Monday, 12th May 2025

Viral Video: ನ್ಯೂಸ್ ಪೇಪರ್‌ ಉಟ್ಟುಕೊಂಡು ನ್ಯೂಸಾದ ಬೆಡಗಿ; ವೈರಲ್ ವಿಡಿಯೊ ನೀವೂ ನೋಡಿ

Viral Video

ಬೆಳಗ್ಗೆದ್ದು ನ್ಯೂಸ್‌ ಪೇಪರ್‌ ಓದಿ ಮೂಲೆಗೆ ಬಿಸಾಡುವವರೆ ಹೆಚ್ಚು. ಆದರೆ ಇಲ್ಲೊಬ್ಬರು ಮಹಿಳೆ ನ್ಯೂಸ್‌ ಪೇಪರ್‌ನಲ್ಲಿ ಸೀರೆ ತಯಾರಿಸಿ ಉಟ್ಟುಕೊಂಡಿದ್ದಾರೆ. ಹೌದು ಸೋಶಿಯಲ್‌ ಮೀಡಿಯಾದಲ್ಲಿ ಕಲೆ ಮತ್ತು ಕರಕುಶಲತೆಗಳಲ್ಲಿ ತೊಡಗಿಕೊಳ್ಳುವುದರಲ್ಲಿ  ಹೆಸರುವಾಸಿಯಾದ ಪಾರ್ವತಿ ಎಂಬ ಮಹಿಳೆ ನ್ಯೂಸ್ ಪೇಪರ್‌ನಲ್ಲಿ ಸೀರೆಯನ್ನು ತಯಾರು ಮಾಡಿದ್ದಾರೆ. ಅಲ್ಲದೇ ಅದನ್ನು ತಾವು ಧರಿಸಿಕೊಂಡು ಅದರ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್‌ (Viral Video) ಆಗಿದೆ. ನ್ಯೂಸ್ ಪೇಪರ್‌ಗಳನ್ನು ಬಳಸಿ ಅವರಿಗೆ ಆಕರ್ಷಕ ಸೀರೆಯನ್ನು ತಯಾರಿಸಲು ಸುಮಾರು  ನಾಲ್ಕು ಗಂಟೆಗಳು ಬೇಕಾಗಿದೆ ಎನ್ನಲಾಗಿದೆ. ಮತ್ತು ಆ ಸೀರೆ ತುಂಬಾ ನೈಜ ಮತ್ತು ಅದ್ಭುತವಾಗಿ ಕಾಣುತ್ತಿತ್ತು, ಅದು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.

ಕಲೆಯ ಮೇಲಿನ ಉತ್ಸಾಹದಿಂದ ಯಾವಾಗಲೂ ಕಲಾ ಕಾರ್ಯಾಗಾರಗಳನ್ನು ಆಯೋಜಿಸುವಲ್ಲಿ ನಿರತರಾಗಿದ್ದ ಅವರು ಇತ್ತೀಚಿಗೆ ನ್ಯೂಸ್ ಪೇಪರ್ ಬಳಸಿ ಸುಂದರವಾದ ಸೀರೆಯನ್ನ ತಯಾರಿಸಿದ ವಿಡಿಯೊ ಮಾಡಿದ್ದಾರೆ. ಈ ವಿಡಿಯೊದಲ್ಲಿ, ಅವರು ತಯಾರಿಸಿದ ಸೀರೆಯನ್ನು ಪ್ರದರ್ಶಿಸಿದ್ದಲ್ಲದೆ, ಅದನ್ನು ಹೇಗೆ ವಿನ್ಯಾಸಗೊಳಿಸಿದರು ಎಂದು ಜನರಿಗೆ ತಿಳಿಸಿದ್ದಾರೆ.  ಪಾರ್ವತಿ ತನ್ನ ನ್ಯೂಸ್ ಪೇಪರ್‌ನಿಂದ ತಯಾರಿಸಿದ ಸೀರೆಯನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ.

