Sunday, 11th May 2025

Viral News: ಬೊಕ್ಕೆ, ಬ್ರೇಸ್ಲೆಟ್ ಗಿಫ್ಟ್‌… ಪ್ರೀತಿಸುವಂತೆ ಕತಾರ್‌ ರಾಜಕುಮಾರಿಯ ಬೆನ್ನು ಬಿದ್ದ ಕಾರ್‌ ಡ್ರೈವರ್‌-ಆಮೇಲೆ ಆಗಿದ್ದೇ ಬೇರೆ!

viral news

ದೋಹಾ: ಕತಾರ್‌ ರಾಜಕುಮಾರಿಗೆ ಲಂಡನ್‌ನ ಕಾರು ಚಾಲಕನೋರ್ವ ಹೂಗುಚ್ಛ, ಗಿಫ್ಟ್‌ಗಳನ್ನು ಕಳುಹಿಸಿ ಇದೀಗ ಜೈಲುಪಾಲಾಗಿರುವ ಘಟನೆಯೊಂದು ವರದಿಯಾಗಿದೆ. ಕಿಡಿಗೇಡಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 12 ತಿಂಗಳ ಕಠಿಣ ಜೈಲುಶಿಕ್ಷೆ ವಿಧಿಸಿದೆ. 47 ವರ್ಷದ ಜಿಹಾದ್ ಅಬೌಸಲಾಹ್, ಪ್ರೀತಿಗಾಗಿ ಕತಾರ್ ರಾಜಕುಮಾರಿ(Qatari Princess) ಹಯಾ ಅಲ್-ಥಾನಿ ಅವರ ಹಿಂದೆ ಬಿದ್ದಿದ್ದ ಅಪರಾಧಿ ಎಂದು ಕಂಡುಬಂದಿದೆ. ಈತ ಅಲ್-ಥಾನಿಯ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಆತನಿಗೆ ರಾಜಕುಮಾರಿ ವಿವಾಹಿತೆ ಎಂದು ತಿಳಿದಿದ್ದರೂ ಆಕೆಯ ಮೇಲೆ ಪ್ರೀತಿಯುಂಟಾಗಿದ್ದು, ಬಗೆ ಬಗೆ ರೀತಿಯಲ್ಲಿ ತನ್ನ ಪ್ರೇಮನಿವೇದನೆ ಮಾಡಿಕೊಂಡಿದ್ದಾಳೆ(Viral News).

ಅಬೌಸಲಾಹ್ ಬ್ರೇಸ್ಲೆಟ್ ಮತ್ತು ಹೂವುಗಳಂತಹ ಉಡುಗೊರೆಗಳನ್ನು ಹಯಾ ಅಲ್-ಥಾನಿಗೆ ಕಳುಹಿಸುವುದು ಮತ್ತು ಅವಳ ಜನ್ಮದಿನದ ಶುಭಾಶಯ ಕೋರಿ ಸಂದೇಶ ಕಳಿಸುತ್ತಿದ್ದ. ದಿನೇ ದಿನೇ ಆತನ ವರ್ತನೆ ಬಹಳ ಕಿರಿಕಿರಿಯನ್ನುಂಟು ಮಾಡುತ್ತಿತ್ತು.ಅಲ್-ಥಾನಿ ದೋಹಾದಲ್ಲಿದ್ದಾಗ, ಆಕೆಗೆ ಅವನಿಂದ ಅನೇಕ ಫೋನ್ ಕರೆಗಳೂ ಬಂದಿತ್ತು.

