ಜಗತ್ತಿನಲ್ಲಿ ಪ್ರತೀ ದಿನ ನೂರಾರು ವಿಸ್ಮಯಗಳು ಘಟಿಸುತ್ತಲೇ ಇರುತ್ತವೆ. ಮೂರು ಕಾಲಿನ ಕರು ಜನನ, ಮೂರು ಕಣ್ಣಿನ ಶಿಶು ಜನನ, ಐದು ಕಾಲುಗಳ ಪ್ರಾಣಿ ಜನನ.. ಹೀಗೆ ವಿಚಿತ್ರ ಸುದ್ದಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಅದಕ್ಕೊಂದು ಉದಾಹರಣೆಯೆಂಬಂತೆ ಉತ್ತರಪ್ರದೇಶದಲ್ಲಿ (Uttar Pradesh) ಮನುಷ್ಯರ ಮುಖವನ್ನು ಹೋಲುವ ಆಡಿನ ಮರಿಯೊಂದು ಜನಿಸಿದ್ದು, ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿ ತಲ್ಲಣ ಸೃಷ್ಟಿಸಿದೆ.
ಉತ್ತರಪ್ರದೇಶದ ಮೈನ್ ಪುರಿ ಜಿಲ್ಲೆಯಲ್ಲಿ ಈ ರೀತಿ ಅಸಹಜ ಮುಖಚರ್ಯೆಯ ಆಡಿನ ಮರಿ ಜನಿಸಿದ್ದು ಇದನ್ನು ಕಂಡು ಗ್ರಾಮಸ್ಥರು ಬೆಚ್ಚಿದ್ದಾರೆ. ಇಲ್ಲಿನ ಕಿಶ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನಿಸಿರುವ ಈ ಆಡಿನ ಮರಿಯು ಉಳಿದ ಆಡಿನ ಮರಿಗಳಂತೆ ಇಲ್ಲದೆ, ಕೂದಲಿನಿಂದ ಕೂಡಿದ್ದು, ಅದರ ನಾಲಗೆಯು ಮುಖದ ಒಂದು ಭಾಗಕ್ಕೆ ಚಾಚಿಕೊಂಡಂತಿದೆ. ಮಾತ್ರವಲ್ಲದೆ ಈ ಆಡಿನ ಮರಿಯ ಕಣ್ಣುಗಳೂ ಸಹ ಉಳಿದ ಆಡಿನ ಮರಿಗಳ ಕಣ್ಣುಗಳಿಂತ ಭಿನ್ನವಾಗಿದೆ. ಈ ಆಡಿನ ಮರಿ ಇದೀಗ ನೋಡಲು ಮನುಷ್ಯರ ಮುಖದಂತೆ ಕಾಣಿಸುತ್ತಿರುವುದು ಗ್ರಾಮಸ್ಥರಲ್ಲಿ ಭೀತಿ ಸಹಿತ ಅಚ್ಚರಿಗೆ ಕಾರಣವಾಗಿದೆ.
ಈ ವಿಚಿತ್ರ ಆಡಿನ ಮರಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇಲ್ಲಿನ ಶೇರ್ ಸಿಂಗ್ ಎನ್ನುವವರ ಮನೆಯಲ್ಲಿ ಈ ಆಡಿನ ಮರಿಯ ಜನನವಾಗಿದೆ. ಸಿಂಗ್ ಅವರು ಈ ಆಡಿನ ಮರಿಯನ್ನು ಹಿಡಿದುಕೊಂಡು ಅದರ ವಿಚಿತ್ರ ದೇಹ ರಚನೆಯನ್ನು ತೋರಿಸುತ್ತಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ.
ಗೊಂಬೆಗಿರುವಂತಹ ಕಣ್ಣುಗಳು, ಉದ್ದನೆಯ ನಾಲಗೆ, ಗಲ್ಲ ಮತ್ತು ದೇಹದಲ್ಲಿ ಕೂದಲು ಇರುವ ಈ ಆಡಿನ ಮರಿಯ ತಲೆ ಭಾಗ ಕೂದಲಿನಿಂದ ಆವೃತವಾಗಿದ್ದು, ಇದರ ಮುಖಚರ್ಯೆ ಮನುಷ್ಯರ ಮುಖವನ್ನು ಹೋಲುವಂತಿದೆ. ಆದರೆ, ಇಂತಹ ವಿಚಿತ್ರ ಪ್ರಕರಣಗಳು ಈ ಹಿಂದೆಯೂ ವರದಿಯಾಗಿದ್ದು, ಮನುಷ್ಯರ ಚಹರೆಯನ್ನು ಹೋಲುವ ಆಡಿನ ಮರಿಗಳು ಈ ಹಿಂದೆಯೂ ಜನಿಸಿದ್ದು ಸುದ್ದಿಯಾಗಿತ್ತು. ಆದರೆ ಇಂತಹ ವಿಚಿತ್ರ ಆಡಿನ ಮರಿಗಳು ಬದುಕುಳಿದ ಪ್ರಕರಣಗಳು ಅಪರೂಪವೆನ್ನಬಹುದು.
ಇದನ್ನೂ ಓದಿ: Viral Video: ತಂದೆಯನ್ನೇ ವರಿಸಿದ ಮಗಳು! ಛೀ… ಥೂ ಎಂದ ನೆಟ್ಟಿಗರು- ಏನಿದು ಪ್ರಕರಣ?
2022ರಲ್ಲಿ, ಬಿಹಾರದ ಮುಂಗೇರ್ ನಲ್ಲಿ ಮನುಷ್ಯರ ಹಾಗೆ ಕಣ್ಣುಗಳಿದ್ದ ಆಡಿನ ಮರಿ ಜನಿಸುವ ಮೂಲಕ ಸುದ್ದಿಯಾಗಿತ್ತು, ಅದೇ ವರ್ಷ ಮಧ್ಯಪ್ರದೇಶದ ಸೇಮಾಲ್ ಖೇಡಿ ಗ್ರಾಮದಲ್ಲೂ ಇದೇ ರೀತಿಯ ಆಡಿನ ಮರಿ ಜನಿಸಿತ್ತು. ಇದನ್ನು ಮನುಷ್ಯರ ಮುಖವನ್ನು ಹೋಲುವ ಆಡಿನ ಮರಿ ಎಂದೇ ಗ್ರಾಮಸ್ಥರು ಕರೆದಿದ್ದರು ಮತ್ತು ಇದು ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು.
ಇನ್ನು, ಈ ವರ್ಷದ ಪ್ರಾರಂಭದಲ್ಲಿ ಉತ್ತರಪ್ರದೇಶದಲ ಜೌನ್ ಪುರದ ನೌವಾ ಗ್ರಾಮದಲ್ಲಿ ಮನುಷ್ಯರ ರೀತಿಯಲ್ಲೇ ದೊಡ್ಡ ಕಣ್ಣುಗಳು, ಮೂಗು ಹಾಗೂ ಪಾದಗಳನ್ನು ಹೊಂದಿದ ಕಾಲುಗಳಿರುವ ಆಡಿನ ಮರಿ ಜನಿಸಿ ಸುದ್ದಿಯಾಗಿತ್ತು.