ಲಖನೌ: ಉತ್ತರ ಪ್ರದೇಶದ ಗಾಜಿಯಾಬಾದ್ನ ವಸತಿ ಸೊಸೈಟಿಯಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಸೆಕ್ಯುರಿಟಿ ಗಾರ್ಡ್ಗೆ ಪದೇ ಪದೆ ಕಪಾಳ ಮೋಕ್ಷ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ. ಈ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಸೆಕ್ಯುರಿಟಿ ಗಾರ್ಡ್ ಜತೆ ವಾದದಲ್ಲಿ ತೊಡಗಿದ್ದು, ತಕ್ಷಣ ಕೋಪಗೊಂಡ ಆತ ತಾನು ಕುಳಿತ ಕುರ್ಚಿಯನ್ನು ದೂರ ಎಸೆದು ಸೆಕ್ಯುರಿಟಿ ಗಾರ್ಡ್ ಕಪಾಳಕ್ಕೆ ಹೊಡೆಯುವ ಮೂಲಕ ಹಲ್ಲೆ ನಡೆಸಿದ್ದಾನೆ. ಆಗ ಸೆಕ್ಯುರಿಟಿ ಗಾರ್ಡ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರ ಜತೆ ಇನ್ನೊಬ್ಬ ವ್ಯಕ್ತಿ ನಿಂತಿದ್ದು, ಆತ ಮಾತ್ರ ಮೂಕ ಪ್ರೇಕ್ಷಕನಂತೆ ನಿಂತಿದ್ದಾನೆ. ಕೊನೆಗೆ ವೃದ್ಧ ವ್ಯಕ್ತಿಯೊಬ್ಬರು ಬಂದು ಈ ಜಗಳವನ್ನು ಬಿಡಿಸಿದ್ದಾರೆ.
Kalesh b/w Security guard and a Drunk young guy, he started slappinb security guard over some argument at Sipra Suncity Society, Ghaziabad UP
— Ghar Ke Kalesh (@gharkekalesh) December 6, 2024
pic.twitter.com/E7nCQ4mL34
ಈ ಘಟನೆಯ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ವೀಕ್ಷಕರು ಕೋಪಗೊಂಡಿದ್ದಾರೆ. ಘಟನೆಯ ಸಮಯದಲ್ಲಿ ಅಲ್ಲಿದ್ದ ವ್ಯಕ್ತಿ ಅವರನ್ನು ತಡೆಯದೆ ಸುಮ್ಮನೆ ಇದ್ದುದ್ದನ್ನು ಕಂಡು ಅನೇಕರು ಆತನ ಮೇಲೆ ಕಿಡಿಕಾರಿದ್ದಾರೆ. ಗಾಜಿಯಾಬಾದ್ ಪೊಲೀಸರು ಈ ಬಗ್ಗೆ ತ್ವರಿತ ಕ್ರಮ ಕೈಗೊಂಡಿದ್ದು, ದಾಳಿ ಮಾಡಿದ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಮತ್ತು ತನಿಖೆ ಕೂಡ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಛಾವಣಿ ಮೇಲೆ 3 ನಾಯಿಗಳನ್ನು ಕೂರಿಸಿ ಕಾರು ಚಲಾಯಿಸಿದ ಭೂಪ; ಕೇಳಿದ್ದಕ್ಕೆ ಹೀಗಾ ಮಾಡೋದು?!
ಸೆಪ್ಟೆಂಬರ್ನಲ್ಲಿ ಕೂಡ ಇಂತಹದೊಂದು ಘಟನೆ ನಡೆದಿತ್ತು. ಆ ಘಟನೆಯಲ್ಲಿ, ಉತ್ತರ ಪ್ರದೇಶದಲ್ಲಿ ಬ್ಯಾಡ್ಜ್ ಧರಿಸದ ಬಗ್ಗೆ ಪ್ರಶ್ನಿಸಿದ ಪತ್ರಕರ್ತರೊಬ್ಬರಿಗೆ ಪೊಲೀಸ್ ಅಧಿಕಾರಿಯೊಬ್ಬರು ಕಪಾಳ ಮೋಕ್ಷ ಮಾಡಿದ್ದಾರೆ. ವಿಡಿಯೊದಲ್ಲಿ ಪತ್ರಕರ್ತರು ಪೊಲೀಸರ ಬಳಿ ಬ್ಯಾಡ್ಜ್ ಧರಿಸದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ವಿಡಿಯೊ ಮುಂದುವರಿಯುತ್ತಿದ್ದಂತೆ, ಪತ್ರಕರ್ತರು ಮತ್ತಷ್ಟು ಹೇಳುತ್ತಾ “ನೀವು ಬ್ಯಾಡ್ಜ್ ಅನ್ನು ಏಕೆ ಧರಿಸಿಲ್ಲ? ನಾವು ನಿಮ್ಮನ್ನು ನಂಬುವುದಾದರೂ ಹೇಗೆ?” ಎಂದು ಕೇಳಿದ್ದಾರೆ. ನಂತರ ಅಲ್ಲಿದ್ದ ಇನ್ನೊಬ್ಬ ಪೋಲೀಸ್ ತನ್ನ ಹೆಸರಿನ ಬ್ಯಾಡ್ಜ್ ಕಡೆಗೆ ತೋರಿಸಿದ್ದಾರೆ. ಪತ್ರಕರ್ತ ಮತ್ತೆ ಪೊಲೀಸರಿಂದ ಕಾಣೆಯಾದ ಹೆಸರಿನ ಬ್ಯಾಡ್ಜ್ಗೆ ವಿವರಣೆಯನ್ನು ಕೇಳುತ್ತಾರೆ. ಈ ಸಮಯದಲ್ಲಿ, ಇನ್ನೊಬ್ಬ ಪೋಲೀಸ್ ತಾಳ್ಮೆ ಕಳೆದುಕೊಂಡು, ಪತ್ರಕರ್ತನಿಗೆ ಕಪಾಳ ಮೋಕ್ಷ ಮಾಡಿ ನಿಂದನೆಗಳನ್ನು ಮಾಡಿದ್ದಾರೆ.