Wednesday, 14th May 2025

Viral Video: ಲೋಕಲ್‌ ಟ್ರೈನ್‌ನಲ್ಲಿ ಕಣ್ಮನ ಸೆಳೆದ ಗಗನಸಖಿ; ಫಿದಾ ಆದ ನೆಟ್ಟಿಗರು-ವಿಡಿಯೊ ನೋಡಿ

Viral Video

ಮುಂಬೈ: “ನಮಸ್ಕಾರ್‌, ರೈಲ್‌ ಮೇ ಅಪ್ಕಾ ಸ್ವಾಗತ್‌ ಹೈ”  “ದಯವಿಟ್ಟು ನಿಮ್ಮ ಸೀಟ್ ಬೆಲ್ಟ್ ಗಳನ್ನು ತೆಗೆಯಿರಿ ಏಕೆಂದರೆ ಈಗ ನಮ್ಮ ರೈಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಗೆ ಹೊರಡಲು ಸಿದ್ಧವಾಗಿದೆ”. ಅರೇ… ಇದೇನು ಟ್ರೈನಾ, ಫ್ಲೈಟಾ ಎಂಬ ಗೊಂದಲ ನಿಮಗೆ ಕಾಡುತ್ತಿದೆಯಾ…? ಇದು ಪಕ್ಕಾ ಮುಂಬೈ ಲೋಕಲ್‌ ಟ್ರೈನ್‌. ತೃತೀಯ ಲಿಂಗಿ ಮಹಿಳೆಯೊಬ್ಬರು ಮುಂಬೈ ಲೋಕಲ್‌ ಟ್ರೈನ್‌ನಲ್ಲಿ ಏರ್‌ ಹೋಸ್ಟಸ್‌ ರೀತಿ ಪ್ರಕಟಣೆ ಮಾಡಿದ ವಿಡಿಯೊವೊಂದು ಇದೀಗ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ತೃತೀಯ ಲಿಂಗಿಗಳನ್ನು ನೋಡಿದರೆ ಮೂಗು ಮೂರಿಯುವವರೇ ಜಾಸ್ತಿ. ಇವರು ಯಾಕಾದರೂ ಸಿಗುತ್ತಾರಪ್ಪ ಎಂಬ ಮನೋಭಾವದಿಂದ ನೋಡುತ್ತಾರೆ. ಆದರೆ ಮುಂಬೈ ಲೋಕಲ್‌ ರೈಲಿನಲ್ಲಿ ತೃತೀಯ ಲಿಂಗಿಯೊಬ್ಬರು ಭೀಕ್ಷೆ ಬೇಡದೇ ವಿಭಿನ್ನ ರೀತಿಯಲ್ಲಿ ರೈಲ್ವೆ ಬೋಗಿಯಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿದೆ.

ಏನಿದೆ ಈ ವಿಡಿಯೊದಲ್ಲಿ…
ವೈರಲ್‌ ವಿಡಿಯೊದಲ್ಲಿ ದೇವಿ ವಘೇಲ್‌ ಎಂಬ ತೃತೀಯ ಲಿಂಗಿ ಮಹಿಳೆ ಮುಂಬೈನ ಲೋಕಲ್‌ ರೈಲಿನಲ್ಲಿ ವಿಮಾನದಲ್ಲಿ ಏರ್‌ ಹೋಸ್ಟಸ್‌ಗಳು ಮಾಡುವ ರೀತಿ ಪ್ರಕಟಣೆಗಳನ್ನು ಮಾಡಿದ್ದಾರೆ. “ನಮಸ್ಕಾರ್‌, ರೈಲ್‌ ಮೇ ಅಪ್ಕಾ ಸ್ವಾಗತ್‌ ಹೈ” ಎಂದು ಪಕ್ಕಾ ವಿಮಾನದಲ್ಲಿ ಏರ್‌ ಹೋಸ್ಟಸ್‌ಗಳು ಮಾಡುವ ರೀತಿ ಮಾಡಿದ್ದಾರೆ.

ರೈಲಿನಲ್ಲಿ ಭಿಕ್ಷಾಟನೆ ಮಾಡದೇ ಶಿಸ್ತಾಗಿ ಸೀರೆಯುಟ್ಟುಕೊಂಡು ಏರ್‌ಹೋಸ್ಟಸ್‌ ರೀತಿ ಅಭಿನಯಿಸಿದ್ದು ಪ್ರಯಾಣಿಕರ ಮೆಚ್ಚುಗೆಗೆ ಕಾರಣವಾಗಿದೆ. ಅದು ಅಲ್ಲದೇ ಇವರ ಈ ಅಭಿನಯವನ್ನು ಸಾಕಷ್ಟು ಜನ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದಾರೆ. ಇದಕ್ಕೆ ಖುಷಿಯಿಂದ ಪ್ರತಿಕ್ರಿಯಿಸಿದ ಅವರು “ವಿಡಿಯೊ ಮಾಡುತ್ತಿದ್ದೀರಾ….? ನನಗೂ ವಿಡಿಯೊ ಕಳುಹಿಸಿ ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:ಟ್ರಾಫಿಕ್‌ ರೂಲ್‌ ಬ್ರೇಕ್‌ ಮಾಡಿ ಸಿಕ್ಕಿಬಿದ್ದ ಯುವತಿ- ಈಕೆ ಮಾತು ಕೇಳಿ ಬಿದ್ದು ಬಿದ್ದು ನಕ್ಕ ಪೊಲೀಸರು; ವಿಡಿಯೊ ನೋಡಿ

ದೇವಿ ವಘೇಲ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಮುಂಬೈ ಲೋಕಲ್ ರೈಲಿನಲ್ಲಿ ಅವರ ಗಗನಸಖಿಯಂತಹ ಅಭಿನಯವನ್ನು ಜನರು ಶ್ಲಾಘಿಸಿದ್ದಾರೆ. “ಅವಳು ತುಂಬಾ ಮುದ್ದಾಗಿದ್ದಾಳೆ” ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ.”ಅವಳು ಗಗನಸಖಿಗಿಂತ ಚೆನ್ನಾಗಿದ್ದಾಳೆ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.