Sunday, 11th May 2025

Viral News: ಯಾವೋ ಇವೆಲ್ಲ: ಹೊಸ ವರ್ಷಕ್ಕೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ʼಗರ್ಲ್‌ಫ್ರೆಂಡ್‌ʼ ಆರ್ಡರ್ ಮಾಡಿದ ಭೂಪ!

Viral Video

ಹೊಸದಿಲ್ಲಿ: ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ (Swiggy Instamart)ನಲ್ಲಿ  ಜನರು ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿ ತಮ್ಮ ಮನೆಗೆ ಶೀಘ್ರವಾಗಿ ತರಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ವಿಳಾಸಕ್ಕೆ ಗೆಳತಿಯನ್ನು ತಂದು ನೀಡುವಂತೆ  ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಅಪ್ಲಿಕೇಷನ್‌ನಲ್ಲಿ ಕೇಳಿಕೊಂಡಿದ್ದಾನೆ.  ಆತ ಮಾಡಿದ ಎಕ್ಸ್ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ. ಪೋಸ್ಟ್‌ನಲ್ಲಿ ಹೊಸ ವರ್ಷದ ಮುನ್ನಾದಿನದಂದು ಜನರು ಕಾಂಡೋಮ್‍ಗಳನ್ನು ಆರ್ಡರ್ ಮಾಡುತ್ತಿರುವುದು ಕಂಡು  ಆ ವ್ಯಕ್ತಿ ದಿನಸಿ ಡೆಲಿವರಿ ಪ್ಲಾಟ್‍ಫಾರ್ಮ್‍ಗೆ  ಗರ್ಲ್‌ಫ್ರೆಂಡ್‌ ಅನ್ನು ತನ್ನ ಮನೆಗೆ ಕಳುಹಿಸುವಂತೆ ಕೇಳಿಕೊಂಡಿದ್ದಾನೆ.

ಡಿಸೆಂಬರ್ 31ರಂದು, ಸ್ವಿಗ್ಗಿ ಹೊಸ ವರ್ಷ ಆಚರಣೆಗೂ ಮೊದಲೇ ಮಾರಾಟವಾದ ಕಾಂಡೋಮ್‍ಗಳ ಸಂಖ್ಯೆಯನ್ನು ಸೂಚಿಸುವ ಪೋಸ್ಟ್ ಹಾಕಿತ್ತು. ಮಧ್ಯಾಹ್ನದ ವೇಳೆಗೆ, ಗ್ರಾಹಕರು ಸಾವಿರಾರು ಕಾಂಡೋಮ್‍ಗಳನ್ನು ಆರ್ಡರ್ ಮಾಡಿದ್ದಾರೆ ಎಂದು ಹಂಚಿಕೊಂಡಿತ್ತು. “ಇಲ್ಲಿಯವರೆಗೆ 4,779 ಕಾಂಡೋಮ್‍ಗಳನ್ನು ಮಾರಾಟ ಮಾಡಲಾಗಿದೆ ಎಂದು ಡೇಟಾ ತಂಡ ಹೇಳಿದೆ” ಎಂದು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು.

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ರಾತ್ರಿ ಪಾರ್ಟಿಗಾಗಿ ಅನೇಕ ಕಾಂಡೋಮ್‍ಗಳು ಮಾರಾಟವಾಗುತ್ತಿರುವುದನ್ನು ಉಲ್ಲೇಖಿಸಿದ ಈ ಪೋಸ್ಟ್‌ಗೆ ಉತ್ತರಿಸಿದ ವ್ಯಕ್ತಿಯೊಬ್ಬ“ದಯವಿಟ್ಟು ನನ್ನ ಪಿನ್‍ಕೋಡ್‍ಗೆ ಗರ್ಲ್‌ಫ್ರೆಂಡ್‌ ಅನ್ನು ತಲುಪಿಸಿ” ಎಂದು ಬರೆದಿದ್ದಾರೆ. ಆ ಮೂಲಕ ಎಕ್ಸ್ ಬಳಕೆದಾರರು ಹೊಸ ವರ್ಷ 2025 ಅನ್ನು ಸ್ವಾಗತಿಸುವಾಗ ಮಹಿಳಾ ಸಂಗಾತಿಯೊಂದಿಗೆ ಪಾರ್ಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಪೋಸ್ಟ್ ತಕ್ಷಣ ನೆಟ್ಟಿಗರ  ಗಮನ ಸೆಳೆದಿದೆ. ಹಾಗಾಗಿ ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಸುದ್ದಿಯನ್ನೂ ಓದಿ:ಮತ್ತೊಂದು ಪವರ್‌ಫುಲ್‌ ಪಾತ್ರದಲ್ಲಿ ರಾಮ್‌ ಚರಣ್‌; ಬಹು ನಿರೀಕ್ಷಿತ ‘ಗೇಮ್‌ ಚೇಂಜರ್‌ʼ ಟ್ರೈಲರ್‌ ಔಟ್‌

ಸ್ವಿಗ್ಗಿ ಇನ್‍ಸ್ಟಾಮಾರ್ಟ್ ತಮ್ಮ ಡೆಲಿವರಿ ಪ್ಲಾಟ್‌ಫಾರ್ಮ್ ಮೂಲಕ ಗೆಳತಿಯನ್ನು ಆರ್ಡರ್ ಮಾಡಲು ಕೇಳಿದ ಎಕ್ಸ್ ಬಳಕೆದಾರರಿಗೆ ಉತ್ತರಿಸದೆ ಇರಲು ಸಾಧ್ಯವಾಗಲಿಲ್ಲ. ಹಾಗಾಗಿ ಅಂತಹ ಸೇವೆಗಳು ಪ್ಲಾಟ್ ಫಾರ್ಮ್‍ನಲ್ಲಿ ಲಭ್ಯವಿಲ್ಲ ಎಂದು ಆ್ಯಂಗ್ರಿ ಎಮೋಜಿಯ ಮೂಲಕ  ಆತನಿಗೆ ಸ್ಪಷ್ಟನೆ ನೀಡಿದೆ. ಹಾಗೇ  ಶೀಘ್ರದಲ್ಲೇ, ಸ್ವಿಗ್ಗಿ ಇನ್‍ಸ್ಟಾಮಾರ್ಟ್ ಆತನಿಗೆ ದಿನಸಿ ವಿತರಣಾ ಅಪ್ಲಿಕೇಶನ್‍ನಲ್ಲಿ ‘ಗರ್ಲ್‌ಫ್ರೆಂಡ್‌’ ಎಂದು ಹುಡುಕುವ ಬದಲು ಲಾಲಿಪಾಪ್ ಆರ್ಡರ್ ಮಾಡಲು ಸಲಹೆ ನೀಡಿದೆ.