Saturday, 10th May 2025

Viral News: ಭಾವಿ ಸೊಸೆಯನ್ನೇ ಮದ್ವೆಯಾದ ಭೂಪಾ! ಅತ್ತ ಮನನೊಂದು ಸನ್ಯಾಸಿಯಾದ ಮಗ

ನಾಸಿಕ್‌: ಸೊಸೆ- ಮಾವ, ಅತ್ತೆ- ಅಳಿಯನ ಸಂಬಂಧವನ್ನು ಪವಿತ್ರ ಎಂದು ನಂಬಲಾಗುತ್ತೆ. ಮಾವ, ಅಪ್ಪನಿಗೆ ಸಮಾನ. ಆದ್ರೆ ಇದು ಕಲಿಕಾಲ ಸ್ವಾಮಿ! ಈಗಿಗ ನಮಗೆ ಸರಿಯಾದ ಸುದ್ದಿಗಳಿಗಿಂತ ಚಿತ್ರ-ವಿಚಿತ್ರ ಸುದ್ದಿಗಳೇ ಕೇಳ್ಸೋದು ಮತ್ತು ಅವೇ ನಮಗೆ ಪಥ್ಯವಾಗೋದು ಸಹ. ಅಂತಹ ಒಂದು ವಿಚಿತ್ರ ಸುದ್ದಿಯೊಂದು ಮಹಾರಾಷ್ಟ್ರದಿಂದ (Maharashtra) ವರದಿಯಾಗಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ (Viral News) ಆಗಿದೆ.

ಯಾರನ್ನೋ ಮದುವೆಯಾಗಲು (Marriage) ಬಂದ ಹುಡುಗಿ ಇನ್ನಾರನ್ನೋ ಮದುವೆಯಾದ ಅನೇಕ ಘಟನೆಗಳು ನಮ್ಮ ಕಣ್ಮುಂದೆ ಇವೆ. ಈಗ ಆಘಾತಕಾರಿ ಘಟನೆ ಇಂತಹದ್ದೇ ಒಂದು ಘಟನೆ ನಮ್ಮ ದೇಶದಲ್ಲೇ ವರದಿಯಾಗಿದೆ. ತನ್ನ ಭಾವಿ ಸೊಸೆ (Daughter in law) ಯನ್ನೇ ಮದುವೆ ಆಗಿದ್ದಾನೆ. ಈ ವಿಷ್ಯ ತಿಳಿದ ಮಗ ಸನ್ಯಾಸಿಯಾಗುವ ನಿರ್ಧಾರ ತೆಗೆದುಕೊಂಡಿದ್ದಾನೆ. ಘಟನೆ ಬೆಳಕಿಗೆ ಬರ್ತಿದ್ದಂತೆ ಜನರು, ‘ಇದೆಂಥಾ ಕಥೆಯಪ್ಪ..’ ಎಂದು ಪ್ರಶ್ನಿಸುತ್ತಿದ್ದಾರೆ. ಮಾತ್ರವಲ್ಲದೇ, ತಂದೆ ಸ್ಥಾನದಲ್ಲಿರುವ ಮಾವ ಹೇಗೆ ತನ್ನ ಭಾವಿ ಸೊಸೆಯನ್ನು ಮದುವೆಯಾಗಲು ಸಾಧ್ಯ? ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಿದೆ.

ಮಹಾರಾಷ್ಟ್ರದ ನಾಸಿಕ್ ನಲ್ಲಿ (Nasik) ಘಟನೆ ನಡೆದಿದ್ದು,  ಮಗನ ಮದುವೆಗೆ ತಂದೆ ಎಲ್ಲ ತಯಾರಿ ನಡೆಸಿದ್ದ. ಮಗನಿಗಾಗಿ ಹುಡುಗಿಯನ್ನು ಹುಡುಕಿದ್ದ. ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿದ್ದವು. ಮದುವೆಗೆ ದಿನಾಂಕ ಕೂಡ ಫಿಕ್ಸ್ ಆಗಿತ್ತು. ಕುಟುಂಬದಲ್ಲಿ ಮದುವೆ ತಯಾರಿ ಜೋರಾಗಿಯೇ ನಡೆದಿತ್ತು. ಮಗ ತನ್ನ ಹೊಸ ಜೀವನದ ಬಗ್ಗೆ ಕನಸು ಕಾಣ್ತಿದ್ದ. ಆದ್ರೆ ಆಗಿದ್ದೇ ಬೇರೆ. ನಂಬಿದ್ದ ಅಪ್ಪನೇ ಕೈಕೊಟ್ಟಿದ್ದಾನೆ. ಅದ್ಯಾವಾಗ ಭಾವಿ ಸೊಸೆ ಮೇಲೆ ಆತನಿಗೆ ಪ್ರೀತಿಯಾಯ್ತೋ ತಿಳಿಯದು. ಇಬ್ಬರು ಮುಹೂರ್ತ ನೋಡದೆ, ಮನೆಯವರಿಗೆ ವಿಷ್ಯ ತಿಳಿಸದೆ ಮದುವೆ ಆಗಿದ್ದಾರೆ. ಇದನ್ನು ಕೇಳಿದ ಮಗ ದಿಗ್ಭ್ರಮೆಗೊಂಡಿದ್ದಾನೆ.

