Saturday, 10th May 2025

Viral Video: ಮೊಬೈಲ್‍ನಲ್ಲಿ ಆಮ್ಲೆಟ್‌ ವಿಡಿಯೊ ನೋಡಿ ಪಚೀತಿಗೆ ಸಿಲುಕಿದ ಓಲಾ ಕ್ಯಾಬ್ ಡ್ರೈವರ್!

Viral Video

ಜನನಿಬಿಡ ರಸ್ತೆಯಲ್ಲಿ ಕ್ಯಾಬ್ ಚಾಲನೆ ಮಾಡುವಾಗ ಕ್ಯಾಬ್ ಚಾಲಕನೊಬ್ಬ ಮೊಬೈಲ್‍ನಲ್ಲಿ ಆಮ್ಲೆಟ್ ತಯಾರಿಸುವ ಪಾಕವಿಧಾನದ ವಿಡಿಯೊಗಳನ್ನು ನೋಡಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಗ್ರಾಹಕರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೊವನ್ನು ನೋಡಿ ಚಾಲಕನ ವರ್ತನೆಗಾಗಿ ಓಲಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಈ ವೈರಲ್ ವೀಡಿಯೊಗೆ ಸಂಬಂಧಿಸಿದಂತೆ  ಓಲಾ ಕ್ಯಾಬ್‍ನ ಗ್ರಾಹಕರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಡಾರ್ಕ್ ನೈಟ್ ಎಂಬ ಎಕ್ಸ್ ಬಳಕೆದಾರರು ಈ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಪ್ರಿಯ ಓಲಾ, ನಿಮ್ಮ ಚಾಲಕ ನಮ್ಮ ಜೀವವನ್ನು ಪಣಕ್ಕಿಟ್ಟು ಚಾಲನೆ ಮಾಡುವಾಗ ಆಮ್ಲೆಟ್ ಅನ್ನು ಹೇಗೆ ಬೇಯಿಸಬೇಕೆಂದು ಕಲಿಯುತ್ತಿದ್ದಾನೆ. ನಿಮ್ಮ ಸ್ಕೂಟರ್‌ಗಳು ಈಗಾಗಲೇ ಬೆಂಕಿಗೆ ಆಹುತಿಯಾಗಿವೆ. ಇದು ಕೂಡ ಬೆಂಕಿಗೆ ಆಹುತಿಯಾಗಿ ಶೀಘ್ರದಲ್ಲೇ ಬೂದಿಯಾಗುವ ಮೊದಲು ನೀವು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ. ಕ್ಯಾಬ್ ಚಾಲಕನ ವರ್ತನೆಯನ್ನು ಖಂಡಿಸಿದ ಅವರು, ಓಲಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ವೈರಲ್ ಆಗಿರುವ ವಿಡಿಯೊವನ್ನು ಗಮನಿಸಿದ ಮುಂಬೈ ಪೊಲೀಸರು ಎಕ್ಸ್‌ನಲ್ಲಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. “ದಯವಿಟ್ಟು ನಾವು @MTPHereToHelp ತಿಳಿಸಲು ನಿಖರವಾದ ಸ್ಥಳವನ್ನು ಹಂಚಿಕೊಳ್ಳಿ” ಎಂದು ಮುಂಬೈ ಪೊಲೀಸರ ಅಧಿಕೃತ ಹ್ಯಾಂಡಲ್ ಪ್ರತಿಕ್ರಿಯೆಯಲ್ಲಿ ಬರೆದಿದ್ದಾರೆ.ಕಾನೂನು ಕ್ರಮದ ಬಗ್ಗೆ ಇನ್ನೂ ವರದಿಯಾಗಿಲ್ಲ.

ಕ್ಯಾಬ್ ಚಾಲಕನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಕ್ಯಾಬ್ ಚಾಲಕನ ಅಜಾಗರೂಕತೆಯು ಕಾರಿನಲ್ಲಿದ್ದವರ ಮತ್ತು ರಸ್ತೆಯ ನಾಗರಿಕರ ಜೀವವನ್ನು ಬಲಿ ತೆಗೆದುಕೊಳ್ಳುವ ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ಲೋಕಲ್‌ ಟ್ರೈನ್‌ನಲ್ಲಿ ಕಣ್ಮನ ಸೆಳೆದ ಗಗನಸಖಿ; ಫಿದಾ ಆದ ನೆಟ್ಟಿಗರು-ವಿಡಿಯೊ ನೋಡಿ

ಇತ್ತೀಚಿನ ದಿನಗಳಲ್ಲಿ, ಓಲಾ ಪ್ರಾರಂಭಿಸಿದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಹೊತ್ತಿಕೊಂಡ ವ್ಯಾಪಕ ಘಟನೆಗಳು ನಡೆದಿವೆ. ಓಲಾ ಚಾಲಕರ ಅಜಾಗರೂಕತೆ ಮತ್ತು ಬೇಜವಾಬ್ದಾರಿಯನ್ನು ನೆಟ್ಟಿಗರು ಎತ್ತಿ ತೋರಿಸಿದ್ದಾರೆ.