Monday, 12th May 2025

Viral Video: ದುಡ್ಡು ಕೊಡದೇ ಪೆಟ್ರೋಲ್ ಪಂಪ್‍ನಿಂದ ಕಿಲಾಡಿ ಡ್ರೈವರ್‌ ಎಸ್ಕೇಪ್‌! ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

Viral Video

ನವದೆಹಲಿ: ಪೆಟ್ರೋಲ್ ಬೆಲೆ ಹೆಚ್ಚಳವಾಗುತ್ತಲೆ ಇದೆ. ಆದರೆ ಇಲ್ಲೊಬ್ಬ ವ್ಯಕ್ತಿ ಪೆಟ್ರೋಲ್ ಹಾಕಿದ ಬಳಿಕ ಹಣ ನೀಡದೆ ಕಾರಿನ ಜೊತೆ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಆದರೆ ಸಮಯಕ್ಕೆ ಸರಿಯಾಗಿ ಬಂದ ಪೊಲೀಸ್ ವ್ಯಾನ್ ಆತನನ್ನು ಬೆನ್ನಟ್ಟಿ ಹೋಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ಪೆಟ್ರೋಲ್ ಪಂಪ್‍ ಬಳಿ ಸಿಬ್ಬಂದಿ ವ್ಯಕ್ತಿಯೊಬ್ಬನ ಕಾರಿಗೆ ಪೆಟ್ರೋಲ್ ತುಂಬಿಸಿ ಹಣ ಪಾವತಿಸಲು ಹೇಳಿದ್ದಾರೆ. ನಂತರ ಆ ಚಾಲಕ ಹಣ ಪಾವತಿಸುವಂತೆ ನಾಟಕ ಮಾಡುತ್ತಾ ಸ್ಕ್ಯಾನರ್ ಹುಡುಕುತ್ತಾ ಕಾರಿನಿಂದ ಹೊರಬಂದಿದ್ದಾನೆ. ಆಗ ಸಿಬ್ಬಂದಿ ಟ್ಯಾಂಕ್ ತುಂಬಿಸುತ್ತ ವಾಹನದ ಬಳಿ ನಿಂತಿದ್ದಾಗ, ಚಾಲಕ ಬೇಗನೆ ತನ್ನ ಕಾರಿನೊಳಗೆ ಹೋಗಿ ಕುಳಿತು ಸಿಬ್ಬಂದಿಯನ್ನು ಗೊಂದಲಕ್ಕೀಡು ಮಾಡಿ ಅಲ್ಲಿಂದ ಹೊರಟುಹೋಗಿದ್ದಾನೆ. ಆದರೆ ಆಚಾನಕ್‍ ಆಗಿ ಹಿಂದಿನಿಂದ ಬಂದ ಪೊಲೀಸ್ ವ್ಯಾನ್‍ ಆ ಕಾರನ್ನು ಬೆನ್ನಟ್ಟಿತ್ತು.

ಈ ವಿಡಿಯೊವನ್ನು @gharkekalesh ಎಂಬ ಎಕ್ಸ್ ಹ್ಯಾಂಡಲ್ ಹಂಚಿಕೊಳ್ಳಲಾಗಿದೆ.  ಈ ಪೇಜ್‍ ಯಾವಾಗಲೂ  ಈ ತರಹದ ವಿಡಿಯೊಗಳನ್ನು  ಹಂಚಿಕೊಳ್ಳುವುದರ ಮೂಲಕ  ಹೆಸರುವಾಸಿಯಾಗಿದೆ. “ಹಣ ನೀಡದೆ ಕಾರು ಪರಾರಿಯಾಗಲು ಪ್ರಯತ್ನಿಸಿತು, ಆದರೆ ಪೊಲೀಸರು ಸಮಯಕ್ಕೆ ಸರಿಯಾಗಿ ಬಂದರು” ಎಂದು ಹ್ಯಾಂಡಲ್‍ನಲ್ಲಿ  ಬರೆದಿದೆ.

ಈ ವಿಡಿಯೊ 6,58,000 ಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ.  ಅನೇಕರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. “ಇಲ್ಲಿರುವ ಬಹಳಷ್ಟು ಜನರು ಹೇಗಾದರೂ ಕಾರನ್ನು ಖರೀದಿಸುತ್ತಾರೆ, ಆದರೆ  ಡೀಸೆಲ್ ಖರೀದಿಸಲು ಸಾಧ್ಯವಿಲ್ಲ. ನಾನು ದ್ವಿಚಕ್ರ ವಾಹನದಲ್ಲಿ ಟ್ಯಾಂಕ್ ತುಂಬಾ ತುಂಬಿಸುತ್ತೇನೆ, ಆದರೆ  ಕಾರನ್ನು ಹೊಂದಿರುವ ಯಾರೋ ಒಬ್ಬರು ಕೇವಲ 100 ರೂ.ಗಳ ಡೀಸೆಲ್ ಹಾಕುತ್ತಾರೆ” ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ‘ಇದು ದಕ್ಷಿಣದ ಸಿನಿಮಾ ಮಾದರಿಯ ಸಿನಿಮಾದಂತಿದೆ. ಬ್ರೋ ಹಿಂದೆ ನೋಡಬೇಕಿತ್ತು!” ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಶಿಕ್ಷೆ ಮುಗಿಸಿ ಜೈಲಿನಿಂದ ಹೊರ ಬರ್ತಿದ್ದಂತೆ ಕಾರಾಗೃಹದ ಗೇಟ್ ಬಳಿ ಈ ಭೂಪ ಮಾಡಿದ್ದೇನು ಗೊತ್ತಾ?ವಿಡಿಯೊ ಇದೆ

“ಅವರು ಸೈರನ್ ಅನ್ನು ಆನ್ ಮಾಡಿದ್ದರೆ ಅವನಿಗೆ ತಿಳಿಯುತ್ತಿತ್ತು” ಎಂದು ಮೂರನೇ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. “ಇಲ್ಲ. ಇದು ಪೆಟ್ರೋಲ್ ಹಾಕಿಸಿಕೊಂಡು ಪಾವತಿ ಮಾಡದ ಪ್ರಕರಣವಲ್ಲ. ಬೇರೆ ಯಾವುದೋ  ಪ್ರಕರಣದಲ್ಲಿ ಪೊಲೀಸರು ಅವರನ್ನು ಬೆನ್ನಟ್ಟಿದ್ದಾರೆ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.