Monday, 12th May 2025

Viral Video: ನ್ಯೂ ಇಯರ್‌ ಪಾರ್ಟಿ ಮಾಡಿ ಕುಡಿದ ಮತ್ತಿನಲ್ಲಿ ಫುಟ್‌ಪಾತ್‌ ಮೇಲೆ ಬಿದ್ದ ಮಹಿಳೆ ಪೊಲೀಸ್‌ ಅಧಿಕಾರಿಗೆ ಹೀಗಾ ಮಾಡೋದು?!

Viral Video

ಬೆಂಗಳೂರು: ಹೊಸ ವರ್ಷವನ್ನು ಸ್ವಾಗತಿಸಲು ಪಾರ್ಟಿಗಳನ್ನು ಆಯೋಜಿಸಿ ಕುಣಿದು ಕುಪ್ಪಳಿಸಲಾಗುತ್ತದೆ. ಅದರಲ್ಲೂ ಯುವ ಜನಾಂಗ ಹೊಸ ವರ್ಷಗಳಂದು ಡ್ರಿಂಕ್ಸ್ ಪಾರ್ಟಿಗಳನ್ನು ಮಾಡುವುದರ ಮೂಲಕ ಪಬ್‍ಗಳಲ್ಲಿ ಮಜಾ ಉಡಾಯಿಸುತ್ತಾರೆ. ಈ ಸಂದರ್ಭದಲ್ಲಿ ಹುಡುಗರು, ಹುಡುಗಿಯರು ಎನ್ನದೇ ಎಲ್ಲರೂ ನಶೆಯಲ್ಲಿ ತೇಲಾಡುತ್ತಾರೆ. ಇದೀಗ ಹೊಸ ವರ್ಷದ ಮುನ್ನಾದಿನದಂದು ಕುಡಿದ ಮತ್ತಿನಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ಫುಟ್‌ಪಾತ್ ಮೇಲೆ ಬಿದ್ದು ಒದ್ದಾಡಿದ್ದಲ್ಲದೇ  ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಒದ್ದ ಘಟನೆ ಕೋರಮಂಗಲದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಬೆಂಗಳೂರಿನ ಕೋರಮಂಗಲದ ಬೀದಿಯಲ್ಲಿ ಈ ಘಟನೆ ನಡೆದಿದ್ದು, 2025ರ ಹೊಸ ವರ್ಷದ ಆಚರಣೆಯ ಅಂಗವಾಗಿ  ರೆಕಾರ್ಡ್ ಮಾಡಿದ ಈ ವೈರಲ್ ವಿಡಿಯೊದಲ್ಲಿ, ಪಾರ್ಟಿಗೆ ಹೋದವರು ಬೀದಿಗಳಲ್ಲಿ ಕುಡಿದು ತೂರಾಡಿದ್ದಾರೆ. ಅದರಲ್ಲೂ  ಮಹಿಳೆಯೊಬ್ಬಳು ಮದ್ಯದ ಅಮಲಿನಲ್ಲಿ ಪೊಲೀಸ್ ಅಧಿಕಾರಿಗಳನ್ನು ಒದೆಯುವುದನ್ನು ಈ ವಿಡಿಯೊದಲ್ಲಿ ಸೆರೆಯಾಗಿದೆ. ಅಪರಿಚಿತ ಮಹಿಳೆ ಕುಡಿದ ಅಮಲಿನಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದಳು. ಆಗ ಅಲ್ಲಿಗೆ ಬಂದ ಪೊಲೀಸರು ಅವಳಿಗೆ ಸಹಾಯ ಮಾಡಲು ಪ್ರಯತ್ನಿಸಿದಾಗ ಕುಡಿದ ಮತ್ತಿನಲ್ಲಿದ್ದ ಮಹಿಳೆ ಅವರ ಕೃತ್ಯಗಳನ್ನು ಪ್ರತಿರೋಧಿಸಿದ್ದಾಳೆ ಮತ್ತು ನೆಲದ ಮೇಲೆ ಮಲಗಿಕೊಂಡೇ ಅವರನ್ನು ಕಾಲಿನಿಂದ ಜಾಡಿಸಿದ್ದಾಳೆ.

ಕುಡಿತದ ಅಮಲಿನಲ್ಲಿದ್ದ ಮಹಿಳೆಯ ನಡವಳಿಕೆಯನ್ನು ‘ಲೋಕೋ’ ಎಂಬ ಸೋಶಿಯಲ್ ಮೀಡಿಯಾ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಹೊಸ ವರ್ಷದ ಮುನ್ನಾದಿನದಂದು ನಗರದ ಸಂಭ್ರಮಾಚರಣೆಯನ್ನು ಪ್ರದರ್ಶಿಸುವ ಸಲುವಾಗಿ ಮಾಡಲಾದ ಈ ವಿಡಿಯೊದಲ್ಲಿ ಮಹಿಳೆಯೊಬ್ಬರು ನೆಲಕ್ಕೆ ಬಿದ್ದು ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಸ್ಥಳದಲ್ಲೇ ಒದೆ ನೀಡಿದ್ದು ರೆಕಾರ್ಡ್ ಆಗಿದೆ.

ಪೊಲೀಸರಲ್ಲಿ ಒಬ್ಬರು ಕೋಲನ್ನು ಹಿಡಿದು ನಿಂತಿದ್ದರೆ, ಇನ್ನೊಬ್ಬರು ಈ ಮಹಿಳೆಯ ಕೈಯನ್ನು ಹಿಡಿದಿದ್ದಾರೆ. ಮಹಿಳೆಗೆ ತನ್ನನ್ನು ನಿಯಂತ್ರಿಸಲು ಅಥವಾ ಸಮತೋಲನಗೊಳಿಸಲು ಸಾಧ್ಯವಾಗಲಿಲ್ಲ. ಕುಡಿದ ಮತ್ತಿನಲ್ಲಿದ್ದ ಮಹಿಳೆ ಈ ರೀತಿಯಾಗಿ ವರ್ತಿಸಿದ್ದಾಳೆ.

ಈ ಸುದ್ದಿಯನ್ನೂ ಓದಿ:ಇವೆಲ್ಲ: ಹೊಸ ವರ್ಷಕ್ಕೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ʼಗರ್ಲ್‌ಫ್ರೆಂಡ್‌ʼ ಆರ್ಡರ್ ಮಾಡಿದ ಭೂಪ!

ಕಳೆದ ವರ್ಷವೂ ನಗರದ ಪಾರ್ಟಿ ಪ್ರದೇಶದಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. 2024 ಅನ್ನು ಸ್ವಾಗತಿಸುವ ಯುವಕರ ವೈರಲ್ ವಿಡಿಯೊಗಳಲ್ಲಿ ಕೋರಮಂಗಲದ ಬೀದಿಗಳಲ್ಲಿ ಕುಡಿದು ಗಲಾಟೆ ಮಾಡುವುದನ್ನು ರೆಕಾರ್ಡ್ ಮಾಡಲಾಗಿತ್ತು. ಬೌನ್ಸರ್‌ಗಳು ಮತ್ತು ಪೊಲೀಸ್ ತಂಡಗಳು ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದಾಗ ಯುವಕರು ಮತ್ತು ಮಹಿಳೆಯರು ಇಬ್ಬರೂ ಕುಡಿದ ಸ್ಥಿತಿಯಲ್ಲಿ ರಸ್ತೆಗಳಲ್ಲಿ ಮಲಗಿರುವುದನ್ನು ಹಿಂದಿನ ದೃಶ್ಯಗಳು ತೋರಿಸಿವೆ.