ಶೋಯೆಪುರ (ಮಧ್ಯಪ್ರದೇಶ): ಅಕ್ರಮ ಮರಳುಗಾರಿಕೆ ನಡೆಸಲು ಅಧಿಕಾರಿಯೇ ತನ್ನ ಸಿಬ್ಬಂದಿಗೆ ಸೂಚನೆ ನೀಡುತ್ತಿರುವ ವಿಡಿಯೊ ಒಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಇದೀಗ ವೈರಲ್ (Viral Video) ಆಗುತ್ತಿದ್ದು ತೀವ್ರ ವಿವಾದವನ್ನು ಹುಟ್ಟುಹಾಕಿದೆ. ಮಧ್ಯಪ್ರದೇಶದ (Madhya Pradesh) ರಾಷ್ಟ್ರೀಯ ಚಂಬಲ್ ರಕ್ಷಿತಾರಣ್ಯದ (Chambal Sanctuary) ಅಧಿಕಾರಿಯೊಬ್ಬರು ಚಂಬಲ್ ನದಿಯ ಘಾಟ್ ಪ್ರದೇಶದಿಂದ (Chambal River’s ghats) ಅಕ್ರಮ ಮರಳುಗಾರಿಕೆ (Illegal sand excavation) ನಡೆಸಲು ಅನುಮತಿ ನೀಡುವಂತೆ ಈ ಅಧಿಕಾರಿ ಹೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ವೈರಲ್ ಆಗಿರುವ ಈ ವಿಡಿಯೊ ಕ್ಲಿಪ್‌ನಲ್ಲಿ ಚಂಬಲ್ ರಾಷ್ಟ್ರೀಯ ಅಭಯಾರಣ್ಯದ ಸೂಪರಿಂಡೆಂಟ್ ಯೋಗಿಯೇಂದ್ರ ಪರ್ದೆ ತನ್ನ ಕೈಕೆಳಗಿನ ಸಿಬ್ಬಂದಿಗೆ ಅಕ್ರಮ ಮರಳುಗಾರಿಕೆ ಕೃತ್ಯಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಕಂಡು ಬಂದಿದೆ. ಇಲ್ಲಿನ ಚಂಬಲ್ ಘಾಟ್ ಪ್ರದೇಶದಲ್ಲಿ ಹಣಕ್ಕಾಗಿ ಮರಳು ದಂಧೆಕೋರರೊಂದಿಗೆ ಸಹಕರಿಸುವಂತೆ ಈ ಉನ್ನತ ಅಧಿಕಾರಿ ಹೇಳಿರುವುದು ಇದೀಗ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.
ಲಭ್ಯ ಮಾಹಿತಿಗಳ ಪ್ರಕಾರ, ಭ್ರಷ್ಟಾಚಾರಕ್ಕೆ ಉತ್ತೇಜನ ನೀಡುವ ರೀತಿಯಲ್ಲಿರುವ ಎರಡು ವಿಡಿಯೊಗಳು ಮತ್ತು ಒಂದು ಆಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.
ಒಂದು ವಿಡಿಯೊದಲ್ಲಿರುವಂತೆ, ಸೂಪರಿಂಡೆಂಟ್ ಪರ್ದೆ ತನ್ನ ಸಿಬ್ಬಂದಿಗೆ ವಿವಿಧ ಘಾಟ್‌ಗಳಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಮಾಡಿಕೊಡುವಂತೆ ಸೂಚನೆ ನೀಡುತ್ತಿರುವುದು ಕಂಡುಬಂದಿದೆ ಮತ್ತು ಇದರಿಂದ ಒಟ್ಟು 7ಲಕ್ಷ ರೂ. ಸಿಗುತ್ತವೆ ಎಂದು ಹೇಳುತ್ತಿರುವುದು ಕೇಳಿಸುತ್ತಿದೆ.
ʼʼಪ್ರತಿಯೊಬ್ಬರ ಬೇಡಿಕೆಗಳನ್ನು ಪೂರೈಸಲು ನಮಗೆ 7 ಲಕ್ಷ ರೂ. ಹೊಂದಿಸುವ ಅಗತ್ಯವಿದೆ. ಈ ಮೂಲಕ ನನಗೆ 1.5 ಲಕ್ಷ ರೂ. ಉಳಿಯುತ್ತದೆ ಮತ್ತು ಉಳಿದವರು ಅವರ ಪಾಲನ್ನು ಪಡಯುತ್ತಾರೆʼʼ ಎಂದು ಆ ವ್ಯಕ್ತಿ ಹೇಳುತ್ತರುವುದು ರೆಕಾರ್ಡ್ ಆಗಿದೆ.
