ಈ ಸುದ್ದಿಯನ್ನು ಓದಿದ ನಂತರ ನೀವು, ‘ಈ ಲೋಕದಲ್ಲಿ ಎಂತೆಂಥ ಜನ ಇರ್ತಾರಪ್ಪಾ..!’ ಅಂತ ಖಂಡಿತ ಅಂದ್ಕೊಳ್ತೀರಿ! ಯಾಕಂದ್ರೆ ಅಂತಹ ಒಂದು ವಿಚಿತ್ರ ವೈರಲ್ ಸುದ್ದಿಯನ್ನು ವಿಡಿಯೋ (Viral Video) ಸಹಿತ ನಾವು ನಿಮ್ಮ ಮುಂದೆ ಇಡ್ತಿದ್ದೀವೆ. ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರು ಸಾರ್ವಜನಿಕ ಶೌಚಾಲಯದಲ್ಲಿ ಹೆಣ್ಣು ನಾಯಿಯೊಂದಿಗಿರುವುದನ್ನು ಪ್ರಾಣಿ ಸಂರಕ್ಷಣಾ ಕಾರ್ಯಕರ್ತೆಯೊಬ್ಬರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಈ ಸಂದರ್ಭವನ್ನು ಆಕೆ ತನ್ನ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಟಾಯ್ಲಟ್ ಒಳಗಿಂದ ಹೆಣ್ಣು ನಾಯಿಯ ಜೊತೆ ಸಿಕ್ಕಿಬಿದ್ದ ಆ ‘ಅಜ್ಜ’ ಬಳಿಕ ಅಲ್ಲಿಂದ ಮೆಲ್ಲನೆ ಕಾಲ್ಕೀಳುತ್ತಿರುವುದು ಈ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಮಹಾರಾಷ್ಟ್ರದ (Maharashtra) ನಯೀಗಾಂವ್ (Naigaon) ಎಂಬಲ್ಲಿ ಈ ಶಾಕಿಂಗ್ ಘಟನೆ ನಡೆದಿದ್ದು, ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿಯಲ್ಲಿದ್ದ ಶೌಚಾಲಯದಲ್ಲಿ ಈ ಅಧ್ವಾನ ನಡೆದಿರುವುದಾಗಿ ತಿಳಿದುಬಂದಿದೆ. ಮತ್ತು ಆ ಮಹಿಳೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಸದ್ಯಕ್ಕೆ ಈ ವಿಡಿಯೋ ಇಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೋದಲ್ಲಿ ರೆಕಾರ್ಡ್ ಆಗಿರುವಂತೆ, ಸುಮಾರು 60 ವರ್ಷ ಪ್ರಾಯದ ವ್ಯಕ್ತಿ ಒಂದು ಹೆಣ್ಣು ಬೀದಿ ನಾಯಿಯನ್ನು ಶೌಚಾಲಯದ ಒಳಗೆ ಕೆಟ್ಟ ಉದ್ದೇಶದಿಂದ ಕರೆದುಕೊಂಡು ಹೋಗುತ್ತಾನೆ. ಇದನ್ನು ಗಮನಿಸಿದ ಆ ಮಹಿಳೆ ಸಕಾಲಕ್ಕೆ ಅಲ್ಲಿಗೆ ಆಗಮಿಸಿ ಆ ನಾಯಿಯನ್ನು ಈ ಅಜ್ಜನ ಕೈಯಿಂದ ರಕ್ಷಿಸಿದ್ದಾರೆ. ಹೆಣ್ಣು ನಾಯಿಯೊಂದನ್ನು ಪ್ರಾಯದ ವ್ಯಕ್ತಿಯೊಬ್ಬರು ಶೌಚಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಈ ಮಹಿಳೆ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಅಮಾಯಕ ಪ್ರಾಣಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಈ ಮಹಿಳೆ ತಾನು ರೆಕಾರ್ಡ್ ಮಾಡಿಕೊಂಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಕೃತ್ಯ ಎಸಗಿದ ವ್ಯಕ್ತಿಯ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಾಣಿ ಪ್ರಿಯರು ಹಾಗೂ ಪ್ರಾಣಿ ಸಂರಕ್ಷಣಾ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಈ ವಿಡಿಯೋವನ್ನು ಅನಿಮಲ್ ವೆಲ್ಫೇರ್ ಫೌಂಡೇಶನ್ (animal welfare foundation) ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆ ಪಾಲ್ ಫೌಂಡೇಶನ್ ನಲ್ಲಿ ((@palfoundation.in)) ಅಪ್ಲೋಡ್ ಮಾಡಿದೆ. ‘ನಯಿ ಗಾಂವ್ ನಲ್ಲಿ ಹೆಣ್ಣು ನಾಯಿಯೊಂದರ ಮೇಲೆ ನಡೆದಿರುವ ಈ ಕ್ರೂರ ವರ್ತನೆ ಅಸ್ವಿಕಾರಾರ್ಹ – ನಾವು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದೇವೆ! ಘಟನಾ ಸ್ಥಳ: ನಯಿ ಗಾಂವ್ ಈಸ್ಟ್, ಮಹಾಲಕ್ಷ್ಮೀ ನಗರ, ಜುಹು ಚಂದ್ರ ರೋಡ್ ಎಂದು ತನ್ನ ಖಾತೆಯಲ್ಲಿ ಬರೆದುಕೊಂಡಿದೆ.
ಇದನ್ನೂ ಓದಿ: Viral Video: ಪ್ರವಾಹದಲ್ಲೇ ಸಾಗಿ ಬೆಕ್ಕಿನ ಮರಿಗಳನ್ನು ಕಾಪಾಡಿದ ಪುಟ್ಟ ಬಾಲಕ – ಈತನ ಮಾನವೀಯತೆಗೆ ನೆಟ್ಟಿಗರಿಂದ ಬಹುಪರಾಕ್!
ಇದು ಹೃದಯವಿದ್ರಾವಕ ಎನ್ನುವುದಕ್ಕಿಂತಲೂ ಹೆಚ್ಚಿನದ್ದಾಗಿದ್ದು, ಈ ಶ್ವಾನ ಎದುರಿಸಿರಬಹುದಾದ ಕ್ರೂರತೆಯನ್ನು ಪದಗಳಿದ ವರ್ಣಿಸಲು ಸಾಧ್ಯವಿಲ್ಲ ಎಂದು ಕಳವಳವನ್ನು ಈ ಸಂಸ್ಥೆ ವ್ಯಕ್ತಪಡಿಸಿದೆ. ಒಟ್ಟಿನಲ್ಲಿ ಮನುಷ್ಯ ತನ್ನ ತೀಟೆಗೆ ಅಮಾಯಕ ಮುಗ್ದ ಪ್ರಾಣಿಗಳನ್ನೂ ಬಳಸಿಕೊಳ್ಳುತ್ತಾನೆ, ಅದೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಎಂಬ ವಿಚಾರ ನಂಬಲಿಕ್ಕೇ ಅಸಾಧ್ಯವಾದುದಾಗಿದೆ.