ಸಿಂಹ ಹಾಗೂ ಮೊಸಳೆಗೆ ಸಂಬಂಧಪಟ್ಟ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ನೀರು ಕುಡಿಯಲೆಂದು ನದಿಗೆ ಇಳಿದ ಸಿಂಹ ಮೊಸಳೆಯ ಬಾಯಿಗೆ ಸಿಕ್ಕಿ ತಪ್ಪಿಸಿಕೊಂಡ ದೃಶ್ಯದ ವಿಡಿಯೊ ಇದಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ವೈರಲ್ ವಿಡಿಯೊದಲ್ಲಿ ಮೊಸಳೆ ಹಾಗೂ ಸಿಂಹದ ಹೋರಾಟದ ದೃಶ್ಯ ಸೆರೆಯಾಗಿದೆ. ನೀರು ಕುಡಿಯಲೆಂದು ನದಿಗೆ ಇಳಿದ ಸಿಂಹಕ್ಕೆ ಗಂಡಾಂತರವೊಂದು ಎದುರಾಗಿತ್ತು. ಸಿಂಹವು ನೀರಿಗೆ ಇಳಿಯುತ್ತಿದ್ದಂತೆ, ಮೊಸಳೆ ಇದ್ದಕ್ಕಿದ್ದಂತೆ ನದಿಯಿಂದ ಮೇಲೆ ಬಂದು ಸಿಂಹದ ಮೇಲೆ ದಾಳಿ ಮಾಡಿದೆ. ಕೊನೆಗೂ ಸಿಂಹ ಮೊಸಳೆಯ ಹಿಡಿತದಿಂದ ತಪ್ಪಿಸಿಕೊಂಡು ನದಿಯಿಂದ ಮೇಲೆ ಬಂದಿದೆ.
? lion escapes the jaws of a crocodile while crossing a river.
ಯೂಟ್ಯೂಬ್ ಚಾನಲ್ ಇತ್ತೀಚೆಗೆ ಹಂಚಿಕೊಳ್ಳಲಾದ ಈ ವಿಡಿಯೊ ಲಕ್ಷಾಂತರ ವೀಕ್ಷಣೆಗಳು ಮತ್ತು ಲೈಕ್‍ಗಳನ್ನು ಗಳಿಸಿದೆ. ಇದಕ್ಕೆ ಅನೇಕ ವೀಕ್ಷಕರು ಕುತೂಹಲಕಾರಿ ಕಾಮೆಂಟ್‍ಗಳನ್ನು ಮಾಡಿದ್ದಾರೆ. ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಮೊಸಳೆ ತಾನು ತಪ್ಪು ಮಾಡಿದೆ ಎನ್ನುವುದನ್ನು ಅರಿತುಕೊಂಡಿದೆ ಎಂದು ವಿಡಿಯೊ ನೋಡಿದ ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. “ಮೊಸಳೆಯ ಬಾಯಿಗೆ ಬಂದ ನಂತರ ಯಾವುದೇ ಬೇಟೆ ತಪ್ಪಿಸಿಕೊಂಡು ಹೋಗುವುದನ್ನು ನಾನು ನೋಡಿಲ್ಲ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:ಫೈನಲ್ ಸ್ಪರ್ಧಿಗಳು ಯಾರೆಂದು ರಜತ್ ಬಳಿ ಗುಟ್ಟಾಗಿ ಹೇಳಿದ ಪತ್ನಿ ಅಕ್ಷಿತಾ
ಸಿಂಹ ಮತ್ತು ಮೊಸಳೆಯ ನಡುವಿನ ಹೋರಾಟದ ವಿಡಿಯೊ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಕಳೆದ ವರ್ಷ ನವೆಂಬರ್‌ನಲ್ಲಿ ಬೋಟ್ಸ್ವಾನಾದ ಒಕಾವಂಗಾ ಡೆಲ್ಟಾದಲ್ಲಿರುವ ನದಿಯ ದಡದಲ್ಲಿ ತನ್ನ ಮರಿಗಳ ಜತೆ ವಿರಾಮ ತೆಗೆದುಕೊಳ್ಳುತ್ತಿದ್ದ ಸಿಂಹಿಣಿಯ ಮುಂಭಾಗದ ಕಾಲುಗಳನ್ನು ಮೊಸಳೆಯು ತನ್ನ ದವಡೆಯಲ್ಲಿ ಹಿಡಿದುಕೊಂಡಿದ್ದ ದೃಶ್ಯ ವೈರಲ್ ಆಗಿತ್ತು. ಆಗ ಅವುಗಳ ನಡುವೆ ದೊಡ್ಡ ಹೋರಾಟವೇ ನಡೆದಿತ್ತು. ಈ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕ ಪಿಯಾ ಡೈರಿಕ್ಸ್ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.