ಇನ್ನೊಂದು ವಿಡಿಯೊದಲ್ಲಿ ಪರ್ದೆ ಬೆಡ್ ಒಂದರ ಮೇಲೆ ಕುಳಿತುಕೊಂಡಿರುವುದು ಕಂಡುಬಂದಿದೆ ಮತ್ತು ಅಲ್ಲಿ ಲೌಡ್ ಸ್ಪೀಕರ್‌ನಲ್ಲಿ ತನ್ನ ಮೊಬೈಲಗಗನಲ್ಲಿ ಮಾತನಾಡುತ್ತಿರುವುದು ರೆಕಾರ್ಡ್ ಆಗಿದೆ. ‘ಮ್ಯಾನೇಜ್‌ಮೆಂಟ್ ಅತ್ಯಗತ್ಯ. ಹಣವನ್ನು ಹತ್ತು ಜನರ ನಡುವೆ ಪಾಲು ಮಾಡಲಾಗುತ್ತದೆ. ಒಂದುವೇಳೆ ನಾನೊಬ್ಬನೇ ಹಣವನ್ನು ಇಟ್ಟುಕೊಂಡರೆ, ನಾನೂ ಬದುಕಲಾರೆ ಮತ್ತು ನಿಮ್ಮನ್ನೂ ಉಳಿಸಲು ನನ್ನಿಂದ ಸಾಧ್ಯವಿಲ್ಲʼ’ ಎಂದು ಹೇಳುತ್ತಿರುವುದು ರೆಕಾರ್ಡ್ ಆಗಿದೆ.
ಇನ್ನೂ ಮುಂದುವರಿದು ಪರ್ದೆ, ಗಣಿಕಾರಿಕೆ ಮೂಲಕ ಉಂಟಾಗುವ ಹೊಂಡಗಳನ್ನು ಮುಚ್ಚುವಂತೆ ತನ್ನ ಸಿಬ್ಬಂದಿಗೆ ಸೂಚಿಸುತ್ತಿದ್ದಾರೆ. ಜೆಸಿಬಿ ಯಂತ್ರಗಳ ಮೂಲಕ ಈ ಅಕ್ರಮ ಗಣಿಗಾರಿಕೆಯ ದೊಡ್ಡ ದೊಡ್ಡ ಹೊಂಡಗಳನ್ನು ಮುಚ್ಚವಂತೆ ಅವರು ತಮ್ಮ ಸಿಬ್ಬಂದಿಗೆ ಸೂಚನೆ ನೀಡುತ್ತಿದ್ದಾರೆ.
ಇದನ್ನೂ ಓದಿ: Year-Ender 2024: ಅಲ್ಲು ಅರ್ಜುನ್ ಬಂಧನ, ಪೂನಂ ಪಾಂಡೆ ಫೇಕ್ ನಿಧನ- 2024ರ ಟಾಪ್ 10 ಸಿನಿಮೀಯ ಪ್ರಕರಣಗಳಿವು
ಬಿಡುಗಡೆಯಾಗಿರುವ ಆಡಿಯೊ ಈ ವಿವಾದಕ್ಕೆ ಇನ್ನೊಂದು ಸ್ವರೂಪವನ್ನು ನೀಡಿದೆ. ಸ್ಥಳೀಯ ನಿವಾಸಿಗಳು, ಮರಳು ಗಣಿಗಾರಿಕೆಯಿಂದಾಗಿ ಮೊಸಳೆಗಳು ದಲಾರಾ ಗ್ರಾಮಕ್ಕೆ ಬರುತ್ತಿವೆ ಎಂದು ಪರ್ದೆ ಅವರಿಗೆ ದೂರು ನೀಡುತ್ತಿದ್ದಾರೆ. ಆದರೆ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಸೂಚಿಸುವ ಬದಲು ದೂರು ನೀಡಿದವರನ್ನೇ ಬಯ್ಯುತ್ತಿರುವುದು ಈ ಆಡಿಯೊ ದಾಖಲಾಗಿದೆ. “ಒಂದು ವೇಳೆ ನೀವು ಮರಳು ಗಣಿಗಾರಿಕೆ ನಡೆಸಿದ್ರೆ, ಮೊಸಳೆಗಳು ಬೇರೆಡೆಗೆ ಹೋಗುತ್ತವೆ. ನಿಮ್ಮನ್ನು ಕಚ್ಚಲು ಇನ್ನೂ ನಾಲ್ಕು ಮೊಸಳೆಗಳನ್ನು ಬಿಡುತ್ತೇನೆʼʼ ಎಂದು ಪರ್ದೆ ಹೇಳುತ್ತಿರುವುದು ರೆಕಾರ್ಡ್ ಆಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ಡಿ.ಎಫ್.ಒ. ಸುಜೀತ್ ಪಾಟೀಲ್ ಪ್ರತಿಕ್ರಿಯೆ ನೀಡಿ, ʼʼನಾನಿನ್ನೂ ವಿಡಿಯೊಗಳನ್ನು ನೋಡಿಲ್ಲ. ಆದರೆ ಹಿರಿಯ ಅಧಿಕಾರಿಗಳು ಭೋಪಾಲ್‌ನಿಂದ ನನ್ನನ್ನು ಸಂಪರ್ಕಿಸಿದ್ದಾರೆ. ನಾವು ಇದರ ಬಗ್ಗೆ ಒಂದು ತನಿಖೆಯನ್ನು ನಡೆಸುತ್ತೇವೆ ಮತ್ತು ಸೂಕ್ತ ಕ್ರಮ ಕೈಗೊಳ್ಳುತ್ತೇವೆʼʼ ಎಂದು ಪ್ರತಿಕ್ರಿಯಿಸಿದ್ದಾರೆ.