ಹಾವೆಂದರೆ ಹೌಹಾರುವವರೇ ಜಾಸ್ತಿ! ವಿಷ ಜಂತುವಾಗಿದ್ದರಿಂದ ಅದು ಕಚ್ಚಿದರೆ ಸಾವು ಸಂಭವಿಸುತ್ತದೆ ಎಂದು ಹೆದರಿ ಜನರು ಅದರ ಬಳಿ ಸುಳಿಯುವುದಕ್ಕೆ ಭಯಪಡುತ್ತಾರೆ. ಅಂತಹದರಲ್ಲಿ ಮುರಾರಿ ಲಾಲ್ ಎಂಬ ಪ್ರಾಣಿ ರಕ್ಷಕ ನೀರಿಲ್ಲದ ಬಾವಿಗೆ ಬಿದ್ದ ಹಾವುಗಳನ್ನು ರಕ್ಷಿಸಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಅವರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೊದಲ್ಲಿ ಮುರಾರಿ ಬಾವಿಯಲ್ಲಿ 2 ಹಾವುಗಳನ್ನು ನೋಡಿದ್ದಾರೆ. ನಂತರ ಅವರು ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದಿದ್ದಾರೆ. ಹಾಗೇ ಹಾವು ಕಡಿತದಿಂದ ತನ್ನನ್ನು ರಕ್ಷಿಸಿಕೊಳ್ಳಲು ದಪ್ಪ ಹ್ಯಾಂಡ್ ಗ್ಲೌಸ್ ಅನ್ನು ಧರಿಸಿದ್ದಾರೆ. ನಂತರ ಅವನು ಹಾವುಗಳನ್ನು ಒಂದೊಂದಾಗಿ ಹಿಡಿಯಲು ಸಾಧನವನ್ನು ಬಳಸಿ ಹಾವುಗಳನ್ನು ದೊಡ್ಡ ಜಾರ್ ನಲ್ಲಿ ಹಾಕಿದ್ದಾರೆ. ಅವರು ಎಲ್ಲಾ ಹಾವುಗಳನ್ನು ಕಾಡಿನಲ್ಲಿ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ.
ವರದಿ ಪ್ರಕಾರ, ಗ್ರಾಮಸ್ಥರು ಬಾವಿಯಿಂದ ಹಾವುಗಳ ಶಬ್ದವನ್ನು ಕೇಳಿ ಅವುಗಳನ್ನು ಉಳಿಸಲು ಮುರಾರಿಯ ಸಹಾಯವನ್ನು ಕೇಳಿದ್ದಾರೆ. ಮಾಹಿತಿ ಪಡೆದ ಮುರಾರಿ ಸ್ಥಳಕ್ಕೆ ಬಂದು ಹಾವುಗಳನ್ನು ರಕ್ಷಿಸಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಮೂಲಕ ಮುರಾರಿ ಅವರ ಧೈರ್ಯವನ್ನು ಹೊಗಳಿದ್ದಾರೆ . ಯಾವುದೇ ನಿರ್ಣಾಯಕ ಪರಿಸ್ಥಿತಿ ಇದ್ದಾಗಲೆಲ್ಲಾ ಪ್ರಾಣಿ ರಕ್ಷಕರು ಯಾವಾಗಲೂ ಜನರಿಗೆ ಸಹಾಯ ಮಾಡಿದ್ದಾರೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ರಸೆಲ್ ವೈಪರ್ನಂತಹ ಹಾವನ್ನು ಹೊರತೆಗೆಯುವ ಧೈರ್ಯವನ್ನು ಮುರಾರಿ ಹೇಗೆ ಮಾಡಿದರು ಎಂದು ಇತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಚಲ್ತೆ ಚಲ್ತೆ’ ಹಾಡಿನ ಬಳಿಕ ‘ಕಹೋ ನಾ ಪ್ಯಾರ್ ಹೈ’ ಮೂಲಕ ಎಲ್ಲರನ್ನೂ ರಂಜಿಸಿದ ಇಂಡೋನೇಷ್ಯಾದ ಅಣ್ಣ-ತಂಗಿ ಜೋಡಿ
ರಸೆಲ್ ವೈಪರ್ ಏಷ್ಯಾದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ. ಇದು ಪ್ರತಿವರ್ಷ ಸಾವಿರಾರು ಸಾವುಗಳಿಗೆ ಕಾರಣವಾಗುತ್ತದೆ. ಪ್ರಸ್ತುತ, ಮುರಾರಿ ಈ ಹಾವುಗಳನ್ನು ರಕ್ಷಿಸಿದ ಗ್ರಾಮದ ಹೆಸರು ಏನು ಎಂಬುದು ತಿಳಿದುಬಂದಿಲ್ಲ. ಮುರಾರಿ ಅವರ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಾವುಗಳನ್ನು ಉಳಿಸುವ ವಿಡಿಯೊಗಳಿಂದ ತುಂಬಿತುಳುಕುತ್ತಿದೆ. ಆದರೆ ಅದರಲ್ಲಿ ಅವರು ಅನೇಕ ಸಂದರ್ಭಗಳಲ್ಲಿ ಅವರ ಜೀವವನ್ನು ಅಪಾಯಕ್ಕೆ ತಳ್ಳಿದ್ದಾರೆ. ಈ ವಿಡಿಯೊದಲ್ಲಿ, ಅವರು ಮನೆಯ ಛಾವಣಿಯಲ್ಲಿ ಸಿಲುಕಿದ್ದ ಎರಡು ಹಾವುಗಳನ್ನು ಇತ್ತೀಚೆಗೆ ರಕ್ಷಿಸಿದ್ದಾರೆ. ಒಟ್ಟಾರೆ ಬಳಕೆದಾರರು ಮುರಾರಿಯ ಧೈರ್ಯವನ್ನು ಮೆಚ್ಚಿ ಹೊಗಳಿದ್ದಾರೆ.