Monday, 12th May 2025

Viral News: ಸಿಂಗಾಪುರದಲ್ಲಿ ಭಾರತೀಯ ಮೂಲದ ಎಂಜಿನಿಯರ್‌ಗೆ ಜಾಕ್‍ಪಾಟ್! ಲಾಟರಿಯಲ್ಲಿ 8 ಕೋಟಿ ರೂ. ಬಹುಮಾನ

Viral Video

ಸಿಂಗಾಪುರ: ಅದೃಷ್ಟ ಅಂದ್ರೆ ಇದಪ್ಪಾ! ಸಿಂಗಾಪುರ ಲಾಟರಿಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ಒಂದು ಮಿಲಿಯನ್ ಡಾಲರ್ ಗೆಲ್ಲುವ ಮೂಲಕ ಅದೃಷ್ಟಶಾಲಿಯಾಗಿದ್ದಾನೆ. ಬಾಲಸುಬ್ರಮಣಿಯನ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟ ಎಂಜಿನಿಯರ್ ಚಿತಾಂಬರಂ ಲಾಟರಿಯಲ್ಲಿ ಮೊದಲ ಬಹುಮಾನವನ್ನು ಪಡೆದಿದ್ದಾರೆ. ಇದು ಅವರನ್ನು ಮಿಲಿಯನೇರ್ ಆಗಿ ಮಾಡಿದೆ. ಈ ಸುದ್ದಿ ಎಲ್ಲೆಡೆ ವೈರಲ್‌(Viral News) ಆಗಿದೆ.

ಲಾಟರಿ ಗೆಲ್ಲಬೇಕು ಎಂಬ ಕನಸು ಹಲವರಿಗಿರುತ್ತದೆ. ಅದಕ್ಕಾಗಿ ಜನರು ತಮ್ಮ ಟಿಕೆಟ್‍ಗಳನ್ನು  ಖರೀದಿಸಲು ಮತ್ತು ತಮ್ಮ ಅದೃಷ್ಟವನ್ನು ಪರೀಕ್ಷಿಸಲು ನಿಯಮಿತವಾಗಿ ಲಾಟರಿ ಟಿಕೆಟ್ ಸ್ಟಾಲ್‍ಗೆ ಹೋಗುತ್ತಾರೆ. ಮತ್ತು ತಾವು ಲಾಟರಿಯಲ್ಲಿ ಗೆಲುವು ಸಾಧಿಸಿದ್ದೇವೆಯೇ?  ಎಂದು ತಿಳಿಯಲು ಡ್ರಾ ಮಾಡುವ ದಿನಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಲಾಟರಿಯಲ್ಲಿ ಕೋಟಿ ಹಣ ಗೆದ್ದರೆ ಅವರಿಂದ ಸಿಗುವ ಆನಂದ ಊಹಿಸಲು ಸಾಧ್ಯವಿಲ್ಲ. ಇದೀಗ ಅಂತಹದೊದು ಜಾಕ್‍ಪಾಟ್ ಸಿಂಗಾಪುರದಲ್ಲಿ ಭಾರತೀಯ ಮೂಲದ ಎಂಜಿನಿಯರ್‌ಗೆ ಹೊಡೆದಿದೆ.

ಇತ್ತೀಚೆಗೆ ಸಿಂಗಾಪುರದಲ್ಲಿ ಡ್ರಾ ಮಾಡಿದ ಲಾಟರಿಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಒಂದು ಮಿಲಿಯನ್ ಡಾಲರ್ ಗೆಲ್ಲುವ ಮೂಲಕ ಅದೃಷ್ಟಶಾಲಿಯಾಗಿದ್ದಾರೆ. ಬಾಲಸುಬ್ರಮಣಿಯನ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟ ಎಂಜಿನಿಯರ್ ಚಿತಾಂಬರಂ ಲಾಟರಿಯಲ್ಲಿ ಮೊದಲ ಬಹುಮಾನವನ್ನು ಪಡೆದಿದ್ದಾರೆ. ಇದು  ಅವರನ್ನು ಮಿಲಿಯನೇರ್ ಆಗಿ ಮಾಡಿದೆ.

