ಗಾಂಧಿನಗರ: ನೀವು ಯಾವುದೇ ಹಾಡಿಗೆ ನೃತ್ಯ ಮಾಡುವಾಗ, ಪಾತ್ರವನ್ನು ಅಭಿನಯಿಸುವಾಗ ಮುಖದ ಭಾವ ಪ್ರಮುಖ ಪಾತ್ರವಹಿಸುತ್ತದೆ. ಮುಖದ ಭಾವನೆ ನಿಮ್ಮ ಪಾತ್ರಕ್ಕೆ ಸರಿ ಹೊಂದಿದ್ದರೆ ನಿಮ್ಮ ಆ ಪಾತ್ರ, ನೃತ್ಯವನ್ನು ನೋಡಲು ಅದ್ಭುತವಾಗಿ ಕಾಣುತ್ತದೆ. ಅದೇ ರೀತಿ ಗುಜರಾತ್‍ನ ಅಹಮದಾಬಾದ್‍ನ ಪುಟ್ಟ ಬಾಲಕಿ ಅನನ್ಯಾ ರಾಹುಲ್ ಪಟೇಲ್, ಸನಮ್ ಪುರಿ ಅವರ ಎವರ್‌ಗ್ರೀನ್ ಹಿಟ್ ʼಯೇ ರಾತೇ ಯೆ ಮೌಸಮ್ʼನ ಹಾಡಿಗೆ ತನ್ನ ಆಕರ್ಷಕ ಅಭಿನಯದಿಂದ ಸೋಶಿಯಲ್ ಮಿಡಿಯಾದಲ್ಲಿ ಎಲ್ಲರ ಗಮನ ಸೆಳೆದಿದ್ದಾಳೆ. ಈ ಬಾಲಕಿಯ ನೃತ್ಯದ ವಿಡಿಯೊ ಈಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ತನ್ನ ಅದ್ಭುತವಾದ ನೃತ್ಯ ವಿಡಿಯೊಗಳನ್ನು ಪೋಸ್ಟ್ ಮಾಡುವುದರಲ್ಲಿ ಹೆಸರುವಾಸಿಯಾದ ಅನನ್ಯಾಳ ಇತ್ತೀಚಿನ ಈ ರೀಲ್ ಎಲ್ಲರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಎಂದಿನಂತೆ ತನ್ನ ಹೈ-ಎನರ್ಜಿ ಮೂಮೆಂಟ್‍ಗಳ ಮೂಲಕ ರಂಜಿಸುತ್ತಿದ್ದ ಐದು ವರ್ಷದ ಬಾಲಕಿ ಅದರ ಬದಲು, ಹಾಸಿಗೆಯ ಮೇಲೆ ಕುಳಿತು ಮುಖದ ಭಾವನೆಗಳ ಮೂಲಕವೇ ಸರಳ ಮತ್ತು ಗಮನಾರ್ಹ ಪ್ರದರ್ಶನ ನೀಡಿ ವೀಕ್ಷಕರನ್ನು ಮೋಡಿ ಮಾಡಿದ್ದಾಳೆ.
ಅನನ್ಯಾ ಈ ಭಾವಪೂರ್ಣ ಟ್ರ್ಯಾಕ್‍ಗೆ ಲಿಪ್-ಸಿಂಕ್ ಮಾಡಿ ಹಾಡಿನ ಬಗ್ಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ಈ ಬಾಲಕಿಯ ಆಕರ್ಷಕ ಮತ್ತು ಭಾವನೆಗಳನ್ನು ತನ್ನ ಮುಖದ ಮೂಲಕ ವ್ಯಕ್ತಪಡಿಸಿ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾಳೆ.
ಈ ಪುಟ್ಟ ಬಾಲಕಿಯ ನೃತ್ಯ ಪ್ರದರ್ಶನದ ವಿಡಿಯೊದಲ್ಲಿ ಅವಳು ಕೆಂಪು ಬಣ್ಣದ ದಿರಿಸಿನಲ್ಲಿ ಹಾಸಿಗೆಯ ಮೇಲೆ ಕುಳಿತು ನೃತ್ಯ ಮಾಡಿದ್ದಾಳೆ. ಹಾಡಿನ ಲಯಕ್ಕೆ ತಕ್ಕ ಹಾಗೇ ಮುಖದ ಭಾವಗಳನ್ನು ವ್ಯಕ್ತಪಡಿಸಿ ಪ್ರೇಕ್ಷಕರನ್ನು ರಂಜಿಸಿದ್ದಾಳೆ.
ಇದನ್ನೂ ಓದಿ:ಮುಂಬೈ ಮೆಟ್ರೋಗೂ ಎಂಟ್ರಿ ಕೊಟ್ಟ ‘ಪುಷ್ಪಾ’- ವಿಡಿಯೊ ಇದೆ
ಈ ವಿಡಿಯೊಗೆ ಇದುವರೆಗೆ 9 ಲಕ್ಷಕ್ಕೂ ಅಧಿಕ ವೀಕ್ಷಣೆ ಹಾಗೂ 50 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. ಆಕೆಯ ಅಭಿನಯದಿಂದ ಪ್ರಭಾವಿತರಾದ ಸೋಶಿಯಲ್ ಮೀಡಿಯಾ ಬಳಕೆದಾರರು ‘ಹಾರ್ಟ್’ ಮತ್ತು ‘ಫೈರ್’ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರು, ಹೆಚ್ಚಿನ ಸಂಖ್ಯೆಯಲ್ಲಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಆ ಪುಟ್ಟ ಬಾಲಕಿಯ ಕೌಶಲ್ಯವನ್ನು ಹೊಗಳಿ ಹಾರೈಸಿದ್ದಾರೆ.