ಶ್ರಮಿಸಿ ಘಂಟೆಯನ್ನು ಸುರಕ್ಷಿತವಾಗಿ ಪ್ರತಿಷ್ಠಾಪಿಸಿದ್ದಾರೆ.