Wednesday, 14th May 2025

Viral Video: ಚಂಡಮಾರುತ ಅಬ್ಬರಕ್ಕೆ ಹಡಗುಕಟ್ಟೆ ಸಂಪೂರ್ಣ ಧ್ವಂಸ; ಮುಂದೇನಾಯ್ತು? ವಿಡಿಯೊ ನೋಡಿ

Viral Video

ವಾಷಿಂಗ್ಟನ್‌: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಾಂತಾ ಕ್ರೂಜ್ ವಾರ್ಫ್‌ ಹಡಗುಕಟ್ಟೆಯ ಒಂದು ಭಾಗವು ಪ್ರಬಲ ಚಂಡಮಾರುತಕ್ಕೆ ಸಿಲುಕಿ ಹಾನಿಗೊಳಗಾದ ಘಟನೆ ವರದಿಯಾಗಿದೆ. ಅದರೊಳಗಿದ್ದ ಇಬ್ಬರನ್ನು ರಕ್ಷಿಸಲಾಗಿದ್ದು, ಮತ್ತೊಬ್ಬರು ಈಜಿ ಪಾರಾಗಿದ್ದಾರೆ. ಕರಾವಳಿ ಭಾಗಕ್ಕೆ ಚಂಡಮಾರುತದ ಭಾರಿ ಅಲೆ ಅಪ್ಪಳಿಸಿದೆ. ಇದರಿಂದ ನಿರ್ಮಾಣ ಹಂತದಲ್ಲಿದ್ದ ಕ್ಯಾಲಿಫೋರ್ನಿಯಾದ ಹಡಗುಕಟ್ಟೆ ಭಾಗಶಃ ಕುಸಿದು ಈ ಘಟನೆ ಸಂಭವಿಸಿದೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral Video) ಆಗಿದೆ.

ಅಲೆಗಳು ಕರಾವಳಿಗೆ ಅಪ್ಪಳಿಸಿದಾಗ ಹಡಗುಕಟ್ಟೆಯ ಒಂದು ಭಾಗವು ನೀರಿನಲ್ಲಿ ತೇಲುತ್ತಿರುವ ವಿಡಿಯೊ  ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸ್ಯಾನ್ ಫ್ರಾನ್ಸಿಸ್ಕೋದಿಂದ ದಕ್ಷಿಣಕ್ಕೆ 70 ಮೈಲಿ ದೂರದಲ್ಲಿರುವ ಸಾಂತಾ ಕ್ರೂಜ್ ವಾರ್ಫ್ ಬಳಿಯ ನಿವಾಸಿಗಳಿಗೆ ಚಂಡಮಾರುತ ತೀವ್ರಗೊಳ್ಳುತ್ತಿದ್ದಂತೆ ತಗ್ಗು ಬೀಚ್ ಪ್ರದೇಶಗಳಿಂದ ದೂರವಿರಲು ಎಚ್ಚರಿಕೆ ನೀಡಲಾಗಿದೆ. ಅಧಿಕಾರಿಗಳು ಹತ್ತಿರದ ಕ್ಯಾಪಿಟೋಲಾದ ವಾಟರ್ ಫ್ರಂಟ್ ಹೋಟೆಲ್‍ನಲ್ಲಿದ್ದ ಅತಿಥಿಗಳನ್ನು ಸ್ಥಳಾಂತರಿಸಿದ್ದಾರೆ ಮತ್ತು ವ್ಯಾಪಾರಿಗಳಿಗೆ  ಸ್ಥಳದಲ್ಲಿ ಆಶ್ರಯ ಪಡೆಯಲು ಅಥವಾ ಹೊರಹೋಗಲು ಸೂಚನೆ ನೀಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ವೇಳೆ ವಾರ್ಫ್‍ನ ಒಂದು ಭಾಗ ಕುಸಿದ ನಂತರ ಸಿಬ್ಬಂದಿಗಳು ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ ಯಾವುದೇ ಗಂಭೀರ ಗಾಯಗಳು ವರದಿಯಾಗಿಲ್ಲ ಎಂದು ಸಾಂತಾ ಕ್ರೂಜ್ ಮೇಯರ್ ಫ್ರೆಡ್ ಕೀಲಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದ್ದಾರೆ.

Viral Video

ಕಳೆದ ಚಳಿಗಾಲದಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ನಂತರ ವಾರ್ಫ್ ಅನ್ನು ಸರಿಮಾಡಲಾಗಿತ್ತು. ದುರಸ್ತಿಗಾಗಿ ಮುಚ್ಚಲಾಗಿದ್ದ ಕುಸಿದ ವಿಭಾಗದಲ್ಲಿ ವಿಶ್ರಾಂತಿ ಕೊಠಡಿಗಳು ಮತ್ತು ‘ಡಾಲ್ಫಿನ್’ ರೆಸ್ಟೋರೆಂಟ್ ಸೇರಿವೆ.

ಸಾಂತಾ ಕ್ರೂಜ್ ವಾರ್ಫ್ ಅನ್ನು 1914 ರಲ್ಲಿ ನಿರ್ಮಿಸಲಾಯಿತು ಮತ್ತು ‘ದಿ ಲಾಸ್ಟ್ ಬಾಯ್ಸ್’ ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದೆ. ಈ ಕುಸಿತದಿಂದ ಸುಮಾರು 150 ಅಡಿ ಆಳದ ಹಡಗು ನೀರಿಗೆ ಬಿದ್ದಿದೆ. ಅವಶೇಷಗಳಿಂದ ಉಂಟಾಗುವ ಅಪಾಯಗಳಿಂದಾಗಿ ಈ ಪ್ರದೇಶವನ್ನು ಅನಿರ್ದಿಷ್ಟವಾಗಿ ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ಏಕಾಏಕಿ ಕುಸಿದು ಬಿದ್ದ 533 ಮೀ. ಉದ್ದದ ಸೇತುವೆ; ಭೀಕರ ದೃಶ್ಯ ಭಾರೀ ವೈರಲ್‌

ಅಪಾಯಕಾರಿ ಪರಿಸ್ಥಿತಿಗಳಿಂದಾಗಿ ನೀರಿನಿಂದ ದೂರವಿರಲು ರಾಷ್ಟ್ರೀಯ ಹವಾಮಾನ ಸೇವೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.