ನವದೆಹಲಿ: ಇತ್ತೀಚೆಗೆ ಕೋತಿಯೊಂದು ಹನುಮಂತನ ದೇವಾಲಯದಲ್ಲಿ ಹನುಮಾನ್ ದೇವರ ವಿಗ್ರಹದ ಮುಂದೆ ಕುಳಿತು, ದೇವರಿಗೆ ಅರ್ಪಿಸಿದ ಹಣ್ಣನ್ನು ತಿಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವೈರಲ್ ವಿಡಿಯೊದಲ್ಲಿ ಹನುಮಾನ್ ದೇವಾಲಯದ ಒಳಗೆ ಕೋತಿ ಶಾಂತವಾಗಿ ಕುಳಿತು ಹನುಮಂತನಿಗೆ ಅರ್ಪಿಸಿದ ಪೇರಳೆ ಹಣ್ಣನ್ನು ತಿಂದಿದೆ. ಹಾಗೇ ಕೋತಿಯು ದೇವರಿಗೆ ಅರ್ಪಿಸಿದ ಹೂವಿನ ಹಾರವನ್ನು ಹೋಲುವ ಹೂವಿನ ಹಾರವನ್ನು ಧರಿಸಿದೆ. ಹಾಗಾಗಿ ಕೋತಿಯನ್ನು ಸಹ ದೇವಾಲಯದಲ್ಲಿ ಪೂಜಿಸಲಾಗಿದೆ. ಅದನ್ನು ಭಕ್ತರು ಭಗವಾನ್ ಹನುಮಾನ್ ಎಂದು ನಂಬಿದ್ದಾರೆ. ಹಾಗಾಗಿ ಸ್ಥಳೀಯರು ಅಥವಾ ದೇವಾಲಯದ ಅರ್ಚಕರು ಪ್ರತಿದಿನ ಕೋತಿಯನ್ನು ನೋಡಿದಾಗ ಅದಕ್ಕೆ ಪ್ರತಿದಿನ ಹಣ್ಣುಗಳು ಮತ್ತು ಹೂವುಗಳನ್ನು ಅರ್ಪಿಸುವ ಮೂಲಕ ಅದನ್ನು ಪೂಜಿಸುತ್ತಾರೆ.
ವಿಶೇಷವೆಂದರೆ, ದೇವಾಲಯದ ಆವರಣದಲ್ಲಿ ಕೋತಿ ಶಾಂತಿಯುತವಾಗಿ ಕುಳಿತಿರುವ ವೀಡಿಯೊ ಇದೊಂದೇ ಅಲ್ಲ. ಅದರ ಜೊತೆಗೆ ಕೋತಿ ಅಲ್ಲಿ ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಿರುವ ಅನೇಕ ವಿಡಿಯೊಗಳಿವೆ. ವಿಡಿಯೊವೊಂದರಲ್ಲಿ, ಪ್ರಾಣಿಯು ಹನುಮಂತನ ಮುಖ್ಯ ಆಯುಧವಾದ ‘ಗಧೆʼಯನ್ನು ಹಿಡಿದುಕೊಂಡು ಕುಳಿತಿದೆ.
ಹನುಮಂತನಿಗೆ ಅರ್ಪಿಸಿದ ಹಣ್ಣನ್ನು ಕೋತಿ ತಿನ್ನುತ್ತಿರುವ ವಿಡಿಯೊ ಮತ್ತು ಕೋತಿಗಳ ಇತರ ವಿಡಿಯೊಗಳು ನೆಟ್ಟಿಗರ ಗಮನವನ್ನು ಸೆಳೆದಿವೆ. ಹಾಗಾಗಿ ನೆಟ್ಟಿಗರು “ಜೈ ಶ್ರೀ ರಾಮ್” ಮತ್ತು “ಜೈ ಹನುಮಾನ್” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ಸ್ಟಾಗ್ರಾಂ ಪೇಜ್ ಪೂರ್ತಿ ಈ ಘೋಷಣೆಗಳೇ ತುಂಬಿ ಹೋಗಿವೆ.
ಇದನ್ನೂ ಓದಿ:ಕೊರಿಯನ್ ಪತಿ-ಇಂಡಿಯನ್ ಪತ್ನಿ…ಇವರಿಬ್ಬರ ಕ್ಯೂಟ್ ಸಂಭಾಷಣೆ ನೋಡಿದ್ರೆ ನಗು ತಡೆಯೋಕ್ಕಾಗಲ್ಲಾ! ವಿಡಿಯೊ ಇದೆ
ಇಂತಹ ವಿಚಿತ್ರ ಘಟನೆಗಳು ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ನಟ ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರ ತೆರೆಗೆ ಬಂದಾಗ ಚಿತ್ರದ ಮುಂಜಾನೆಯ ಪ್ರದರ್ಶನಗಳಿಗಾಗಿ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಮುಗಿಬಿದ್ದಿದ್ದರು. ಆ ವೇಳೆ ಚಿತ್ರಮಂದಿರದ ದೊಡ್ಡ ಪರದೆಯ ಮೇಲೆ ಕೋತಿ ಒಂದು ಕುಳಿತು ಆಟವಾಡಿದ್ದು, ಆಗ ಅಭಿಮಾನಿಗಳು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿದ್ದಾರೆ. ಬಹಳಷ್ಟು ಬಳಕೆದಾರರು ಚಿತ್ರಮಂದಿರದ ಈ ವಿಡಿಯೊವನ್ನು ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಅಂದು ವೈರಲ್ ಆಗಿತ್ತು.