ಅಬೌಸಲಾ ಅಲ್-ಥಾನಿಯ ಲಂಡನ್ ನಿವಾಸಕ್ಕೆ ಭೇಟಿ ನೀಡಿದ್ದ ಎನ್ನಲಾಗಿದೆ. ಅಲ್ಲದೇ ಆಕೆಯ ಸಿಬ್ಬಂದಿಯ ಸಹಾಯದಿಂದ ಆಕೆಗೆ ಹೂವುಗಳನ್ನು ಕಳುಹಿಸಲು ಪ್ರಯತ್ನಿಸಿದ್ದ. ಆತನ ಇಂತಹ ನಡವಳಿಕೆಯು ಗಮನಾರ್ಹವಾದ ಕಳವಳವನ್ನು ಉಂಟುಮಾಡಿತು. ಕೊನೆಗೆ ವಿಧಿ ಇಲ್ಲದೇ ಹಯಾ ಅಲ್-ಥಾನಿ ತನ್ನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಖಾಸಗಿ ಭದ್ರತೆಯನ್ನು ವ್ಯವಸ್ಥೆ ಮಾಡಲು ತನ್ನ ಪತಿ ಮೊಹಮದ್ ಅಲ್-ಥಾನಿಗೆ ಹೇಳಿದ್ದಳು. ಅಲ್ಲದೇ ಅಬೌಸಲಾ ಬಗ್ಗೆ ಸವಿವರವಾಗಿ ಹೇಳಿದ್ದಳು.

ಇದರ ಬೆನ್ನಲ್ಲೇ ಪತ್ನಿಯ ಭದ್ರತೆ ಹೆಚ್ಚಿಸಿದ ಪತಿ ಮೊಹಮದ್ ಅಲ್-ಥಾನಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಅಬೌಸಲಾನನ್ನು ಅರೆಸ್ಟ್‌ ಮಾಡಲಾಯಿತು. ಕೋರ್ಟ್‌ ವಿಚಾರಣೆ ವೇಳೆ ಅಬೌಸಲಾ ನಡವಳಿಕೆಯಿಂದ ಅಲ್-ಥಾನಿಯ ದೈನಂದಿನ ಜೀವನವು ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಆತನ ನಡವಳಿಕೆಯಿಂದ ರಾಜಕುಮಾರಿ ಹಯಾ ಮತ್ತು ಆತನ ಕುಟುಂಬ ತಮ್ಮ ಸ್ವಂತ ಮನೆಯಲ್ಲಿಯೇ ಅಸುರಕ್ಷತೆಯನ್ನು ಎದುರಿಸುತ್ತಿದ್ದಾರೆ. ಸದಾ ಅವರು ಭೀತಿಯಲ್ಲಿಯೇ ಬದುಕುತ್ತಿದ್ದಾರೆ ಎಂದು ಎಂದು ಆಕೆ ಪರ ವಕೀಲರು ಹೇಳಿದ್ದಾರೆ.

ರಾಜಕುಮಾರಿಗಾಗಿ ಅಬೌಸಲಾ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದ. ಆತ ಮಾನಸಿಕ ಸ್ಥಿಮಿತ ಸರಿಯಾಗಿಲ್ಲ. ಆತನಿಂದ ರಾಜಕುಮಾರಿ ಮತ್ತು ಆಕೆಯ ಕುಟುಂಬಕ್ಕೆ ಬೆದರಿಕೆ ಇದೆ ಎಂದು ವಕೀಲರು ತಿಳಿಸಿದ್ದಾರೆ. ವಾದ ವಿವಾದಗಳನ್ನು ಗಮನಿಸಿದ ಕೋರ್ಟ್‌, ಆರೋಪಿ ಮಾನಸಿಕ ಅಸ್ವಸ್ಥ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿ ಆತನಿಗೆ 12ತಿಂಗಳ ಜೈಲುಶಿಕ್ಷೆ ವಿಧಿಸಿದೆ.

ಈ ಸುದ್ದಿಯನ್ನೂ ಓದಿ: Viral Video: ಇಂಡಿಗೋ ವಿಮಾನದಲ್ಲಿ ʼಟೀ ಸರ್ವ್‌ʼ ಮಾಡಿದ ಪ್ರಯಾಣಿಕರು; ವೈರಲ್‌ ಆಯ್ತುಈ ವಿಡಿಯೊ