ಬೇರೆ ದೇಶದ ಭಾಷೆಗಳನ್ನು ಕಲಿತು ಮಾತನಾಡುವುದು ಬಹಳ ಕಷ್ಟದ ಕೆಲಸ. ಆದರೂ ಕೊರಿಯನ್ ವ್ಯಕ್ತಿಯೊಬ್ಬರು ತಮ್ಮ ಪತ್ನಿಗಾಗಿ ಹಿಂದಿ ಮಾತನಾಡಿದ್ದಾನೆ. ಇಂಡಿಯನ್ ಕಂಟೆಂಟ್ ಕ್ರಿಯೇಟರ್ ನೇಹಾ ಅರೋರಾ ತಮ್ಮ ಕೊರಿಯನ್ ಪತಿಯ ಹಿಂದಿ ಭಾಷಾ ಪರಿಣತಿಯನ್ನು ಪರೀಕ್ಷಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಅವರ ಕೊರಿಯಾದ ಪತಿ ಜಾಂಗ್ಸೂ ಲೀ ಅವರು ಹಿಂದಿ ಮಾತನಾಡುವುದು ಹಾಸ್ಯಮಯವಾಗಿದ್ದು, ಇದು ಸೋಶಿಯಲ್ ಮೀಡಿಯಾದವರ ಗಮನ ಸೆಳೆದಿದೆ. ಹಾಗಾಗಿ ಇದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ ಅರೋರಾ ತಮ್ಮ ಕೊರಿಯನ್ ಪತಿಗೆ ಒಂದು ಮೋಜಿನ ಸವಾಲನ್ನು ನೀಡಿದ್ದಾರೆ. “ನನ್ನ ಗಂಡನ ಹಿಂದಿ ಕೌಶಲ್ಯಗಳನ್ನು ಪರಿಶೀಲಿಸೋಣ” ಎಂದು ಹೇಳಿದ್ದಾರೆ. ನಂತರ ಅವರು ಕ್ಯಾಮೆರಾವನ್ನು ತನ್ನ ಪತಿ ಜಾಂಗ್ಸೂ ಲೀ ಕಡೆಗೆ ತಿರುಗಿಸಿದ್ದಾರೆ. ಸವಾಲು ಮಾತ್ರ ಬಹಳ ಸರಳವಾಗಿತ್ತು: ಅದೇನೆಂದರೆ ಅರೋರಾ ಲೀಗೆ ವಿವಿಧ ವಸ್ತುಗಳ ಚಿತ್ರಗಳನ್ನು ತೋರಿಸುತ್ತಾ ಅವುಗಳನ್ನು ಹಿಂದಿಯಲ್ಲಿ ಗುರುತಿಸುವಂತೆ ಹೇಳುತ್ತಾರೆ. ಹಿಂದಿ ಭಾಷೆಯ ಬಗ್ಗೆ ಸ್ವಲ್ಪ ಜ್ಞಾನವನ್ನು ಹೊಂದಿರುವ ಲೀ ಆತ್ಮವಿಶ್ವಾಸದಿಂದ ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡುತ್ತಿರುವುದರಿಂದ ಇದು ಹಾಸ್ಯಮಯವಾಗಿತ್ತು.
ಉದಾಹರಣೆಗೆ, ಚಮಚವನ್ನು ತೋರಿಸಿದಾಗ, ಲೀ ಬೇಗನೆ “ಚಮ್ಮಚ್” ಎಂದು ಹೇಳುತ್ತಾರೆ. ಹೀಗೆ ವಸ್ತುವನ್ನು ಸರಿಯಾಗಿ ಗುರುತಿಸುತ್ತಾರೆ. ಆದರೆ ಅರೋರಾ ಚಪ್ಪಲಿಗಳ ಚಿತ್ರವನ್ನು ತೋರಿಸಿದಾಗ ವಿಷಯಗಳು ಹಾಸ್ಯಮಯ ತಿರುವು ಪಡೆಯುತ್ತವೆ. ಲೀ, ವಿಚಲಿತರಾಗಿ “ಯೇ ಬಿಲ್ಕುಲ್ ಆಸಾನ್, ಥಪ್ಪಡ್!” ಎಂದು ದಿಗ್ಭ್ರಮೆಗೊಳಿಸುವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. “ಥಪ್ಪಡ್ ವಿತ್ ಚಪ್ಪಲಿ” ಎಂಬ ಲೀ ಅವರ ತ್ವರಿತ ಬುದ್ಧಿವಂತ ಉತ್ತರವು ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸುತ್ತದೆ. ಅರೋರಾ ಲೀಗೆ ಸೊಳ್ಳೆಯನ್ನು ತೋರಿಸಿದಾಗ ಲೀ “ನನಗೆ ಗೊತ್ತು, ನನಗೆ ಗೊತ್ತು, ಅದು ನಿನ್ನಂತೆಯೇ ಇದೆ, ಮಚ್ಚರ್”, ಎಂದು ಹೇಳುವುದು ಇನ್ನೂ ಹೆಚ್ಚಿನ ಜನರ ಮುಖದಲ್ಲಿ ನಗುವನ್ನು ಮೂಡಿಸುತ್ತದೆ.
ಇದನ್ನೂ ಓದಿ:ಓನ್ಲಿ ಫ್ಯಾನ್ಸ್ ತಾರೆ ಸೋಫಿ ರೈನ್ ಆದಾಯ ಊಹೆಗೂ ಮೀರಿದ್ದು; ಈ ಅಡಲ್ಟ್ ಕಂಟೆಂಟ್ ಕ್ರಿಯೇಟರ್ ಗಳಿಕೆ ಇಷ್ಟೊಂದಾ?!
ಈ ವಿಡಿಯೊ ತ್ವರಿತವಾಗಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ಕಾಮೆಂಟ್ ಮಾಡಿ, “ಸೊಳ್ಳೆಯ ವಿಚಾರವು ನಾನು ನಕ್ಕು ನಕ್ಕು ಸುಸ್ತಾಗಿ ನೆಲದ ಮೇಲೆ ಉರುಳುವಂತೆ ಮಾಡಿದೆ” ಎಂದು ಹೇಳಿದ್ದಾರೆ. ಇನ್ನೂ ಅನೇಕರು ದಂಪತಿಯ ನಡುವಿನ ಉತ್ತಮ ಕೆಮಿಸ್ಟ್ರಿಯನ್ನು ಹೊಗಳಿದ್ದಾರೆ.