ಮುಂಬೈ: ಪಂಜಾಬಿ ಗಾಯಕ ಕರಣ್ ಔಜ್ಲಾ ಅವರ ಹಾಡುಗಳು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಇತ್ತೀಚೆಗೆ ಮುಂಬೈಯ ‘ಡ್ಯಾನ್ಸಿಂಗ್ ಕಾಪ್’ ಎಂದು ಕರೆಯಲ್ಪಡುವ ಅಮೋಲ್ ಕಾಂಬ್ಳೆ ಅವರು ಔಜ್ಲಾ ಅವರ ಒಂದು ಹಾಡಿಗೆ ಡ್ಯಾನ್ಸ್ ರೀಲ್ ಮಾಡಿದ್ದಾರೆ. ತಮ್ಮ ಈ ರೀಲ್‍ನಲ್ಲಿ, ಕಾಂಬ್ಳೆ ಅವರು ‘ಆಯೆ ಹಾಯೆ’ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ ಕಾಂಬ್ಳೆ ಅವರು ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಟ್ರೆಂಡಿಂಗ್ ಹಾಡಿಗೆ ತಮ್ಮ ನೃತ್ಯ ಪ್ರದರ್ಶನ ಮಾಡುವಾಗ ಅವರು ಅದ್ಭುತವಾದ ಡ್ಯಾನ್ಸ್ ಸ್ಟೆಪ್‍ಗಳನ್ನು ಪ್ರದರ್ಶಿಸಿದ್ದಾರೆ. ಕ್ಲಾಸಿಕ್ ರಾಕ್ ಸ್ಟೆಪ್‍ಗಳಿಂದ ಹಿಡಿದು ಕೆಲವು ದೇಸಿ ಸ್ಟೆಪ್‍ಗಳವರೆಗೆ ಹಾಡಿನ ಪ್ರತಿ ಸಣ್ಣ ಕ್ಷಣವನ್ನು ಅವರು ಆನಂದಿಸಿದ್ದಾರೆ.
ಕರಣ್ ಔಜ್ಲಾ-ನೇಹಾ ಕಕ್ಕರ್ ಹಾಡಿನ ‘ಆಯೆ ಹಾಯೆ’ ಹಾಡಿಗೆ ಡ್ಯಾನ್ಸ್ ಮಾಡಲು ಪೊಲೀಸ್ ಅಧಿಕಾರಿ ಹೂಡಿ ಮತ್ತು ಕ್ಯಾಶುಯಲ್ ಪ್ಯಾಂಟ್ ಧರಿಸಿದ್ದರು. ಇನ್‌ಸ್ಟಾಗ್ರಾಂನಲ್ಲಿ ರೀಲ್ ಅಪ್‌ಲೋಡ್ ಮಾಡುವಾಗ ಅವರು ಗಾಯಕರನ್ನು ಟ್ಯಾಗ್ ಮಾಡಿದ್ದಾರೆ ಮತ್ತು ನಟಿ ನೋರಾ ಫತೇಹಿ ಅವರನ್ನೂ ಮೆನ್ಶನ್ ಮಾಡಿದ್ದಾರೆ.
ಈ ರೀಲ್ ಈಗ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ವೈರಲ್ ಆಗಿದೆ. ಡಿಸೆಂಬರ್ 28ರಂದು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಲಾದ ಕಾಂಬ್ಳೆ ಅವರ ಡ್ಯಾನ್ಸ್ ವಿಡಿಯೊ ಈಗಾಗಲೇ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ನೂರಾರು ಕಾಮೆಂಟ್‍ಗಳನ್ನು ಪಡೆದಿದೆ.
ಈ ಸುದ್ದಿಯನ್ನೂ ಓದಿ:ಬಾಡಿಗೆಗೆ ಲಭ್ಯವಿದ್ದ ದೇಶದ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ಅಚ್ಚರಿಯ ಮಾಹಿತಿ
ಅವರ ಈ ವಿಡಿಯೊಗೆ ಪ್ರತಿಕ್ರಿಯಿಸಿದ ಜನರು ಕಾಮೆಂಟ್ ವಿಭಾಗದಲ್ಲಿ ‘ಹಾರ್ಟ್’ ಮತ್ತು ‘ಫೈರ್’ ಎಮೋಜಿಗಳನ್ನು ಹಾಕಿದ್ದಾರೆ. ನೆಟ್ಟಿಗರೊಬ್ಬರು ಕಾಂಬ್ಳೆ ಅವರ ಪ್ರದರ್ಶನವನ್ನು “ಅದ್ಭುತ” ಎಂದು ಕರೆಯುವ ಮೂಲಕ ಅವರ ಸ್ಟೆಪ್ ಮತ್ತು ಉತ್ಸಾಹವನ್ನು ಹೊಗಳಿದ್ದಾರೆ. ಇನ್ನೊಬ್ಬ ನೆಟ್ಟಿಗರು ರೀಲ್‍ಗೆ ಪ್ರತಿಕ್ರಿಯಿಸಿ, “ವೈಬ್ ಭಾಯ್ ಭಾಯ್” ಎಂದು ಬರೆದಿದ್ದಾರೆ. ಒಟ್ಟಾರೆ ಪೊಲೀಸ್ ಅಧಿಕಾರಿಯ ಈ ಡ್ಯಾನ್ಸ್ ನೆಟ್ಟಿಗರನ್ನು ಮೋಡಿ ಮಾಡಿದಂತೂ ಖಂಡಿತ.