ಸಿಂಗಾಪುರದಲ್ಲಿರುವ ಮುಸ್ತಫಾ ಜ್ಯುವೆಲ್ಲರಿ ಆಯೋಜಿಸಿದ್ದ ಗ್ರ್ಯಾಂಡ್ ಲಕ್ಕಿ ಡ್ರಾದಲ್ಲಿ ಎಂಜಿನಿಯರ್ ಭಾಗವಹಿಸಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿದ್ದಾರೆ. ಅವರು 10,00,000 ಯುನೈಟೆಡ್ ಸ್ಟೇಟ್ಸ್ ಡಾಲರ್ ಮೊತ್ತವನ್ನು ಪಡೆದಿದ್ದಾರೆ. ಇದು 8.46 ಕೋಟಿ ರೂಪಾಯಿಗಳಿಗೆ ಸಮನಾಗಿದೆ. ಹಾಗಾಗಿ  ಬಾಲಸುಬ್ರಮಣಿಯನ್ ಅವರು ರೂ. 8 ಕೋಟಿಗೂ ಹೆಚ್ಚು ಹಣವನ್ನು ಗೆದ್ದಿದ್ದಾರೆ.

ವಿಜೇತ ಬಾಲಸುಬ್ರಮಣಿಯನ್ ಸಿಂಗಾಪುರದಲ್ಲಿ ವಾಸಿಸುತ್ತಿದ್ದರು ಮತ್ತು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಆ ದೇಶದಲ್ಲಿ ಪ್ರಾಜೆಕ್ಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಲಾಟರಿಯಲ್ಲಿ ಒಂದು ಮಿಲಿಯನ್ ಡಾಲರ್ ಗೆದ್ದ ಬಗ್ಗೆ ತಿಳಿದಾಗ ಅವರು ಸಂತೋಷದಿಂದ ಆನಂದಭಾಷ್ಪ ಸುರಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:‘ಡಾಕ್ಟರ್-ಡಾಕ್ಟರ್’ ಆಟವಾಡಿದ ಮಕ್ಕಳು ಕೀಟನಾಶಕ ಸೇವಿಸಿದರು!

ಈ ಬಗ್ಗೆ ತಮ್ಮ ಸಂತೋಷವನ್ನು ಹಂಚಿಕೊಂಡ ಬಾಲಸುಬ್ರಮಣಿಯನ್ “ನನ್ನ ತಂದೆಯ ಪುಣ್ಯತಿಥಿಯಂದು ನಾನು ದೇವಸ್ಥಾನಕ್ಕೆ ಹೋಗಲು ಯೋಜಿಸುತ್ತಿದ್ದಾಗ ಬೆಳಿಗ್ಗೆ ನನಗೆ ಕರೆ ಬಂತು. ಇದು ಮೇಲಿನಿಂದ ನನ್ನ ತಂದೆ ಮಾಡಿದ ಆಶೀರ್ವಾದದಂತೆ ಭಾಸವಾಯಿತು. ನಾನು ತುಂಬಾ ಸಂತೋಷವಾಗಿದ್ದೇನೆ. ಈ ದೊಡ್ಡ ಹಣವನ್ನು ನನಗೆ ನೀಡಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು, ಮತ್ತು ಇದನ್ನು ಸರಿಯಾಗಿ ಬಳಸಿಕೊಳ್ಳಲು ಬಯಸುತ್ತೇನೆ “ಎಂದು ಅವರು ದೊಡ್ಡ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿಜೇತರನ್ನು ಘೋಷಿಸಿದ ನಂತರ ಮುಸ್ತಫಾ ಜ್ಯುವೆಲ್ಲರಿ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.