Saturday, 10th May 2025

Viral Video: ಟಾಯ್ಲೆಟ್ ಕಮೋಡ್ ಒಳಗೆ ಸಿಲುಕಿಕೊಂಡ ಉಡದ ಮರಿ; ಮುಂದೇನಾಯ್ತು? ವಿಡಿಯೊ ನೋಡಿ

Viral Video

ಹೊಸದಿಲ್ಲಿ: ಹಾವುಗಳು ಸ್ಕೂಟರ್, ಬೈಕ್‍ನ ಸಂಧಿಯಲ್ಲಿ ಅವಿತುಕೊಂಡಿರುವ ಘಟನೆ ನಮ್ಮ ಸುತ್ತಮುತ್ತ ಹಲವು ಬಾರಿ ಕಂಡುಬಂದಿದೆ. ಆದರೆ ಇಲ್ಲಿ  ವೆಸ್ಟರ್ನ್‌ ಟಾಯ್ಲೆಟ್‍ ಕಮೋಡ್‍ನ  ಒಳಗೆ ಉಡದ ಮರಿವೊಂದು ಅಡಗಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಈ ವೈರಲ್ ವಿಡಿಯೊದಲ್ಲಿ ಉಡದ ಮರಿಯನ್ನು  ರಕ್ಷಿಸಿರುವುದು  ರೆಕಾರ್ಡ್ ಮಾಡಲಾಗಿದೆ. ಒಬ್ಬ ವ್ಯಕ್ತಿಯು ಹಗ್ಗ ಕಟ್ಟಿ ಉಡದ ಮರಿಯನ್ನು ಎಚ್ಚರಿಕೆಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾನೆ. ರಕ್ಷಣೆಯ ಸಮಯದಲ್ಲಿ ಉಡದ ಮರಿಗೆ ಯಾವುದೇ ಗಾಯವಾಗದಂತೆ ಆ ವ್ಯಕ್ತಿ ಕಮೋಡ್‍ನ ಒಂದು ಭಾಗವನ್ನು ಎಚ್ಚರಿಕೆಯಿಂದ ಒಡೆದು ಹಾಕಿದ್ದಾನೆ.

ವೈರಲ್ ವಿಡಿಯೊದಲ್ಲಿ ಮೊದಲಿಗೆ ಹಾವು ಎಂಬಂತೆ ಕಂಡುಬಂದ ಉಡದ ಮರಿ ಟಾಯ್ಲೆಟ್ ಕಮೋಡ್‍ನ ಒಳಗೆ ಸುತ್ತಿಕೊಂಡು ಅವಿತುಕೊಂಡಿದೆ. ಟಾಯ್ಲೆಟ್ ಕಮೋಡ್‍ನಲ್ಲಿ ಉಡದ ಮರಿಯನ್ನು ನೋಡಿ ಅನೇಕ ನೆಟ್ಟಿಗರು  ಬೆಚ್ಚಿಬಿದ್ದಿದ್ದಾರೆ. ನಂತರ ವ್ಯಕ್ತಿಯೊಬ್ಬರು ಕಮೋಡ್ ಅನ್ನು ಎಚ್ಚರಿಕೆಯಿಂದ ಒಡೆಯುವ  ಮೂಲಕ ಅದನ್ನು ರಕ್ಷಿಸಲು ಮುಂದಾಗಿದ್ದಾರೆ.

ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ  ವೈರಲ್ ಆಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 1.1 ಮಿಲಿಯನ್ ಫಾಲೋವರ್ಸ್‍ಗಳನ್ನು ಹೊಂದಿರುವ ಪ್ರಾಣಿ ರಕ್ಷಕ ಶ್ಯಾಮ್ ಗೋವಿಂದ್ಸರ್ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ  ಪೋಸ್ಟ್ ಮಾಡಿದ್ದಾರೆ. ಶ್ಯಾಮ್ ರಕ್ಷಣಾ ಕಾರ್ಯಾಚರಣೆಯ ಹೆಚ್ಚಿನ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮತ್ತು  ಅಲ್ಲಿ ಅವರು ಉಡದ  ಸ್ಥಿತಿ ಮತ್ತು ರಕ್ಷಿಸಿದ ವಿಧಾನವನ್ನು ವಿವರಿಸಿದ್ದಾರೆ. ಸ್ಥಳೀಯರು ಆರಂಭದಲ್ಲಿ ದಾರವನ್ನು ಬಳಸಿ ಅದನ್ನು ಹೊರತೆಗೆಯಲು ಪ್ರಯತ್ನಿಸಿದ್ದರಿಂದ  ಅದು ಗಾಯಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತೊಂದು ವಿಡಿಯೊದಲ್ಲಿ ಅವರು ಉಡದ ಮರಿಯನ್ನು  ವಾಶ್ ಬೇಸಿನ್‍ನಲ್ಲಿ ಇಟ್ಟು ಅದರ ಮೈಮೇಲೆ ನೀರನ್ನು ಹಾಕಿದ್ದಾರೆ.  ಅದು ಅದರಲ್ಲಿ ಕುಳಿತು ತನ್ನ ನಾಲಿಗೆಯನ್ನು ಹೊರ ಚಾಚಿದೆ. ಈ ಘಟನೆ ನಡೆದ ಸ್ಥಳ ಮತ್ತು ದಿನಾಂಕ ತಿಳಿದುಬಂದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:ಮೂಢ ನಂಬಿಕೆಗೆ ಪ್ರಾಣವನ್ನೇ ಕಳೆದುಕೊಂಡ್ರಾ ಖ್ಯಾತ ನಟಿ? ಅಮೆಜೋನಿಯನ್ ಕಪ್ಪೆ ವಿಷ ಸೇವಿಸಿದ್ದೇಕೆ?

ಛತ್ತೀಸ್‍ಗಢದ ಬಿಲಾಸ್ಪುರದಲ್ಲಿ  ಪ್ರಾಣಿ ರಕ್ಷಕಿ ಅಜಿತಾ ಪಾಂಡೆ ಅವರು ಉಡವನ್ನು ಬರಿಗೈಯಿಂದ ನಿರ್ಭೀತಿಯಿಂದ ಹಿಡಿದುಕೊಂಡ ವಿಡಿಯೊ ವೈರಲ್ ಆಗಿ ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚಿನ ಜನರ ಗಮನಸೆಳೆದಿದೆ. ಅನಿಶ್ಚಿತ ಪರಿಸ್ಥಿತಿಯಲ್ಲಿದ್ದ ಅದನ್ನು ರಕ್ಷಿಸುವಾಗ ಅವರ ಮುಖದಲ್ಲಿ ಯಾವುದೇ ಭಯವಿಲ್ಲದೇ  ಶಾಂತಚಿತ್ತದಿಂದ ಅದನ್ನು ಕಾಪಾಡುತ್ತಿರುವುದನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.