ವಿಡಿಯೊದಲ್ಲಿ ಅವರು  ಆಕರ್ಷಕ ಸೀರೆಯನ್ನು ಧರಿಸಿ ಅದರ ವಿಡಿಯೊವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ತನ್ನ ಮನೆಯ ಟೆರೇಸ್‍ನಲ್ಲಿ ನಿಂತಿದ್ದಾರೆ.  ಸೀರೆ ಎಷ್ಟು ಆರಾಮದಾಯಕವಾಗಿದೆ ಮತ್ತು ಅದು ಎಷ್ಟು ಪರಿಪೂರ್ಣವಾಗಿದೆ ಎಂದು ಪಾರ್ವತಿ ಜನರಿಗೆ ತೋರಿಸಿದ್ದಾರೆ.

ಅವರು ನ್ಯೂಸ್ ಪೇಪರ್‌ನಲ್ಲಿ ತಯಾರಿಸಿದ ಸೀರೆಯನ್ನು ಆಕರ್ಷಕವಾಗಿ ಉಟ್ಟಿದ್ದಾರೆ. ನೆರಿಗೆಗಳಿಂದ ಹಿಡಿದು ಪಲ್ಲುವರೆಗೆ, ಅವರು ತಾನು ರೆಡಿ ಮಾಡಿದ ಸೀರೆಯನ್ನು  ಜನರಿಗೆ ಪ್ರದರ್ಶಿಸಿದ್ದಾರೆ. ವಿಡಿಯೊದಲ್ಲಿ  ಅವರು ಎತ್ತರದ ಕುತ್ತಿಗೆಯ ಕ್ರಾಪ್ ಟಾಪ್‍ ಮೇಲೆ ಸೀರೆಯನ್ನು ಧರಿಸಿದ್ದರು. ಅವರು ಅದಕ್ಕೆ  ಬೂದು ಬಣ್ಣದ ರವಿಕೆಯನ್ನು ತೊಟ್ಟಿದ್ದರು.  ಅದು ನ್ಯೂಸ್ ಪೇಪರ್‌ನ ಕಪ್ಪು ಮತ್ತು ಬಿಳಿ ಪ್ರಿಂಟ್‍ಗೆ ಚೆನ್ನಾಗಿ ಹೊಂದಿಕೆಯಾಗಿದೆ.

ಅವರು ಈ ಸೀರೆಯನ್ನು ತಯಾರಿಸಲು ನ್ಯೂಸ್ ಪೇಪರ್‌ನ ಮೇಲೆ ಪೆನ್ನಿನಿಂದ ಅಳತೆಗಳನ್ನು ಬಿಡಿಸಿ ನಂತರ ಅವುಗಳನ್ನು ಕತ್ತರಿಸಿ ಸರಿಯಾದ ರೀತಿಯಲ್ಲಿ ಜೋಡಿಸಿದ್ದಾರೆ.  ತನ್ನ ಸೃಜನಶೀಲತೆ ಮತ್ತು ಕರಕುಶಲ ಕೌಶಲ್ಯಗಳನ್ನು ಬಳಸಿಕೊಂಡು, ಅವರು ನ್ಯೂಸ್ ಪೇಪರ್‌ ರಾಶಿಯನ್ನು ಉತ್ತಮ ಸೀರೆಯಾಗಿ ಪರಿವರ್ತಿಸಿದ್ದಾರೆ.

ಇದನ್ನೂ ಓದಿ:ವಿಮಾನದೊಳಗೆ ಮೈಮರೆತು ಸರಸವಾಡಿದ ದಂಪತಿ; ಖಾಸಗಿ ವಿಡಿಯೊ ಲೀಕ್

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು,  2.6 ಮಿಲಿಯನ್ ವೀಕ್ಷಣೆಗಳನ್ನು ಮತ್ತು 65,000ಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದುಕೊಂಡಿದೆ. ಹಲವು ನೆಟ್ಟಿಗರು ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. “ತುಂಬಾ ಚೆನ್ನಾಗಿದೆ, ಇದು ಚೆನ್ನಾಗಿ ಕಾಣುತ್ತಿದೆ” ಎಂದು ಒಬ್ಬರು ಬರೆದಿದ್ದಾರೆ. “ಇದು ತುಂಬಾ ಸುಂದರವಾಗಿ ಕಾಣುತ್ತದೆ” ಎಂದು ಇನ್ನೊಬ್ಬರು ಹೇಳಿದ್ದಾರೆ.