Saturday, 10th May 2025

Viral Video: ಶಾಲಾ ಮಕ್ಕಳ ಬಾಯಲ್ಲಿ ಅನುರಣಿಸಿದ ಗಾಯಕ ದಿಲ್ಜಿತ್ ದೋಸಾಂಜ್ ಹಿಟ್ ಹಾಡು; ಹೃದಯಸ್ಪರ್ಶಿ ವಿಡಿಯೊ ವೈರಲ್

Viral Video

ದಿಲ್ಜಿತ್ ದೋಸಾಂಜ್ (Diljit Dosanjh) ಅವರು ತಮ್ಮ ಸುಮಧುರ ಗಾಯನದ ಮೂಲಕ ದೇಶಾದ್ಯಂತ ಅನೇಕ ಜನರ ಹೃದಯಗಳನ್ನು ಗೆದ್ದಿದ್ದಾರೆ. ಅವರ ಅದ್ಭುತ ಪ್ರದರ್ಶನಗಳಿಂದ ಹಿಡಿದು ಅಭಿಮಾನಿಗಳೊಂದಿಗಿನ ಮರೆಯಲಾಗದ ಕ್ಷಣಗಳವರೆಗೆ, ಗಾಯಕ ಸಂಚಲನ ಸೃಷ್ಟಿಸಿದ್ದಾರೆ. ಹಾಗಾಗಿ ಅವರ ಹಾಡುಗಳನ್ನು ಕೇವಲ ಸಂಗೀತ ಕಛೇರಿಗಳಲ್ಲಿ ಗಾಯಕರು ಮಾತ್ರವಲ್ಲ ಶಾಲಾ ಮಕ್ಕಳು ಕೂಡ ಹಾಡುತ್ತಾರೆ. ಇತ್ತೀಚೆಗೆ  ಶಾಲಾ ವಿದ್ಯಾರ್ಥಿಗಳು ಅವರ ಹಿಟ್ ಹಾಡುಗಳಲ್ಲಿ ಒಂದನ್ನು ಹಾಡುವ ಹೃದಯಸ್ಪರ್ಶಿ ವಿಡಿಯೊ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ಗಳಲ್ಲಿ ವೈರಲ್(Viral Video) ಆಗಿದೆ.

ಚಂಡೀಗಢದ ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ಕಾರ್ಯಕ್ರಮವೊಂದರ  ಚಿತ್ರೀಕರಿಸಲಾದ ವಿಡಿಯೊದಲ್ಲಿ, ವಿದ್ಯಾರ್ಥಿಗಳು ದಿಲ್ಜಿತ್ ಅವರ ಹಿಟ್ ಹಾಡು ‘ಬಾರ್ನ್ ಟು ಶೈನ್’ ಅನ್ನು ಖುಷಿಯಿಂದ ಹಾಡಿದ್ದಾರೆ.  ಹುಡುಗರು ಮತ್ತು ಹುಡುಗಿಯರು ಒಟ್ಟಿಗೆ ಸೇರಿ ಸಿಂಕ್ರೊನೈಸೇಶನ್‍ನಲ್ಲಿ ಸುಂದರವಾಗಿ ಹಾಡಿದ್ದರಿಂದ ಅದು ಅದ್ಭುತವಾಗಿ ಮೂಡಿಬಂದಿದೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಜನರ ಗಮನ ಸೆಳೆಯಿತು. ಸೋಶಿಯಲ್ ಮೀಡಿಯಾ ಬಳಕೆದಾರರು ವಿದ್ಯಾರ್ಥಿಗಳು ಉತ್ಸಾಹದಿಂದ ಹಾಡಿದ್ದಕ್ಕೆ ಮತ್ತು ನಿರಂತರವಾಗಿ ಖ್ಯಾತಿ ಗಳಿಸುತ್ತಿರುವ ದಿಲ್ಜಿತ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು “ಎಲ್ಲ ಶಾಲೆಗಳಲ್ಲಿ ಈ ಹಾಡನ್ನು ಹಾಡಬೇಕೆಂದು ನಾನು ಬಯಸುತ್ತೇನೆ” ಎಂದಿದ್ದಾರೆ. ” ಅವರು ಅದನ್ನು ಪ್ರಾರ್ಥನಾ ಗೀತೆಯಂತೆ ಹಾಡುತ್ತಿದ್ದಾರೆ” ಎಂದು ವೀಕ್ಷಕರೊಬ್ಬರು ತಮಾಷೆಯಾಗಿ ಬರೆದರೆ, ಇನ್ನೊಬ್ಬರು “ಅಸೆಂಬ್ಲಿ ಪ್ರಾರ್ಥನೆ” ಎಂದು ಸೇರಿಸಿದ್ದಾರೆ. ಕೊನೆಯದಾಗಿ, ಒಬ್ಬ ವ್ಯಕ್ತಿಯು, “ಶಾಲೆಯಲ್ಲಿ, ಪಠ್ಯೇತರ ಚಟುವಟಿಕೆಗಳಲ್ಲಿ ಇದು ಏಕೆ ಬೇಕು?” ಎಂದು ಪ್ರಶ್ನಿಸಿದ್ದಾರೆ.