ನಿಶ್ಚಿತಾರ್ಥವಾಗಿದ್ದ ಹುಡುಗಿ ಕೈಕೊಟ್ಟ ಮೇಲೆ ಮಗ ಸಂಸಾರದ ಮೇಲೆ ಜಿಗುಪ್ಸೆ ಹೊಂದಿದ್ದಾನೆ. ಅಪ್ಪನ ಮೋಸದಿಂದ ಬೇಸತ್ತಿರುವ ಮಗ, ಜೀವನದಲ್ಲಿ ಮದುವೆಯಾಗದೆ, ಒಂಟಿಯಾಗಿರುವ ನಿರ್ಧಾರಕ್ಕೆ ಬಂದಿದ್ದಾನೆ. ತಂದೆ, ಮಗನಿಗೆ ಇನ್ನೊಂದು ಹುಡುಕಿ ಹುಡುಕುವುದಾಗಿ ಭರವಸೆ ನೀಡಿದ್ದ. ಮನೆಯವರೆಲ್ಲ ಆತನ ಮನವೊಲಿಸುವ ಪ್ರಯತ್ನ ನಡೆಸಿದ್ದರು. ತಂದೆಯಿಂದ ಬೇರೆಯಾಗಿ ವಾಸವಾಗುವಂತೆ ಸಲಹೆ ನೀಡಿದ್ದರು. ಮದುವೆ ಆಗಲು ಬೇರೆ ಹುಡುಗಿ ಹುಡುಕುವುದಾಗಿ ಅವರೆಲ್ಲ ಭರವಸೆ ನೀಡಿದ್ದರು. ಆದ್ರೆ ಮಗ ಮಾತ್ರ ಮನಸ್ಸು ಬದಲಿಸಲಿಲ್ಲ. ತನ್ನನ್ನು ಮದುವೆ ಆಗ್ಬೇಕಿದ್ದ ಹುಡುಗಿ ತನ್ನ ಅಪ್ಪನ ಕೈ ಹಿಡಿದು ಸಂಸಾರ ನಡೆಸಲು ಮುಂದಾಗಿದ್ದು ಆತನಿಗೆ ಆಘಾತವನ್ನುಂಟು ಮಾಡಿದೆ. ಪ್ರೀತಿ, ಮದುವೆ ಮೇಲಿನ ನಂಬಿಕೆಯನ್ನು ಆತ ಕಳೆದುಕೊಂಡಿದ್ದಾನೆ ಎಂದು ಸಂಬಂಧಿಕರು ಹೇಳಿದ್ದಾರೆ.

ಮಗ ಈಗ ತನ್ನ ತಂದೆ ಹಾಗೂ ಪತ್ನಿಯಾಗಬೇಕಾಗಿದ್ದ ಅಮ್ಮನ ಜೊತೆಗಿಲ್ಲ. ಆತ ಮನೆಯಿಂದ ಹೊರಗೆ ಬೀದಿಯಲ್ಲಿ ವಾಸ ಶುರು ಮಾಡಿದ್ದಾನೆ ಎಂದು ಮೂಲಗಳು ಹೇಳಿವೆ. ಇಂಥ ಘಟನೆ ಇದೇ ಮೊದಲಲ್ಲ. ಈ ಹಿಂದೆ ಕೂಡ ಅನೇಕ ಇಂಥ ಪ್ರಕರಣ ಬೆಳಕಿಗೆ ಬಂದಿದೆ. ಮಗಳನ್ನು ಮದುವೆಯಾಗಲು ಬಂದ ಹುಡುಗನನ್ನು ಹುಡುಗಿ ತಾಯಿ ಮದುವೆಯಾದ ಘಟನೆ ಈ ಹಿಂದೆ ನಡೆದಿತ್ತು.

ಈ ಸುದ್ದಿಯನ್ನೂ ಓದಿ: Viral Video: ಇಂಡಿಗೋ ವಿಮಾನದಲ್ಲಿ ʼಟೀ ಸರ್ವ್‌ʼ ಮಾಡಿದ ಪ್ರಯಾಣಿಕರು; ವೈರಲ್‌ ಆಯ್ತುಈ ವಿಡಿಯೊ

Leave a Reply

Your email address will not be published. Required fields are marked *