ಲಖನೌ: ಅಪ್ರಾಪ್ತ ಹುಡುಗಿಯೊಬ್ಬಳು ತನ್ನ ವಿವಾಹಿತ ಅತ್ತಿಗೆಯನ್ನು ಮದುವೆಯಾಗಲು ಸಂಬಂಧಿಕರನ್ನು ಒತ್ತಾಯಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ಬೆಳಕಿಗೆ ಬಂದಿದೆ. ಕಳೆದ ಆರು ತಿಂಗಳುಗಳಲ್ಲಿ, ಇವರಿಬ್ಬರು ನಿಕಟ ಸಂಬಂಧವನ್ನು(Love Case) ಬೆಳೆಸಿಕೊಂಡಿದ್ದರು. ಆದರೆ, ಅವರ ಪ್ರಣಯ ಸಂಬಂಧವು ಕುಟುಂಬದವರಿಗೆ ತಿಳಿದು ಭಾರೀ ಗಲಾಟೆಗೆ ಕಾರಣವಾಯಿತು. ನಂತರ ಅತ್ತಿಗೆ ವಿಷ ಸೇವಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಆಕೆಯ ಸ್ಥಿತಿ ಗಂಭೀರವಾದ ಪರಿಣಾಮ ಅವಳ ಕುಟುಂಬವು ಅವಳನ್ನು ಚಿಕಿತ್ಸೆಗಾಗಿ ಬಂಗರ್ಮೌ ಸಿಹೆಚ್‍ಸಿಗೆ ದಾಖಲಿಸಿದೆ(Viral News).
ಐದು ದಿನಗಳ ಹಿಂದೆ, ಹುಡುಗಿ ಮತ್ತು ವಿವಾಹಿತ ಮಹಿಳೆ ಇಬ್ಬರೂ ಓಡಿಹೋಗಿದ್ದರು. ಆದರೆ ಪೊಲೀಸರು ಅವರನ್ನು ಪತ್ತೆಹಚ್ಚಿ ಆಯಾ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ. ವಿವಾಹಿತ ಮಹಿಳೆಯ ಪತಿ ಅವಳಿಂದ ದೂರವಾಗಿದ್ದ ಕಾರಣ ಆಕೆ ತವರು ಮನೆಯಲ್ಲಿದ್ದಾಳಂತೆ.
उन्नाव के बांगरमऊ कोतवाली क्षेत्र में एक युवती रिश्ते की भाभी से विवाह की जिद पर अड़ी हुई थी। महिला और युवती के बीच पिछले छह महीनों से नजदीकियां थीं। दोनों के बीच प्रेम संबंधों को लेकर विवाद बढ़ा, और युवती ने महिला पर जहर खाने का आरोप लगाया। महिला की हालत गंभीर हो गई, जिसके बाद… pic.twitter.com/D15wRIxBFg
— भारत समाचार | Bharat Samachar (@bstvlive) January 6, 2025
ಮಾಹಿತಿ ಪ್ರಕಾರ, ಉನ್ನಾವೊದ ಬೆಹತಾ ಮುಜಾವರ್ ಪ್ರದೇಶದಲ್ಲಿ ವಾಸಿಸುವ ಹುಡುಗಿ ಅದೇ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ನಿಕಟ ಸ್ನೇಹ ಬೆಳೆಸಿದ್ದಳು. ವಿವಾಹಿತ ಮಹಿಳೆ ಹಾಗೂ ಹುಡುಗಿ ಸಂಬಂಧದಲ್ಲಿ ಅತ್ತಿಗೆ-ನಾದಿನಿಯಾಗಿದ್ದಾರೆ. ಹಾಗಾಗಿ ಅವರ ಕುಟುಂಬ ಸದಸ್ಯರು ಪರಸ್ಪರ ಚೆನ್ನಾಗಿದ್ದರು. ಕಳೆದ ಆರು ತಿಂಗಳಲ್ಲಿ, ಅವರ ಸಂಬಂಧವು ಪ್ರೀತಿಗೆ ತಿರುಗಿತು ಮತ್ತು ಅವರೀಗ ಪರಸ್ಪರ ಮದುವೆಯಾಗಲು ನಿರ್ಧರಿಸಿದರು.
ಅವರ ಕುಟುಂಬಗಳಿಗೆ ಅವರ ಸಂಬಂಧದ ಬಗ್ಗೆ ತಿಳಿದಾಗ, ಅವರು ಅದನ್ನು ಆಕ್ಷೇಪಿಸಿದ್ದಾರೆ. ವಿವಾಹಿತ ಮಹಿಳೆಯ ಕುಟುಂಬವು ತನ್ನ ಮೇಲೆ ಹಲ್ಲೆ ನಡೆಸಿದೆ ಮತ್ತು ತನ್ನ ಗೆಳೆತಿಯನ್ನು ಭೇಟಿಯಾಗಲು ಹೋದಾಗ ವಿಷ ಸೇವಿಸುವಂತೆ ಒತ್ತಾಯಿಸಿದೆ ಎಂದು ಯುವತಿ ಹೇಳಿದ್ದಾಳೆ. ಕೆಲವು ದಿನಗಳ ಹಿಂದೆ, ಇಬ್ಬರು ಒಟ್ಟಿಗೆ ಓಡಿಹೋಗಿದ್ದರು. ಆದರೆ ಪೊಲೀಸರು ಅವರನ್ನು ಕಂಡುಹಿಡಿದು ಅವರ ಕುಟುಂಬಗಳಿಗೆ ಹಸ್ತಾಂತರಿಸಿದರು. ನಂತರ ವಿವಾಹಿತ ಮಹಿಳೆ ವಿಷ ಸೇವಿಸಿದ್ದಾಳಂತೆ.
ಈ ಸುದ್ದಿಯನ್ನೂ ಓದಿ:ನಾಯಿಯ ತಟ್ಟೆಯಲ್ಲಿದ್ದ ಆಹಾರವನ್ನು ವಿದ್ಯಾರ್ಥಿಗಳಿಗೆ ಬಡಿಸಿದ ಶಾಲಾ ಸಿಬ್ಬಂದಿ; ಬೆಚ್ಚಿಬಿದ್ದ ಪೋಷಕರು
ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿ, ವಿವಾಹಿತ ಮಹಿಳೆಯ ಕುಟುಂಬವು ಅವಳಿಗೆ ವಿಷಪ್ರಾಶನ ಮಾಡಿದೆ ಎಂದು ಆರೋಪಿಸಿದ್ದಾಳೆ. ಆದರೆ ಎರಡೂ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಈ ಸಂಬಂಧದ ಬಗ್ಗೆ ಎರಡೂ ಕುಟುಂಬಗಳು ಭಿನ್ನಾಭಿಪ್ರಾಯ ಹೊಂದಿವೆ ಮತ್ತು ಔಪಚಾರಿಕ ದೂರು ದಾಖಲಾದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.