Wednesday, 14th May 2025

Viral Post: ಇಂಟರ್ನೆಟ್‌ನಲ್ಲಿ ಭಾರೀ ಟ್ರೆಂಡ್‌ ಆಗಿದ್ದ ʼರಷ್ಯನ್‌ ಚಾಯ್‌ವಾಲಿʼ ವಿರುದ್ಧ ಫತ್ವಾ! ಅಂಗಡಿಗೆ ಬೀಗ; ಕಾರಣವೇನು?

Viral Video

ಕೋಲ್ಕತಾ: ‘ರಷ್ಯಾದ ಚಾಯ್ ವಾಲಿ’ ಎಂದೂ ಫೇಮಸ್‌ ಆಗಿದ್ದ ಕೋಲ್ಕತಾದ ಪಪಿಯಾ ಘೋಷಾಲ್ ಅವರಿಗೆ ಲಿಂಗ ತಾರತಮ್ಯದ ಆರೋಪದ ಮೇಲೆ ಕೋಲ್ಕತ್ತಾದ ಆಂಡುಲ್‌ನಲ್ಲಿರುವ ಚಹಾ ಅಂಗಡಿಯನ್ನು ಮುಚ್ಚುವಂತೆ ಫತ್ವಾ ಹೊರಡಿಸಲಾಗಿದೆ. ಇದೀಗ ಈ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೈರಲ್‌(Viral Post) ಆಗಿದೆ.

ಸ್ವಂತ ಬ್ಯುಸಿನೆಸ್‌ ಮಾಡಬೇಕು ಎಂಬ ಕನಸು ಕಂಡಿದ್ದ ಘೋಷಾಲ್ ಕನಸನ್ನು ಈಡೇರಿಸಿಕೊಳ್ಳಲು ಮಾಡುತ್ತಿದ್ದ ಕೆಲಸವನ್ನು ಬಿಟ್ಟಿದ್ದರಂತೆ. ನಾಲ್ಕು ತಿಂಗಳ ಹಿಂದೆ ದೊಮ್ಜೂರ್ ಬಳಿಯ ಅಂಕುರ್ಹತಿಯಲ್ಲಿ ಸಣ್ಣದೊಂದು ಚಹಾ ಅಂಗಡಿಯನ್ನು ಶುರುಮಾಡಿದ್ದರು. ಈ ಚಹಾದ ಅಂಗಡಿಯಿಂದ ಘೋಷಾಲ್ ಸಿಕ್ಕಾಪಟ್ಟೆ ಫೇಮಸ್‌ ಆಗಿದ್ದರು. ಇದೇ ಕಾರಣಕ್ಕೆ ಅವರು ಕಿರುಕುಳವನ್ನು ಎದುರಿಸಿ ಕೊನೆಗೆ ಅಂಗಡಿಯನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿತ್ತು.

ಘೋಷಾಲ್ ಅವರ ಪ್ರಕಾರ, ಫತ್ವಾ ಹೊಂದಿರುವ ಪೋಸ್ಟರ್ ಅನ್ನು ಗ್ರಾಮದಲ್ಲಿ ಹಾಕಲಾಗಿದ್ದು, ಅಂಗಡಿಯನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಗ್ರಾಮದ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಮತ್ತು ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ “ಕೊಳಕು ಚಿತ್ರಗಳು” ಇವೆ, ಅದು “ಸಮಾಜ ವಿರೋಧಿ ಜನರನ್ನು” ಆಕರ್ಷಿಸಿದೆ ಎಂದು ಸ್ಥಳೀಯ ಕ್ಲಬ್ ಸದಸ್ಯರು ಆರೋಪಿಸಿದ್ದಾರೆ.

“ಆ ಜನರು ಯಾರೆಂದು ನನಗೆ ತಿಳಿದಿಲ್ಲ. ಕೆಲವರು ಅಲ್ಲಿಗೆ ಬಂದು ನೋಟಿಸ್ ಪೋಸ್ಟ್ ಮಾಡಿ, ನನ್ನ ಚಹಾದಂಗಡಿಯನ್ನು ಮತ್ತೆ ತೆರೆಯದಂತೆ ಆದೇಶಿಸಿದ್ದಾರೆ. ಇದು ತುಂಬಾ ಬೇಸರವನ್ನುಂಟುಮಾಡಿತು. ಅವರು ಒಂದು ರೀತಿಯ ಸಮಾಜ ವಿರೋಧಿ ಜನರು. ಅದು ಅಲ್ಪಸಂಖ್ಯಾತ ಪ್ರಾಬಲ್ಯದ ಪ್ರದೇಶವಾಗಿತ್ತು, ಆದರೆ ಹಿಂದೂ ಅಥವಾ ಮುಸ್ಲಿಂ ಮುಖ್ಯವಲ್ಲ ಎಂದು ನಾನು ಭಾವಿಸುತ್ತೇನೆ – ಇದು ಮನಸ್ಥಿತಿಗೆ ಸಂಬಂಧಿಸಿದೆ. ಸ್ಥಳೀಯ ಕ್ಲಬ್‌ಗಳು ಹಣಕ್ಕೆ ಬೇಡಿಕೆ ಇಟ್ಟವು, ಮತ್ತು ನಾನು ಅದನ್ನು ಅವರಿಗೆ ನೀಡುವುದಾಗಿ ಭರವಸೆ ನೀಡಿದೆ, ಆದರೆ ಯಾರೂ ನನಗೆ ಸಹಾಯ ಮಾಡಲಿಲ್ಲ. ಸ್ಥಳೀಯ ಆಡಳಿತವೂ ಸಹಾಯ ಮಾಡಲಿಲ್ಲ. ನಾನು ನನ್ನ ಅಂಗಡಿಯನ್ನು ಮತ್ತೆ ತೆರೆಯಲು ಬಯಸುತ್ತೇನೆ” ಎಂದು ಘೋಷಾಲ್ ಹೇಳಿದ್ದಾರೆ.

ಘೋಷಾಲ್ ಸ್ವತಃ ಅಂಗಡಿಯನ್ನು ನಡೆಸುತ್ತಿಲ್ಲ ಇತರರು ಸಹಾಯ ಮಾಡುತ್ತಿದ್ದಾರೆ ಎಂದು ಕ್ಲಬ್ ಸದಸ್ಯರು ಹೇಳಿದ್ದಾರೆ. ಇದು ಗ್ರಾಮದ “ನಿಯಮಗಳಿಗೆ ವಿರುದ್ಧವಾಗಿದೆ” ಎಂದು ಕ್ಲಬ್‌ ಸದಸ್ಯರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: ಶ್ವಾನಕ್ಕಾಗಿ ವಿಮಾನದಲ್ಲಿ ಫಸ್ಟ್ ಕ್ಲಾಸ್‍ ಸೀಟ್ ಬಿಟ್ಟುಕೊಡುವಂತೆ ಪಟ್ಟು ಹಿಡಿದ ಭೂಪ!

ಘೋಷಾಲ್ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ದೊಮ್ಜೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ರಾಷ್ಟ್ರೀಯ ಹೆದ್ದಾರಿಯ ಸರ್ಕಾರಿ ಭೂಮಿಯಲ್ಲಿ ಅಂಗಡಿಯನ್ನು ನಿರ್ಮಿಸಿರುವುದರಿಂದ ನೇರವಾಗಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.