ರಾಜಸ್ಥಾನದ ಪ್ರಮುಖ ಆಧ್ಯಾತ್ಮಿಕ ಗುರು ಬಾಬಾ ಬಾಲಕ್‍ನಾಥ್ ಅವರು ಕಾರಿನೊಳಗೆ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ರಾಜಸ್ಥಾನದ ಸಿಕಾರ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೊ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಬಾಬಾ ಬಾಲಕ್‍ನಾಥ್ ಅವರಂತಹ ಆಧ್ಯಾತ್ಮಿಕ ವ್ಯಕ್ತಿಗಳು ಇಂತಹ ನೀಚ ಕೆಲಸ ಮಾಡಿರುವುದನ್ನು ಕಂಡು ಜನರು ಆಘಾತಗೊಂಡಿದ್ದಾರೆ.
ವರದಿಗಳ ಪ್ರಕಾರ, ಕಾಲೇಜು ವಿದ್ಯಾರ್ಥಿನಿ ಒಂದು ವರ್ಷದ ಹಿಂದೆ ಖೇಡಿ ದಂತುಲ್ಜಾದ ಕ್ಷೇತ್ರಪಾಲ್ ದೇವಸ್ಥಾನದಲ್ಲಿ ತನ್ನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಬಾಬಾ ಬಾಲಕ್‍ನಾಥ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದಾಳಂತೆ. ತಂತ್ರ ಮತ್ತು ಮಂತ್ರ ವಿದ್ಯೆಗಳನ್ನು ಬಳಸಿಕೊಂಡು ಅವಳ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಬಾಬಾ ಹೇಳಿದ್ದರು ಎನ್ನಲಾಗಿದೆ. ಆದರೆ ಸಮಸ್ಯೆಗೆ ಪರಿಹಾರ ನೀಡುವ ಬದಲು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
Sikar: प्रसाद कहकर पेड़ा खिलाया, लड़की हुई बेहोश, ऐसे शिक्षा देते हैं Baba Balaknath, ये कैसा खेल ?#Sikar #sikarviralvideo #bababalaknath #crimescene #RajasthanNews pic.twitter.com/zBAm0c6pL0
— Rajasthan Tak (@Rajasthan_Tak) October 19, 2024
ವಿಡಿಯೊ ವೈರಲ್ ಆದ ನಂತರ ಅಧಿಕಾರಿಗಳು ಬಾಬಾ ಬಾಲಕ್‍ನಾಥ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಘಟನೆಯ ಬಗ್ಗೆ ವಿದ್ಯಾರ್ಥಿನಿ ಅತ್ಯಾಚಾರದ ಆರೋಪವನ್ನು ಹೊರಿಸಿದ್ದರಿಂದ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ:ಹೆಂಗಸಿನಂತೆ ಡ್ರೆಸ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ಉದ್ಯೋಗಿ!
ಈ ಘಟನೆಯು ಧಾರ್ಮಿಕ ಮುಖಂಡರ ಮೇಲೆ ಇಟ್ಟಿರುವ ನಂಬಿಕೆಯನ್ನು ಅನೇಕರು ಪ್ರಶ್ನಿಸುವಂತೆ ಮಾಡಿದೆ. ಈ ವೈರಲ್ ವಿಡಿಯೊಗೆ ಅನೇಕರು ಕಮೆಂಟ್ ಮಾಡಿ ತಮ್ಮ ಕೋಪ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಇಂತಹ ಕಪಟಿಗಳು ಸಮಾಜಕ್ಕೆ ಹಾನಿ ಮಾಡುವುದಲ್ಲದೆ ಧಾರ್ಮಿಕ ಭಾವನೆಗಳನ್ನು ಹಾನಿಗೊಳಿಸುತ್ತಾರೆ. ಅಂಥವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.