Sunday, 11th May 2025

Viral Video: ಸೂಪರ್‌ ಸ್ಟೆಪ್ಸ್‌ ಹಾಕಿ ನೆಟ್ಟಿಗರ ಮನ ಗೆದ್ದ ಮದುಮಗ; ವಿಡಿಯೊ ನೋಡಿ

Viral Video

ಸಂಪ್ರದಾಯ, ಮೋಜು, ಮಸ್ತಿ, ಹಾಡು ಕುಣಿತ, ಭಾವನೆಗಳ ಹೊಯ್ದಾಟ, ಸಂಬಂಧಗಳ ಬೆಸುಗೆಯ ತೋರಣದಲ್ಲಿ ಮಿಂದೇಳುವ ಹಬ್ಬ ಅಂದ್ರೆ ಅದು ಮದುವೆ. ಇತ್ತೀಚೆಗಂತೂ ಮದುವೆಗೆ ಸಂಬಂಧಿಸಿದ ನಾನಾ ರೀತಿಯ ವಿಡಿಯೊಗಳು ಅಂತರ್ಜಾಲದಲ್ಲಿ ಓಡಾಡುತ್ತಲೇ ಇರುತ್ತವೆ. ಇದೀಗ ಮದುವೆ ಸಮಾರಂಭದ ಅಂಥದ್ದೊಂದು ವಿಡಿಯೊ ಸಕ್ಕತ್‌ ವೈರಲ್‌(Viral Video) ಆಗಿದೆ. ಮದುಮಗ ಹಾಕಿದ ಜಬರ್ದಸ್ತ್‌ ಡಾನ್ಸ್‌ ಸ್ಟೆಪ್ಸ್‌ಗೆ ವೀಕ್ಷಕರು ಫಿದಾ ಆಗಿದ್ದಾರೆ.

ವೈರಲ್‌ ಆದ ವಿಡಿಯೊದಲ್ಲಿ ಫಾರ್ಮಲ್‌ ದಿರಸು ತೊಟ್ಟು ʻಅಖಿಯಾ ಗುಲಾಬ್‌ʼ ಹಾಡಿಗೆ ಮದುಮಗ ಅದ್ಧೂರಿಯಾಗಿ ನೃತ್ಯ ಮಾಡಿದ್ದಾರೆ. ಸದಾ ಫಿಟ್‌ನೆಸ್‌ ಹಾಗೂ ನೃತ್ಯ ಸಾಮರ್ಥ್ಯಕ್ಕೂ ಇರುವ ನಂಟಿನ ಬಗ್ಗೆ ಮಾತಾಡುತ್ತಿದ್ದ ಜನರೆಲ್ಲ ಮದುಮಗನ ಎನರ್ಜಿ ಹಾಗೂ ನೃತ್ಯ ನೋಡಿ ಸೈಲೆಂಟ್‌ ಆಗಿ ಚಪ್ಪಾಳೆ ತಟ್ಟುತ್ತಿದ್ದಾರೆ.

ಮದುಮಗನ ಈ ನೃತ್ಯವನ್ನು ವೆಡ್ಡಿಂಗ್‌ ನೃತ್ಯ ಸಂಯೋಜನಾ ಸಂಸ್ಥೆಯಾದ ʻದ ಶಾದಿ ಶೇಕರ್ಸ್‌ʼ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್‌ ಮಾಡಿತ್ತು. ನವೆಂಬರ್‌ ಅಂತ್ಯದಲ್ಲಿ ಶೇರ್‌ ಮಾಡಲಾದ ಈ ವಿಡಿಯೊ ಈಗಾಗಲೇ 14.8 ಮಿಲಿಯನ್‌ ವ್ಯೂಸ್‌ ಪಡೆದುಕೊಂಡಿದೆ.

ಈ ವಿಡಿಯೊ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಇನ್‌ಫ್ಲುಯೆನ್ಸರ್‌ಗಳು, ಜನಪ್ರಿಯ ತಾರೆಗಳು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಾಂಜಾನಿಯಾದ ಅಂತರ್ಜಾಲದ ಸೆನ್ಸೇಶನ್‌ ಎಂದೇ ಖ್ಯಾತಿ ಪಡೆದಿರುವ ಕಿಲಿ ಪೌಲ್‌, ʻನೃತ್ಯದ ಪ್ರತಿ ಹೆಜ್ಜೆಯನ್ನೂ ಸ್ಪಷ್ಟವಾಗಿ ಅಷ್ಟೇ ಮೃದುವಾದ ಚಲನೆಯಿಂದ ನಿರೂಪಿಸಿದ್ದೀರಿ. ನೀವು ನನ್ನ ಗೌರವವನ್ನು ಗಳಿಸಿಕೊಂಡಿರಿʼ ಎಂದು ಬರೆದಿದ್ದಾರೆ.

ನಟ ಹಾಗೂ ಇನ್‌ಫ್ಲುಯೆನ್ಸರ್‌ ಆಗಿರುವ ಅಂಕುಶ್‌ ಕಸಾನಾ, “ಪುಸ್ತಕದ ಸಾಮರ್ಥ್ಯವನ್ನು ಅದರ ಮುಖಪುಟದಿಂದ ಅಳೆಯಬಾರದು ಎನ್ನುವುದುಕ್ಕೆ ಇವರೇ ಅತ್ಯುತ್ತಮ ಉದಾಹರಣೆ” ಎಂದಿದ್ದಾರೆ. ಅಟೊಮೊಬೈಲ್‌ ಎಂಥೂಸಿಯಾಸ್ಟ್‌ ಹಾಗೂ ಇನ್‌ಫ್ಲುಯೆನ್ಸರ್‌ ಎಂದು ಗುರುತಿಸಿಕೊಂಡಿರುವ ಸೌಮೇಂದ್ರ ಜೇನಾ, “ಉಫ್‌, ಎಪಿಕ್‌ ಬ್ರದರ್‌” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ದಿನದಲ್ಲಿ ಸಾವಿರ ಮಂದಿಯೊಂದಿಗೆ ಸೆಕ್ಸ್‌ ಮಾಡುವುದೇ ಗುರಿ: ಟ್ರೇನಿಂಗ್‌ನಲ್ಲಿ ಬ್ಯುಸಿ ಆದ ನಟಿ!

“ಜನರು ಏನೆನ್ನುತ್ತಾರೆ ಎನ್ನುವುದರ ಬಗ್ಗೆ ಗಮನ ಕೊಡಬೇಡಿ. ನಿಮ್ಮ ಮುಂದೆ ಕುಳಿತಿರುವ ಹುಡುಗಿ ಖಂಡಿತವಾಗಿಯೂ ಖುಷಿ ಪಟ್ಟಿರುತ್ತಾಳೆ. ವಾವ್‌, ಸೂಪರ್ಬ್‌” ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.