ನವದೆಹಲಿ: ದೆಹಲಿಯ ವ್ಯಕ್ತಿಯೊಬ್ಬರು ಬೆಂಗಳೂರಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ಬೆಂಗಳೂರಿನ ಬಗ್ಗೆ ಟೀಕಿಸುವವರ ವಿರುದ್ಧ ರೆಡ್ಡಿಟ್‍ನಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅವರು ಯಾವುದೇ ಬೆಲೆ ತೆತ್ತಾದರೂ ಬೆಂಗಳೂರನ್ನು ರಕ್ಷಿಸಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ. ಅವರ ಪ್ರಕಾರ, ತಮ್ಮ ಉದ್ಯೋಗವನ್ನು ಇಷ್ಟಪಡದ ಟೆಕ್ಕಿಗಳು ಅಥವಾ ನಗರದ ಬಗ್ಗೆ ಅನಗತ್ಯ ನಕಾರಾತ್ಮಕತೆಯನ್ನು ಹರಡುವವರು ಸಂಕುಚಿತ ಮನಸ್ಸಿನ ವ್ಯಕ್ತಿಗಳು ಎಂದು ಹೇಳಿದ್ದಾರೆ.
ಬೆಂಗಳೂರಿನ ವಾಹನ ಸಂಚಾರ, ನೀರಿನ ಬಿಕ್ಕಟ್ಟಿನ ನಡುವೆಯೂ ಈ ವ್ಯಕ್ತಿ ಇಲ್ಲಿನ ಆಹಾರ, ಆಹ್ಲಾದಕರ ಹವಾಮಾನ ಮತ್ತು ಶುದ್ಧ ಗಾಳಿಯನ್ನು ಹೊಗಳಿದ್ದಾರೆ. ಇಲ್ಲಿನ ಜನ ಹಾಗೂ ಶಾಲೆಯ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟ್‌ನಲ್ಲಿ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಬರೆದ ಅವರು, ʼʼಹೌದು ಬೆಂಗಳೂರಿನಲ್ಲಿ ಟ್ರಾಫಿಕ್ ಸ್ಥಿತಿ ಕೆಟ್ಟದಾಗಿರಬಹುದು. ಆದರೆ ಇದು ದೆಹಲಿಯಲ್ಲಿಯೂ ಇದೆ. ನಾನು ದೆಹಲಿಗಿಂತ ಬೆಂಗಳೂರಿನ ಟ್ರಾಫಿಕ್‌ನಲ್ಲಿರಲು ಬಯಸುತ್ತೇನೆ” ಎಂದಿದ್ದಾರೆ.
ನೀರಿನ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ವ್ಯಕ್ತಿ, ʼʼಈ ವರ್ಷ ಬೆಂಗಳೂರಿನಲ್ಲಿ ಸುದ್ದಿಯಲ್ಲಿದ್ದ ಮತ್ತೊಂದು ಸಮಸ್ಯೆ ಎಂದರೆ ನೀರಿನ ಸಮಸ್ಯೆ. ಟ್ರಾಫಿಕ್ ಸಮಸ್ಯೆಗಳ ನಂತರ ಇದು ಎರಡನೇ ಸ್ಥಾನದಲ್ಲಿತ್ತು. ದೆಹಲಿಯಲ್ಲಿಯೂ ನೀರು ಸಿಗದ ಸ್ಥಳಗಳಿವೆʼʼ ಎಂದು ಅವರು ತಿಳಿಸಿದ್ದಾರೆ.
ಆಟೋ ಚಾಲಕರ ಅಸಭ್ಯ ವರ್ತನೆಯ ಬಗ್ಗೆ ಮಾತನಾಡಿದ ಅವರು, ʼಆಟೋವಾಲಾಗಳು ದೆಹಲಿಗಿಂತ ಬೆಂಗಳೂರಿನಲ್ಲಿ ಹೆಚ್ಚು ನಾಗರಿಕ ಮತ್ತು ಸಭ್ಯವಾಗಿ ಕಾಣುತ್ತಾರೆ. ದೆಹಲಿಯಲ್ಲಿ ನೀವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯೂ ಕೆಟ್ಟದಾಗಿ ನೋಡುತ್ತಾರೆʼʼ ಎಂದು ತಿಳಿಸಿದ್ದಾರೆ. ʼʼಅನೇಕ ಉತ್ತರ ಭಾರತೀಯರು ಬೆಂಗಳೂರು ಮತ್ತು ಅದರ ಪ್ರಾದೇಶಿಕ ಭಾಷೆಯಾದ ಕನ್ನಡದ ಬಗ್ಗೆ ತಿರಸ್ಕಾರದ ಮನೋಭಾವವನ್ನು ಹೊಂದಿದ್ದಾರೆʼʼ ಎಂದು ಅವರು ಒತ್ತಿ ಹೇಳಿದ್ದಾರೆ.
ನಂತರ ಅವರು ಬೆಂಗಳೂರು ನಗರದ ಹವಾಮಾನದ ಬಗ್ಗೆ ಮಾತನಾಡಿದ ಅದನ್ನು ದೆಹಲಿಯ ವಿಪರೀತ ಹವಾಮಾನಕ್ಕೆ ಹೋಲಿಸಿದ್ದಾರೆ. ಬೆಂಗಳೂರಿನ ವಾತಾವರಣ ಕೂಲ್ ಆಗಿದ್ದರೆ ದೆಹಲಿಯ ವಾತಾವರಣ ಉಷ್ಣತೆಯಿಂದ ಕೂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈ ವರ್ಷ ದೆಹಲಿಯಲ್ಲಿ ಮಾಲಿನ್ಯ ಕೂಡ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Photo: ಶಿಕ್ಷಣದ ನೈಜ ಶಕ್ತಿಯನ್ನು ಜಗತ್ತಿಗೇ ತೋರಿಸಿಕೊಟ್ಟವರು ಡಾ. ಬಿ.ಆರ್.ಅಂಬೇಡ್ಕರ್; ಈ ವೈರಲ್ ಫೋಟೊದಲ್ಲಿದೆ ಪ್ರೂಫ್