ಡೆಹ್ರಾಡೂನ್: ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಆನೆಯ ಮೇಲೆ ಹುಲಿಯನ್ನು ಕೂರಿಸಿ ಇಬ್ಬರೂ ಪುರುಷರು ಸವಾರಿ ಮಾಡುವ ವಿಡಿಯೊವೊಂದು ಸಾಕಷ್ಟು ವೈರಲ್ ಆಗುತ್ತಿದ್ದು ಬಳಕೆದಾರರು ಈ ವಿಡಿಯೊ ನೋಡಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ (Viral Video)
ಗುರು ಎಂಬ ಬಳಕೆದಾರರಿಂದ ಈ ವಿಡಿಯೊವನ್ನು ಇತ್ತೀಚೆಗೆ Twitter ನಲ್ಲಿ ಹಂಚಿಕೊಂಡಿದು, ಇದು ಬಿಹಾರದಲ್ಲಿ ನಡೆದ ಘಟನೆ. ಇನ್ನು ಇಂತಹ ಅದ್ಭುತ ದೃಶ್ಯಗಳನ್ನು ಬಿಹಾರದಲ್ಲಿ ಮಾತ್ರ ವೀಕ್ಷಿಸಬಹುದು ಎಂದು ಕ್ಯಾಪ್ಶನ್‌ನಲ್ಲಿ ಬರೆಯಲಾಗಿತ್ತು. ಈ ದೃಶ್ಯ ನೋಡಿದ ಕೆಲವು ನೆಟ್ಟಿಗರು ಬಿಹಾರದಲ್ಲಿ ಯಾವುದೇ ಕಾನೂನುಗಳು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸುವುದಿಲ್ಲ, ಈ ರೀತಿಯ ಹಿಂಸೆ ಇಲ್ಲಿ ಮಾತ್ರ ನೋಡಲು ಸಾಧ್ಯ ಎಂದು ಬಗೆ ಬಗೆಯ ಕಾಮೆಂಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹಲವರು ಮಂದಿ ವಿಡಿಯೊ ನೋಡಿ ಗೊಂದಲಕ್ಕೆ ಒಳಗಾಗಿದ್ದು, ಇದು ನಿಜವೇ ? ಈ ರೀತಿಯೂ ಪ್ರಾಣಿ ಹಿಂಸೆ ಮಾಡುತ್ತಾರೆಯೇ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ವಿಡಿಯೊದಲ್ಲಿ ಏನಿದೆ?
ವಿಡಿಯೊವನ್ನು ಗಮನಿಸಿದಾಗ ಆನೆಯ ಮೇಲೆ ಹುಲಿಯನ್ನು ಕೂರಿಸಿ ಇಬ್ಬರೂ ಪುರುಷರು ಸವಾರಿಯನ್ನು ಮಾಡುತ್ತಿದ್ದಾರೆ.ಈ ನಡುವೆ ಹುಲಿಯ ಕಿವಿಗಳನ್ನು ಹಿಡಿದು ತಿರುಗಿಸುವ ದೃಶ್ಯ ಕಂಡು ಬರುತ್ತದೆ. ಆನೆಯು ಸುತ್ತುವರಿದ ಜನರ ಮಧ್ಯೆ ನಿಧಾನವಾಗಿ ನಡೆಯುತ್ತಿದ್ದು, ಕೆಲವು ಪ್ರೇಕ್ಷಕರು ಹುಲಿಯ ಕಾಲುಗಳನ್ನು ಎಳೆಯುವುದನ್ನು ಸಹ ಕಾಣಬಹುದು.
इ बिहार है बाबू यहां उड़ती चिड़िया को भी हल्दी लगा देते हैं!
