ನವದೆಹಲಿ: ತಂದೆ-ಮಕ್ಕಳು ಮತ್ತು ಒಡಹುಟ್ಟಿದವರಂತಹ ಬಂಧಗಳನ್ನು ಪವಿತ್ರವೆಂದು ನೋಡುತ್ತದೆ. ಅದರಲ್ಲೂ ಪ್ರತಿ ತಂದೆಗೆ ಮಗಳು ಎರಡನೇ ತಾಯಿಯಾಗಿರುತ್ತಾಳೆ. ಹೀಗಿರುವಾಗ ಇಲ್ಲೊಬ್ಬಳು ತನ್ನ ತಂದೆಯನ್ನೇ ಮದುವೆ ಆಗುವ ಮೂಲದ ಸಮಾಜದ ವ್ಯವಸ್ಥೆ, ಪರಂಪರೆಗೆ ಸವಾಲೆಸೆದಿದ್ದಾಳೆ. ಈ ಕುರಿತ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದೆ.
ಏನಿದು ಘಟನೆ?
24 ವರ್ಷದ ಯುವತಿಯೊಬ್ಬಳು ತನ್ನ 50 ವರ್ಷದ ತಂದೆಯನ್ನು ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾಳೆ. ವಿಡಿಯೊದಲ್ಲಿ, ಮಹಿಳೆ ತನ್ನ ಪಕ್ಕದಲ್ಲಿರುವ ಪುರುಷನನ್ನು ತನ್ನ ತಂದೆ ಮತ್ತು ತನ್ನ ಪತಿ ಎಂದು ಪರಿಚಯಿಸುತ್ತಾಳೆ. ಅವರ ಸಂಬಂಧದ ಬಗ್ಗೆ ಕೇಳಿದಾಗ, “ಅವರು ನನ್ನ ತಂದೆ, ಮತ್ತು ಮದುವೆಯ ನಂತರ ನಾವು ಸಂತೋಷವಾಗಿದ್ದೇವೆ” ಎಂದು ಬಹಳ ವಿಶ್ವಾಸದಿಂದಲೇ ಹೇಳುತ್ತಾರೆ. ಇದಕ್ಕೆ ಪಕ್ಕದಲ್ಲೇ ನಿಂತಿದ್ದ ಆತನೂ? ಪ್ರತಿಕ್ರಿಯಿಸಿದ್ದು,ಅದರಲ್ಲಿ ಏನು ತಪ್ಪಾಗಿದೆ? ನಾವೇಕೆ ನಾಚಿಕೆಪಡಬೇಕು? ಎಂದು ಪ್ರಶ್ನಿಸಿದ್ದಾನೆ.
ಜನರು ನಮ್ಮ ಬೆನ್ನಿನ ಹಿಂದೆ ಮಾತನಾಡುತ್ತಾರೆ. ನಾವು ಎಲ್ಲವನ್ನೂ ಸ್ಪಷ್ಟಪಡಿಸಲು ಬಯಸಿದ್ದೇವೆ. ಸಮಾಜದ ಟೀಕೆಗಳ ಹೊರತಾಗಿಯೂ ನಮ್ಮ ನಿರ್ಧಾರದ ಬಗ್ಗೆ ತೃಪ್ತಿ ಇದೆ ಎಂದು ಆಕೆ ಹೇಳುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
एक बेटी ने अपने बाप से शादी कर ली और बाप ने अपनी बेटी से शादी कर ली।
— Jaysingh Yadav SP (@JaysinghYadavSP) November 27, 2024
हिंदू रीति रिवाज के अनुसार सादी मंदिर में संपन्न हुई उसके बाद मीडिया से बात की किसी को अब दिक्कत नहीं होनी चाहिए दोनों सहमत हैं दोनों राजी हैं। pic.twitter.com/cSY6Yytcv5
ನೆಟ್ಟಿಗರು ಕಿಡಿ
ಇನ್ನು ಈ ವಿಡಿಯೊ ನೋಡಿದ ವೀಕ್ಷಕರು ಬೆಚ್ಚಿ ಬಿದ್ದಿದ್ದಾರೆ. ಕೆಲವು ಬಳಕೆದಾರರು ಇದನ್ನು ಕಾನೂನುಬಾಹಿರ ಮತ್ತು ಅನೈತಿಕ ಎಂದು ಕರೆದಿದ್ದಾರೆ. ಆದರೆ ಇತರರು ಇಂತಹ ವಿಚಾರಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ಹಿಂದೂ ವಿವಾಹ ಕಾನೂನುಗಳ ಅಡಿಯಲ್ಲಿ, ಕಾನೂನುಬಾಹಿರವಾಗಿದೆ ಎಂದು ಕಿಡಿ ಕಾರಿದ್ದಾರೆ.
ಕೆಲವು ಬಳಕೆದಾರರು ವೀಡಿಯೊವನ್ನು ಮನರಂಜನೆಗಾಗಿ ಅಥವಾ ಗಮನ ಸೆಳೆಯಲು ಮಾಡಿರಬಹುದು ಎಂದು ಹೇಳಿದ್ದಾರೆ. ಇವರಿಗೆ ಏನೋ ಮಾನಸಿಕ ಸಮಸ್ಯೆ ಇದೆ ಎಂದೆನಿಸುತ್ತಿದೆ ಅದಕ್ಕಾಗಿ ಇಂತಹ ಕೃತ್ಯ ಎಸಗಿದ್ದಾರೆ ಎಂದು ಇನ್ನು ಕೆಲವರು ಟೀಕಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಏಕಾಏಕಿ ಸಾಧುವಿನ ಜಡೆ ಹಿಡಿದು ಮೇಲಕ್ಕೆತ್ತಿದ ಖಲಿ! ವಿಡಿಯೊ ಫುಲ್ ವೈರಲ್