Wednesday, 14th May 2025

Viral Video: ನನ್ನ ಬಾಯ್‌ಫ್ರೆಂಡ್‌ ಸಬ್ ಇನ್ಸ್‌ಪೆಕ್ಟರ್‌… ಮೆಟ್ರೋದಲ್ಲಿ ಅವಾಜ್‌ ಹಾಕಿದ ಹುಡುಗಿ! ವಿಡಿಯೊ ನೋಡಿ

Viral Video

ನವದೆಹಲಿ: ಇತ್ತೀಚೆಗೆ ದೆಹಲಿ ಮೆಟ್ರೋ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಅದೇ ರೀತಿ ಇತ್ತೀಚೆಗೆ ನಡೆದ ಜಗಳದಲ್ಲಿ, ಹುಡುಗಿಯೊಬ್ಬಳು ತನ್ನ ಗೆಳೆಯ ದೆಹಲಿ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್‌ ಎಂದು ಹೇಳಿಕೊಂಡು ಮಹಿಳಾ ಪ್ರಯಾಣಿಕರಿಗೆ ಬೆದರಿಕೆ ಹಾಕಿದ್ದಾಳೆ.  ರೈಲಿನಲ್ಲಿ ತೀವ್ರ ವಾಗ್ವಾದದ ಸಮಯದಲ್ಲಿ ಅಪರಿಚಿತ ಹುಡುಗಿಯೊಬ್ಬಳು ಈ ರೀತಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಮಹಿಳೆಯನ್ನು ಜೈಲಿಗೆ ಹಾಕಲು ತನ್ನ ಗೆಳೆಯನನ್ನು ಕರೆಯಬೇಕೇ ಎಂದು ಬೆದರಿಸಿದ್ದಾಳೆ.  ಆದರೇ  ಹುಡುಗಿಯ ಬೆದರಿಕೆಗಳಿಗೆ ಆ ಮಹಿಳೆ ತಲೆಕೆಡಿಸಿಕೊಳ್ಳಲಿಲ್ಲ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದಿದೆ “ನನ್ನ ಬಾಯ್‌ಫ್ರೆಂಡ್‌ ದೆಹಲಿ ಪೊಲೀಸ್‍. ನಾನು ಅವನನ್ನು ಕರೆಯಬೇಕೇ?” ಎಂದು ಜಗಳದ ನಡುವೆ ಹುಡುಗಿ ಬೆದರಿಕೆ ಹಾಕಿದ್ದಾಳೆ. ಆದರೆ ಮಹಿಳೆ ಇದಕ್ಕೆ ಕ್ಯಾರೆ ಮಾಡದೇ ಅವನಿಗೆ ಕರೆ ಮಾಡಿ ಅವನನ್ನು ಇಲ್ಲಿಗೆ ಕರೆಯುವಂತೆ ಹೇಳಿದ್ದಾಳೆ. ಈ ಜಗಳ ಏಕೆ ಪ್ರಾರಂಭವಾಯಿತು ಎಂಬುದರ ಹಿಂದಿನ ಕಾರಣ ಸರಿಯಾಗಿ ತಿಳಿದಿಲ್ಲ. ಆದರೆ ಹುಡುಗಿ ಮಾತ್ರ ತನ್ನ ಸಂಗಾತಿ ಪೊಲೀಸ್‍ ಎಂದು ಕಿರುಚುತ್ತಾ ಸಹ ಪ್ರಯಾಣಿಕರು ಮತ್ತು ಸೋಶಿಯಲ್ ಮೀಡಿಯಾ ವೀಕ್ಷಕರ ಗಮನ ಸೆಳೆದಿದ್ದಾಳೆ.

ದೆಹಲಿ ಮೆಟ್ರೋ ಸೇವೆಯ ಅವ್ಯವಸ್ಥೆ ಮತ್ತು ಜಗಳಗಳ ಹಲವಾರು ವಿಡಿಯೊಗಳು ಈಗಾಗಲೇ ಸಿಕ್ಕಾಪಟ್ಟೆ ವೈರಲ್‌ ಆಗಿವೆ. ಇತ್ತೀಚೆಗಷ್ಟೆ ಇಬ್ಬರು ಮಹಿಳೆಯರು ಮೆಟ್ರೋದಲ್ಲಿ ಜಗಳವಾಡಿದ ವಿಡಿಯೊ ಎಲ್ಲರ ಗಮನಸೆಳೆದಿತ್ತು.ಜಗಳ ಅತೀರೇಕಕ್ಕೆ ಹೋಗಿ ರೈಲು ಮುಂದಿನ ನಿಲ್ದಾಣದಲ್ಲಿ ನಿಂತಾಗ ಒಬ್ಬರು ಇನ್ನೊಬ್ಬರನ್ನು ಮೆಟ್ರೋದಿಂದ ಹೊರಗೆ ತಳ್ಳಿದ ವಿಡಿಯೊ ಕೂದ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿತ್ತು. ಹಾಗೇ ದೆಹಲಿ ಮೆಟ್ರೋದಲ್ಲಿ, ವ್ಯಕ್ತಿಯೊಬ್ಬ ಸಹ ಪ್ರಯಾಣಿಕನ ಮುಖಕ್ಕೆ ಚಪ್ಪಲಿಯಿಂದ ಹೊಡೆದಿದ್ದಾನೆ. ನಂತರ ಆ ವ್ಯಕ್ತಿಯನ್ನು ಕಪಾಳಮೋಕ್ಷ ಮಾಡಿ ನೆಲಕ್ಕೆ ತಳ್ಳಲಾಯಿತು. ಕೂಡಲೇ ಪ್ರಯಾಣಿಕರೊಬ್ಬರು ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಚೀನಾದ ಈ ರೆಸ್ಟೋರೆಂಟ್‌ನಲ್ಲಿ ವಿಚಿತ್ರ ಮೆನು ಕಾರ್ಡ್‌- ಅಂತಹದ್ದೇನಿದೆ ಅಂತೀರಾ? ಹಾಗಿದ್ರೆ ಇಲ್ಲಿ ನೋಡಿ

ಕೆಲವು ಸಮಯದಿಂದ, ಮೆಟ್ರೋದಲ್ಲಿ ಇಂತಹ ಚರ್ಚೆಗಳು ಮತ್ತು ವಿವಾದಗಳು ವೇಗವಾಗಿ ಹೆಚ್ಚುತ್ತಿವೆ. ಇದು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುವುದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯತೆ ಮತ್ತು ಶಿಸ್ತಿನ ಕೊರತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.