Thursday, 15th May 2025

Viral Video: ಮದುವೆಯಲ್ಲಿ ಹುಚ್ಚರಂತೆ ಕುಣಿದು ಕುಪ್ಪಳಿಸಿದ ಗುಂಪು! ವಿಡಿಯೊ ನೋಡಿ

Viral Video

ಮದುವೆ ಮನೆಯೆಂದರೆ ಸಂಭ್ರಮ, ಸಡಗರ ತುಂಬಿರುತ್ತದೆ. ಆದರೆ ಇಲ್ಲೊಂದು ಮದುವೆಯ ಮನೆಯಲ್ಲಿ ಅತಿಥಿಗಳು ಹುಚ್ಚು ಹುಚ್ಚಾಗಿ ಕುಣಿದು ಮದುವೆಯ ಮನೆಯನ್ನು ಅಸ್ತವ್ಯಸ್ಥಗೊಳಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಈ ವಿಡಿಯೊದಲ್ಲಿ ಪುರುಷರ ಗುಂಪೊಂದು ಮದುವೆ ಮನೆಯಲ್ಲಿ ಮನಸೋ ಇಚ್ಛೆ ಕುಣಿದು ಕುಪ್ಪಳಿಸಿದ್ದಾರೆ. ಡ್ಯಾನ್ಸ್‌ ಮಾಡುವುದರ ಜೊತೆ ಜೊತೆಗೆ ಅಲ್ಲಿದ್ದ  ಪಾತ್ರೆಗಳನ್ನು ಎಸೆಯುವುದು, ಕಂಬಗಳ ಮೇಲೆ ಹತ್ತುವುದು ಮತ್ತು ಧರಿಸಿದ್ದ ಶರ್ಟ್ ಅನ್ನು ಬಿಚ್ಚಿ ಕುಣಿಯವುದು ಹೀಗೆ ನಾನಾ ತರಹದ ಚೇಷ್ಟೆಗಳನ್ನು ಮಾಡಿದ್ದಾರೆ. ಈ ವಿಡಿಯೊಗೆ “ಟೆಂಟ್ ಫಡ್ ನೃತ್ಯ ಎಂದು ಶೀರ್ಷಿಕೆ ಬರೆಯಲಾಗಿದೆ.

ಇದನ್ನೂ ಓದಿ: ಅಬ್ಬಾ.. ಇದೆಂಥಾ ಅಚಾತುರ್ಯ! ಸಹಾಯಕ್ಕಾಗಿ 911ಗೆ ಕರೆ ಮಾಡಿದವನನ್ನೇ ಗುಂಡಿಕ್ಕಿ ಕೊಂದ ಪೊಲೀಸರು!

ಹಾಗೇ ಈ ವಿಡಿಯೊಗೆ ಟೆಂಟ್ ನಮ್ಮದು ಏನು ಕಾಮೆಂಟ್ ಮಾಡಬೇಡಿ ಎಂದು ಬರೆಯಲಾಗಿದೆ. ಆದರೆ ಅದಕ್ಕೆ ನೆಟ್ಟಿಗರು ವ್ಯಂಗ್ಯದ ಕಾಮೆಂಟ್‍ಗಳ ಮೂಲಕ ಉತ್ತರ ನೀಡಿದ್ದಾರೆ.  “ಈ ಹುಡುಗರು ಎಷ್ಟು ಸಂತೋಷವಾಗಿದ್ದಾರೆ, ಒಂದು ದಿನ ಇವರು ಸಹ ಮದುವೆಯಾಗುತ್ತಾರೆ” ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಟೆಂಟ್ ವ್ಯಕ್ತಿ ಹೆಚ್ಚು ಹಣವನ್ನು ಕೇಳುತ್ತಾರೆ” ಎಂದು ಹಂಚಿಕೊಂಡಿದ್ದಾರೆ. “ ನಾವು ಏನನ್ನಾದರೂ ಏಕೆ ಹೇಳುತ್ತೇವೆ, ಟೆಂಟ್ ನಿಮ್ಮದು, ನೀವು ಏನು ಬೇಕಾದರೂ ಮಾಡಿ” ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ಈ ವಿಡಿಯೊವನ್ನು ಒಂದು ದಶಲಕ್ಷಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದ್ದು, 44 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.