Monday, 12th May 2025

Viral Video: ಎಂಟು ಬಾರಿ ಪಲ್ಟಿಯಾಗಿ ಬಿದ್ದ ಕಾರು; ರಣ ಭೀಕರ ಅಪಘಾತದಿಂದ ಪಾರಾದವರು ಕುಡಿಯೋಕೆ ಟೀ ಕೇಳಿದ್ರಂತೆ! ವಿಡಿಯೊ ಇದೆ

Viral Video

ಬಿಕಾನೇರ್: ರಾಜಸ್ಥಾನದ ನಾಗೌರ್‌ನ ಹೆದ್ದಾರಿಯಲ್ಲಿ ಭೀಕರ ಅಪಘಾತವೊಂದು ನಡೆದಿದ್ದು ಇದು ನೋಡುಗರನ್ನು ಬೆಚ್ಚಿಬೀಳಿಸಿದೆ. ನಾಗೌರ್‌ನಿಂದ ಬಿಕಾನೇರ್‌ಗೆ ಹೋಗುತ್ತಿದ್ದ ಎಸ್‌ಯುವಿ ಕಾರೊಂದು ಹೆದ್ದಾರಿಯಲ್ಲಿ  ಎಂಟು ಬಾರಿ ಪಲ್ಟಿಯಾಗಿ ಗೇಟ್‌ವೊಂದಕ್ಕೆ ಡಿಕ್ಕಿ ಹೊಡೆದಿದೆ. ಆದರೆ ಅದೃಷ್ಟವಶಾತ್‌ ಕಾರಿನೊಳಗೆ ಇದ್ದ ಐವರು ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಈ ಘಟನೆಯ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral Video) ಆಗಿದೆ.

ಕಾರಿನ ಚಾಲಕ ತಿರುವು ತೆಗೆದುಕೊಳ್ಳುತ್ತಿದ್ದಾಗ, ನಿಯಂತ್ರಣ ತಪ್ಪಿ ಕೆಲವೇ ಸೆಕೆಂಡುಗಳಲ್ಲಿ, ವಾಹನವು ಎಂಟು ಬಾರಿ ಪಲ್ಟಿಯಾಗಿ ಕಾರು ಶೋರೂಂ ಮುಂದೆ ತಲೆಕೆಳಗಾಗಿ ಬಿದ್ದಿತು. ಅಪಘಾತದಿಂದಾಗಿ ಕಾರು ಕಂಪನಿಯ ಮುಖ್ಯ ಗೇಟ್‌ಗೆ ಡಿಕ್ಕಿ ಹೊಡೆದಿದೆ. ಆದರೆ, ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.

ಮಾಹಿತಿಯ ಪ್ರಕಾರ, ಕಾರು ನಿಯಂತ್ರಣ ತಪ್ಪಿದಾಗ ಚಾಲಕ ಮೊದಲು ಕಾರಿನಿಂದ ಜಿಗಿದಿದ್ದಾನೆ. ಕಾರು ಶೋರೂಂ ಮುಂದೆ ಬಿದ್ದ ನಂತರ ಉಳಿದ ನಾಲ್ವರು ಪ್ರಯಾಣಿಕರು ಹೊರಬಂದಿದ್ದಾರೆ. ನಂತರ ಅವರು ಶೋರೂಂ ಒಳಗೆ ಹೋಗಿ, “ನಮಗೆ ಟೀ ಕೊಡಿ ಎಂದು” ಕೇಳಿದ್ದಾರಂತೆ.

ಈ ಸುದ್ದಿಯನ್ನೂ ಓದಿ:ಜನ ಬೇಸರ ಕಳೆಯಲು ಇಲ್ಲಿ ಹೋಗಿ ಕಾಫಿ ಕುಡಿಯುತ್ತಾರಂತೆ; ವಿಡಿಯೊ ನೋಡಿದ್ರೆ ಬೆಚ್ಚಿ ಬೀಳುತ್ತಿರಿ!

“ಯಾರಿಗೂ ಗಾಯಗಳಾಗಿಲ್ಲ. ಒಂದೇ ಒಂದು ಗೀರು ಕೂಡ ಇಲ್ಲ. ಅವರು ಒಳಗೆ ಬಂದು ಟೀ ಕೊಡಿ ಎಂದು ಕೇಳಿದ್ದಾರೆ” ಎಂದು ಕಾರು ಏಜೆನ್ಸಿಯಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.