Friday, 16th May 2025

Video Viral: ಶವಪೆಟ್ಟಿಗೆಯೊಳಗಿದ್ದ ಮಹಿಳೆ ಒಮ್ಮೆಲೆ ಕಣ್ಣು ಬಿಟ್ಳು! ಬೆಚ್ಚಿಬಿದ್ದ ಜನ- ವಿಡಿಯೊ ವೈರಲ್

Video Viral

ಸತ್ತ ವ್ಯಕ್ತಿಗಳು ಮರಳಿ ಬದುಕಿದ ಘಟನೆಯನ್ನು ನಾವು ಕೇಳಿರುವುದು ಬಹಳ ಕಡಿಮೆ. ಆ ರೀತಿ ನಡೆದರೆ ಅವರ ಕುಟುಂಬದವರಷ್ಟು ಸಂತೋಷಪಡುವವರು ಮತ್ತೊಬ್ಬರಿಲ್ಲ. ಅಂದಹಾಗೇ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊವೊಂದು ಲಕ್ಷಾಂತರ ಜನರನ್ನು ಬೆಚ್ಚಿಬೀಳಿಸಿದೆ. ಈ ವಿಡಿಯೊದಲ್ಲಿ ಶವಪೆಟ್ಟಿಗೆಯಲ್ಲಿ ಮಲಗಿದ್ದ ಮಹಿಳೆಯೊಬ್ಬಳು ಇದ್ದಕ್ಕಿದ್ದಂತೆ ಕಣ್ಣು ತೆರೆದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್(Video Viral) ಆಗಿದೆ.

@DramaAlert ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೊದಲ್ಲಿ, ಒಬ್ಬ ಮಹಿಳೆ ಶವಪೆಟ್ಟಿಗೆಯೊಳಗೆ ಮಲಗಿದ್ದಾಳೆ. ಅದರ, ಗಾಜಿನ ಮೇಲೆ ಮೇಣದಬತ್ತಿ, ಮೃತ ಮಹಿಳೆ ಫೋಟೋ ಮತ್ತು ಇತರ ವಸ್ತುಗಳನ್ನು ಇರಿಸಲಾಗಿದೆ. ಕುಟುಂಬದವರು ಶವದ ಮುಂದೆ ಅಳುತ್ತಿದ್ದಾರೆ. ಎಲ್ಲರೂ ದುಃಖದಲ್ಲಿರುವಾಗ ಆಗ ಥಟ್ಟನೆ ಮಹಿಳೆಯ ದೇಹದಲ್ಲಿ ಚಲನೆ ಕಂಡುಬರುತ್ತದೆ. ಎಲ್ಲರೂ ಶವ ಪೆಟ್ಟಿಗೆ ಕಡೆಗೆ ನೋಡ ನೋಡುತ್ತಿದ್ದಂತೆ ಅದರ ಒಳಗಡೆ ಇಡಲಾಗಿದ್ದ ಮಹಿಳೆ ಕಣ್ಣು ತೆರೆದಿದ್ದಾಳಂತೆ.

ಶವ ಹೇಗೆ ಕಣ್ಣು ಬಿಟ್ಟಿದೆ ಎಂದು ನಿಮಗೂ ಕೂಡ ಆಶ್ಚರ್ಯವಾಗಿದೆಯಾ….? ಕೊನೆಗೂ ಈ ವಿಡಿಯೊದ ಅಸಲಿಯತ್ತು ಬಯಲಾಗಿದೆ. ಇದೊಂದು ತಮಾಷೆಯ ವಿಡಿಯೊವಂತೆ. ಮಹಿಳೆ ಸತ್ತಿರಲಿಲ್ಲವಂತೆ. ಸತ್ತಂತೆ ನಾಟಕ ಮಾಡಿ ಶವ ಪೆಟ್ಟಿಗೆಯಲ್ಲಿ ಮಲಗಿದ್ದಳಂತೆ. ಸತ್ತ ವ್ಯಕ್ತಿ ಕಣ್ಣು ತೆರೆದರೆ ಜನ ಯಾವ ರೀತಿ ವರ್ತಿಸುತ್ತಾರೆ ಎಂದು ನೋಡುವುದಕ್ಕೆ ಈ ವಿಡಿಯೊ ಮಾಡಿರುವುದಾಗಿ ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ:‘ಪುಷ್ಪ 2’ ಚಿತ್ರದ ಗಂಗಮ್ಮ ಥಲ್ಲಿ ಲುಕ್‍ನಲ್ಲಿ ಸಖತ್‌ ಆಗಿ ಹೆಜ್ಜೆ ಹಾಕಿದ ಅಲ್ಲು ಅರ್ಜುನ್‌ ಅಭಿಮಾನಿ; ವಿಡಿಯೊ ವೈರಲ್

ಈ ವಿಡಿಯೊದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಈ ವಿಡಿಯೊ ಮಾಡಿದವರು ಜನರ ಗಮನ ಸೆಳೆಯಲು ಸಾವಿನಂತಹ ಸೂಕ್ಷ್ಮ ವಿಷಯಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  “ಏನಾದರೂ ವೈರಲ್ ಆದ ಮಾತ್ರಕ್ಕೆ ಅದು ನಿಜವೆಂದು ಅರ್ಥವಲ್ಲ” ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. “ಇದು ಕೇವಲ ನಾಟಕ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.