Sunday, 11th May 2025

Viral Video: ಮೃಗಾಲಯದಲ್ಲಿ ಹಗ್ಗಜಗ್ಗಾಟ; ಬಾಡಿಬಿಲ್ಡರ್‌ಗೆ ಸೋಲಿನ ರುಚಿ ಮುಟ್ಟಿಸಿದ ಸಿಂಹಿಣಿ; ವಿಡಿಯೊ ನೋಡಿ

Viral Video

ನವದೆಹಲಿ: ಇತ್ತೀಚೆಗೆ ಮೃಗಾಲಯವೊಂದರಲ್ಲಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸಿಂಹಿಣಿಯು ಬಾಡಿಬಿಲ್ಡರ್‌ನೊಂದಿಗೆ ಸ್ಪರ್ಧಿಸಿ ಅವರನ್ನೇ ಮೀರಿಸಿ ನಿಂತಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ವಿಡಿಯೊದಲ್ಲಿ, ದಷ್ಟಪುಷ್ಟವಾದ ಮೈಕಟ್ಟಿನ ವ್ಯಕ್ತಿಯೊಬ್ಬರು ದಪ್ಪ ಹಗ್ಗವನ್ನು ಎಳೆಯಲು ಹೆಣಗಾಡಿದ್ದಾರೆ. ಅವರು ಹೆಣಗಾಡುವುದನ್ನು ನೋಡಿದಾಗ ಇನ್ನೊಂದು ಬದಿಯಲ್ಲಿ ನಿಂತ ವ್ಯಕ್ತಿ ಇವರಿಗಿಂತ ಶಕ್ತಿಶಾಲಿ ಎಂಬುದು ತಿಳಿಯುತ್ತದೆ. ಆದರೆ ಹಗ್ಗದ ಇನ್ನೊಂದು ತುದಿಯನ್ನು ಹಿಡಿದವರು ಯಾರು ಎಂಬ ಪ್ರಶ್ನೆ ಕಾಡುತ್ತಿತ್ತು.

ಎಷ್ಟೇ ಜೋರಾಗಿ ಎಳೆದರೂ ಎದುರಾಳಿಯನ್ನು ಸೋಲಿಸಲು ಆಗದೇ. ಹಗ್ಗ ಎಳೆದು ಎಳೆದು ಆಯಾಸದಿಂದ ವ್ಯಕ್ತಿಯ ಮುಖ ಕೆಂಪಗಾಗಿತ್ತು. ಕೊನೆಗೆ ಎದುರಾಳಿಯ ಕಡೆಗೆ ಕ್ಯಾಮೆರಾ ತಿರುಗಿದಾಗ ಎಲ್ಲರೂ ಶಾಕ್‌ ಆಗಿದ್ದಾರೆ. ಎದುರಾಳಿ ಮತ್ಯಾರೂ ಅಲ್ಲ ಮೃಗಾಲಯದಲ್ಲಿರುವ ಸಿಂಹಿಣಿ! ಈ ವಿಡಿಯೊ ಕಂಡು ನೆಟ್ಟಿಗರು ಆಘಾತಗೊಂಡಿದ್ದಾರೆ. ಈ ವಿಡಿಯೊ ಈಗಾಗಲೇ 11.6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಹೆಣ್ಣು ಸಿಂಹವು 270-400 ಪೌಂಡ್ ತೂಕವಿರುತ್ತದೆ. ಆದ್ದರಿಂದ ಅದನ್ನು ಎಳೆಯುವುದು ತುಂಬಾ ಕಷ್ಟ” ಎಂದು ನೆಟ್ಟಿಗರರೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:ಪ್ರೀತಿಯ ಶ್ವಾನಗಳಿಗಾಗಿ ಈತ ಮಾಡಿದ ಕೆಲಸ ನೋಡಿ ಶಾಕ್‌ ಆದ ನೆಟ್ಟಿಗರು- ವಿಡಿಯೊ ನೋಡಿ!

“ಕೊನೆಯಲ್ಲಿ ನಾನು ಅದನ್ನು ನಿರೀಕ್ಷಿಸಿರಲಿಲ್ಲ” ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ನಾನು ಖಂಡಿತವಾಗಿಯೂ ದೊಡ್ಡ ಪ್ರಾಣಿ ಇದೆ ಎಂದು ನಿರೀಕ್ಷಿಸುತ್ತಿದ್ದೆ” ಎಂದಿದ್ದಾರೆ.