Sunday, 11th May 2025

Viral Video: ಸ್ಕಿಡ್ ಆಗಿ ಪಲ್ಟಿಯಾದ ಸ್ಕೂಟರ್; ಭಯಾನಕ ವಿಡಿಯೊ ವೈರಲ್

Viral Video

ನವ ದೆಹಲಿ: ರಸ್ತೆಯಲ್ಲಿ ಚಲಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಪಲ್ಟಿಯಾದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಸ್ಕೂಟರ್ ಸವಾರೆಯರಿಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ  ಮಹಿಳೆಯರಿಬ್ಬರು ಬದುಕಿ ಉಳಿದದ್ದೇ ಪವಾಡ ಎನ್ನುವಂತಿದೆ (Viral Video).

ಈ ವಿಡಿಯೊವನ್ನು ಒಮ್ಮೆ ನೋಡಿದರೆ  ಈ ಘಟನೆಯ ತೀವ್ರತೆ ನಿಮ್ಮ ಮನಸ್ಸಿಗೆ ನಾಟದೇ ಇರಲು ಸಾಧ್ಯವೇ ಇಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಷ್ಟರ ಮಟ್ಟಿಗೆ ಈ ವಿಡಿಯೊ ಬಯಾನಕವಾಗಿದೆ. ಇಬ್ಬರು ಮಹಿಳೆಯರಿಬ್ಬರು ಈ ಅಪಘಾತದಿಂದ ಪಾರು ಆಗಿದ್ದೇ ಹೆಚ್ಚು ಅನ್ನುವಂತಿದೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ವಿಡಿಯೊ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ‌

ವಿಡಿಯೊದಲ್ಲಿ ಏನಿದೆ?

ಮಹಿಳಾ ಸವಾರರಿಬ್ಬರು  ರಸ್ತೆಯಲ್ಲಿ  ಬರುತ್ತಿದ್ದಂತೆ ಸ್ಕೂಟಿ  ನಿಯಂತ್ರಣ ತಪ್ಪಿ ರಭಸವಾಗಿ ಸ್ಕಿಡ್ ಆಗಿರುವುದನ್ನು ಕಾಣಬಹುದು. ಸ್ಕೂಟಿ ಬಿದ್ದ ರಭಸಕ್ಕೆ ಮಹಿಳೆಯರಿಬ್ಬರು ರಸ್ತೆಗೆ ಬಿದ್ದಿದ್ದಾರೆ.‌ ತಕ್ಷಣ  ಬಿದ್ದ ಜಾಗದಿಂದ ಏಳುವಷ್ಟರಲ್ಲಿ ಕಾರೊಂದು‌ ಅದೇ ರಸ್ತೆಯಲ್ಲಿ ಬರುತ್ತಿರುವುದನ್ನು ಕಾಣಬಹುದು. ಆ ಸಮಯಕ್ಕೆ ಸರಿಯಾಗಿ ಕಾರು ನಿಲ್ಲಿಸಿದ ಚಾಲಕ ದೊಡ್ಡ ಅಪಘಾತವನ್ನು ತಪ್ಪಿಸಿದ್ದಾರೆ. ನೆಟ್ಟಿಗರು ಈ ದೃಶ್ಯ ಕಂಡು ಆಘಾತ ವ್ಯಕ್ತಪಡಿಸಿದ್ದಾರೆ.

 @Gharkakalesh  ಎನ್ನುವ ಪೋಸ್ಟ್ ಮೂಲಕ ಈ ವಿಡಿಯೊ ಹಂಚಿಕೊಂಡಿದ್ದು ಸದ್ಯವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ಒಬ್ಬ ಬಳಕೆದಾರರು ಈ ಬಗ್ಗೆ  ಕಳವಳ ವ್ಯಕ್ತಪಡಿಸಿದ್ದಾರೆ. ಅವರ  ಸ್ಕೂಟಿ ಇದ್ದಕ್ಕಿದ್ದಂತೆ ಸ್ಕಿಡ್ ಆಗಿದೆ. ಅವರಿಬ್ಬರೂ ದೇವರ ದಯೆಯಿಂದ ಗಾಯಗೊಂಡಿಲ್ಲ ಎಂದಿದ್ದಾರೆ‌ ಇನ್ನೊಬ್ಬ ಬಳಕೆದಾರರು.  “ಸ್ಕಿಡ್‌ಗೆ ಏನು ಕಾರಣ?” ಎಂದು ಮತ್ತೊಬ್ಬರು ವಿಚಾರಿಸಿದರೆ, ಮಗದೊಬ್ಬರು ಯಾರೋ ರಸ್ತೆಯ ಮೇಲೆ ಎಣ್ಣೆ ಸುರಿದಿದ್ದಾರೆ ಎಂದು  ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ:‌MS DHONI: ಗೋವಾ ಬೀಚ್‌ನಲ್ಲಿ ಹೊಸ ವರ್ಷ ಆಚರಿಸಿದ ಧೋನಿ; ವಿಡಿಯೊ ವೈರಲ್