— गुरु (@guru_ji_ayodhya) December 24, 2024
ऐसे अदभुद नजारे बिहार में ही देखने को मिल सकते है!😂 pic.twitter.com/Y91mivfpwS
ಹಳೆಯ ವಿಡಿಯೊ:
ಆದರೆ ಈ ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಈ ಘಟನೆಯು ಜನವರಿ 2011 ರ ಹಳೆಯ ವಿಡಿಯೊ ಎಂದು ತಿಳಿದು ಬಂದಿದೆ. ಉತ್ತರಾಖಂಡದ ನೈನಿತಾಲ್‌ನಲ್ಲಿ ನಡೆದ ಘಟನೆ ಇದಾಗಿದ್ದು ಹುಲಿ ನರಭಕ್ಷಕ ಎಂದು ವರದಿಯಾಗಿದೆ, ಉತ್ತರಾಖಂಡದ ರಾಮನಗರ ವಿಭಾಗದಲ್ಲಿ ಅರಣ್ಯ ಅಧಿಕಾರಿಗಳು ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ವನದಲ್ಲಿ ಆರು ಜನರ ಸಾವಿಗೆ ಕಾರಣವಾದ ಗಂಡು ಹುಲಿಯನ್ನು ಕೊಂದು ಆನೆಯ ಮೇಲೆ ಸಾಗಿಸಿರುವ ದೃಶ್ಯ ಇದಾಗಿದೆ ಎಂದು ಉಲ್ಲೇಖ ಮಾಡಲಾಗಿದೆ.
ಕಾರ್ಬೆಟ್ ಟೈಗರ್ ರಿಸರ್ವ್ ಬಳಿಯ ಸುಂದರಕಾಲ್ ನ ಗ್ರಾಮಸ್ಥರು ಹುಲಿಯನ್ನು ಕೊಲ್ಲಬೇಕೆಂದು ಪ್ರತಿಭಟನೆ ನಡೆಸಿದ ನಂತರ ರಾಮನಗರ ಅರಣ್ಯ ವಿಭಾಗದಲ್ಲಿನ ಅರಣ್ಯ ಅಧಿಕಾರಿಗಳು ಗಂಡು ಹುಲಿಯನ್ನು ಕೊಂದಿದ್ದಾರೆ ಎಂದು ಉಲ್ಲೇಖಿ ಸಲಾಗಿದೆ. ಆನೆಯ ಮೇಲೆ ಸಾಗಿಸಲ್ಪಟ್ಟ ಹುಲಿ ಸಾವನ್ನಪ್ಪಿದ್ದು, ಈ ವಿಡಿಯೊ ಉತ್ತರಾಖಂಡ್‌ಗೆ ಸಂಬಂಧಿಸಿದ ಹಳೆಯ ವಿಡಿಯೊ ಎಂದು ತಿಳಿದು ಬಂದಿದೆ.
ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ವೈರಲ್ ವಿಡಿಯೊಗೆ ಪ್ರತಿಕ್ರಿಯೆ ನೀಡಿದ್ದು “ಇದು 2011 ರ ಹಳೆಯ ವೀಡಿಯೊ, ಉತ್ತರಾಖಂಡದ ರಾಮನಗರದಲ್ಲಿ ಆದ ಘಟನೆ, ಹುಲಿ ಆರು ಜನರನ್ನು ಕೊಂದ ಕಾರಣ ಹುಲಿಯನ್ನು ಸೆರೆ ಹಿಡಿದು ಗುಂಡು ಹಾರಿಸಿ ಕೊಲ್ಲಲಾಯಿತು. ಹೀಗಾಗಿ ಆನೆಯ ಮೇಲೆ ಸಾಗಿಸಲಾಯಿತು, ಬಹುಶಃ. ವಾಹನಗಳಲ್ಲಿ ಈ ಸ್ಥಳವನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಹುಲಿ ಜೀವಂತವಾಗಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಜೀವ ಉಳಿಸಿಕೊಳ್ಳಲು ಜಿಗಿದ ವಿದ್ಯಾರ್ಥಿಗಳು! ವಿಡಿಯೋ ವೈರಲ್- ಅಷ್ಟಕ್ಕೂ ಆಗಿದ್ದೇನು?