Monday, 12th May 2025

Viral Post: ‘ಪುಷ್ಪ ಕೋ ಜುಕಾ ದಿಯಾ’ – ಅಲ್ಲು ಅರ್ಜುನ್ ಬಂಧನದಿಂದ ‘ಶೇಖಾವತ್’ ಫುಲ್ ಖುಷ್ ಆಗಿದ್ದಾರಂತೆ..!

ಹೈದರಾಬಾದ್​: ಸಂಧ್ಯಾ ಥಿಯೇಟರ್ ಘಟನೆಗೆ ಸಂಬಂಧಿಸಿದಂತೆ ಐಕಾನ್ ಸ್ಟಾರ್ ಅರೆಸ್ಟ್ ಆಗಿದ್ದು ಎಲ್ಲರಿಗೂ ಶಾಕ್ ಕೊಟ್ಟಿತ್ತು. ಪುಷ್ಪ 2 (Pushpa 2 The Rule) ಸಿನಿಮಾದ ಸಕ್ಸಸ್ ಖುಷಿಯಲ್ಲಿ ಇರುವಾಗಲೇ ನಟ ಅಲ್ಲು ಅರ್ಜುನ್ (Allu Arjun) ಅರೆಸ್ಟ್ ಆಗಿದ್ದರು. ಅಲ್ಲು ಅರ್ಜುನ್ ಅವರು ತಮ್ಮ ಮನೆಯಲ್ಲಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾಗಲೇ ಬಂದಂತಹ ಪೊಲೀಸರು (Police) ನಟನನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದರು.

ನಟನಿಗೆ 14 ದಿನಗಳ ನ್ಯಾಯಾಂಗ ಬಂಧವನ್ನೂ ವಿಧಿಸಲಾಗಿತ್ತು. ಆದರೆ ಆ ನಂತರ ನಟ ಅಲ್ಲು ಅರ್ಜುನ್ ಅವರಿಗೆ ಮಧ್ಯಂತರ ಜಾಮೀನು ನೀಡಿ ಬಿಡುಗಡೆ ಮಾಡಲಾಯ್ತು. ಈ ಘಟನೆಯ ಬೆನ್ನಲ್ಲೇ ಅಲ್ಲು ಅರ್ಜುನ್ ಗೆ ಸಂಬಂಧಪಟ್ಟಂತೆ ಸಾಕಷ್ಟು ಮೆಮ್ಸ್ ಗಳು ವೈರಲ್(Viral Post) ಆಗುತ್ತಿದ್ದು, ಅವರ ಬಂಧನದ ವಿಷಯವನ್ನು ಕೊನೆಗೂ ಶೇಖಾವತ್ ಪುಷ್ಪನನ್ನು ಜೈಲಿಗೆ ಹಾಕುವಲ್ಲಿ ಯಶಸ್ವಿಯಾದ ಎಂಬ ಪೋಸ್ಟ್ ಗಳನ್ನು ಕ್ರಿಯೇಟ್‌ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ..

ಪುಷ್ಪ 2 :ದಿ ರೂಲ್ (Pushpa 2 The Rule), 2021 ರ ಹಿಟ್‌ ಸಿನಿಮಾ. ಇದರ ಮುಂದುವರಿದ ಭಾಗ ಪುಷ್ಪ: ದಿ ರೈಸ್‌ (Pushpa The Rise). ಈ ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಸಿನಿಮಾ ರಿಲೀಸ್‌‌ ಆದ ಬಳಿಕ ಅಲ್ಲು ಅರ್ಜುನ್‌ (Allu Arjun) ಅವರಷ್ಟೇ ಸಖತ್‌ ಸುದ್ದಿಯಾಗಿದ್ದು ಫಹಾದ್‌ ಫಾಸಿಲ್‌‌‌. ಮೊದಲ ಭಾಗದಲ್ಲಿ ಅಷ್ಟಾಗಿ ಸ್ಕ್ರೀನ್‌ ಸ್ಪೇಸ್‌‌ (Screen Space) ಸಿಗದೇ ಇದ್ದರೂ ಅವರ ಪಾತ್ರದ ಮನವರಿಕೆಯನ್ನು ವೀಕ್ಷಕರಿಗೆ ಮಾಡಿಕೊಟ್ಟಿದ್ದರು. ಅದರಂತೆ ಈ ಭಾಗದಲ್ಲೇ ಅವರದ್ದೇ ಹವಾ ಆಗಿತ್ತು.

“ಪುಷ್ಪಾ (ಅಲ್ಲು ಅರ್ಜುನ್) ಮತ್ತು ಶೇಖಾವತ್ (ಫಹಾದ್ ಫಾಸಿಲ್) ಪಾತ್ರಗಳು ಪ್ರೇಕ್ಷಕರ ಮನದಲ್ಲಿ ಹಾಗೇ ಉಳಿದಿದ್ದು, ಸೋಷಿಯಲ್‌ ಮೀಡಿಯಾದಲ್ಲೂ ಫಹಾದ್‌ ಅವರ ನಟನೆ ಕುರಿತು ಸಾಕಷ್ಟು ಮೆಚ್ಚುಗೆಗಳೂ ಇವೆ. ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್ ಐಪಿಎಸ್ ಪಾತ್ರದಲ್ಲಿ ಪ್ರತಿಭಾವಂತ ಫಹಾದ್ ಫಾಸಿಲ್ ಅಭಿನಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಇದೀಗ ಶೇಖಾವತ್ ಹಾಗೂ ಪುಷ್ಪಾ ಪಾತ್ರವನ್ನು ಮುಂದಿಟ್ಟುಕೊಂಡು ಅಲ್ಲು ಅರ್ಜುನ್ ಬಂಧನದ ಸುದ್ದಿಯನ್ನು ವಿಡಂಬಣೆ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಸಾಕಷ್ಟು ಪೋಸ್ಟರ್ ಗಳು ಸದ್ದು ಮಾಡುತ್ತಿವೆ.

ಈ ಸುದ್ದಿಯನ್ನು ಓದಿ: Allu Arjun: ಕಾನೂನು ಪಾಲಿಸುವ ನಾಗರಿಕ ನಾನು… ತನಿಖೆಗೆ ಸಹಕರಿಸುತ್ತೇನೆ; ಜೈಲಿನಿಂದ ರಿಲೀಸ್‌ ನಂತರ ಅಲ್ಲು ಅರ್ಜುನ್‌ ಫಸ್ಟ್‌ ರಿಯಾಕ್ಷನ್‌

ಇನ್ನು ಅಲ್ಲು ಅರ್ಜುನ್ ಬಂಧನಕ್ಕೆ ಸಂಬಂಧಿಸಿದಂತೆ ಕೆಲವರು ವಿರೋಧವನ್ನು ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಹೈದಾರಬಾದ್ ಪೊಲೀಸರ ನಡೆಯನ್ನು ಶ್ಲಾಘಿಸಿದ್ದಾರೆ.