ದಿಲ್-ಲುಮಿನಾಟಿ ಬಗ್ಗೆ ಮಾತನಾಡುವುದಾದರೆ, ಪಂಜಾಬಿ ಗಾಯಕನ ಬಹು ನಿರೀಕ್ಷಿತ ಸಂಗೀತ ಕಛೇರಿ ದಿಲ್ ಲುಮಿನಾಟಿ ಅಕ್ಟೋಬರ್ 26ರಂದು ದೆಹಲಿಯಲ್ಲಿ ಭರ್ಜರಿಯಾಗಿ ಪ್ರಾರಂಭವಾಯಿತು. ಗಾಯಕ ತನ್ನ ಮೊದಲ ಹಾಡಿನ ನಂತರ ಭಾರತೀಯ ಧ್ವಜವನ್ನು ಬೀಸುವಾಗ ಮರೆಯಲಾಗದ ಕ್ಷಣವನ್ನು ಸೃಷ್ಟಿಸಿದ್ದಾರೆ. ಆಗ ಜನಸಮೂಹದಿಂದ ದೊಡ್ಡ ಹರ್ಷೋದ್ಗಾರಗಳು ಕೇಳಿಬಂದವು. ದಿಲ್ಜಿತ್ ತನ್ನ ತಲೆಯ ಮೇಲೆ ಧ್ವಜವನ್ನು ಬೀಸುತ್ತಾ, “ಯೇ ಮೇರಾ ದೇಶ್, ಮೇರಾ ಘರ್ ಹೈ (ಇದು ನನ್ನ ದೇಶ, ಇದು ನನ್ನ ಮನೆ)” ಎಂದು ಹೇಳಿದ್ದಾರೆ. ಅವರ ಕೆಲವು ಸೂಪರ್‌ ಹಿಟ್‍ ಹಾಡುಗಳಾದ ʼಬಾರ್ನ್ ಟು ಶೈನ್ʼ, ʼಗೋಟ್ʼ, ʼಲೆಮನೇಡ್ʼ, ʼ5 ತಾರಾʼ ಮತ್ತು ʼಡು ಯು ನೋʼ ಇದೇ ರೀತಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದೆ.  ಇದು ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ.

ಇದನ್ನೂ ಓದಿ:”ಬದ್ಲಿ ಬದ್ಲಿ ಲಗೆ” ಹಾಡಿಗೆ ಸಖತ್‌ ಆಗಿ ಹೆಜ್ಜೆ ಹಾಕಿದ ಸಪ್ನಾ ಚೌಧರಿ; ವಿಡಿಯೊ ನೋಡಿ

ಈ ಸಂಗೀತ ಕಛೇರಿ ನವೆಂಬರ್ 3ರಂದು ಜೈಪುರ, ನವೆಂಬರ್ 15ರಂದು ಹೈದರಾಬಾದ್ ಮತ್ತು ನವೆಂಬರ್ 17 ರಂದು ಅಹಮದಾಬಾದ್‍ನಲ್ಲಿ ನಡೆಯುವ ಮೂಲಕ ಭಾರತದಾದ್ಯಂತ ತನ್ನ ಪ್ರಯಾಣವನ್ನು ಮುಂದುವರಿಸಿದೆ. ಹಾಗೇ ನವೆಂಬರ್ 22ರಂದು ಲಖನೌ, ನವೆಂಬರ್ 24ರಂದು ಪುಣೆ ಮತ್ತು ನವೆಂಬರ್ 30ರಂದು ಕೋಲ್ಕತ್ತಾದಲ್ಲಿ ನಡೆಯಿತು. ಡಿಸೆಂಬರ್ 6ರಂದು ಈ ಸಂಗೀತ ಕಛೇರಿ ಬೆಂಗಳೂರಿನಲ್ಲಿ ನಡೆಯಲಿದ್ದು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಡಿಸೆಂಬರ್ 8ರಂದು ಇಂದೋರ್, ಡಿಸೆಂಬರ್ 15ರಂದು ಚಂಡೀಗಢ ಮತ್ತು ಡಿಸೆಂಬರ್ 19ರಂದು ಮುಂಬೈನಲ್ಲಿ ದಿಲ್ಜಿತ್ ಪ್ರದರ್ಶನ ನೀಡಲಿದ್ದಾರೆ. ಈ ಪ್ರವಾಸವು ಡಿಸೆಂಬರ್ 29ರಂದು ಗುವಾಹಟಿಯಲ್ಲಿ ಕೊನೆಗೊಳ್ಳಲಿದ್ದು, ಈ ಮೂಲಕ ಅಭಿಮಾನಿಗಳ ಮನರಂಜಿಸಲಿದೆ.