ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಥ್ನಿಕ್‌ವೇರ್ ಪ್ರಿಯರಿಗೆ ಇಷ್ಟವಾಗುವಂತಹ ನಾನಾ ಬಗೆಯ ವೈವಿಧ್ಯಮಯ ಡಿಸೈನ್‌ನ ವೆಲ್ವೆಟ್ ಸೂಟ್‌ಗಳು (Velvet salwar suit Fashion) ವಿಂಟರ್ ಸೀಸನ್ (Winter season) ಫ್ಯಾಷನ್ ಲೋಕಕ್ಕೆ (Fashion world) ಎಂಟ್ರಿ ನೀಡಿವೆ. ಹೌದು, ಚಳಿಗೆ ದೇಹವನ್ನು ಬೆಚ್ಚಗಿಡುವಂತಹ ಈ ಫ್ಯಾಬ್ರಿಕ್‌ನ ಉಡುಪುಗಳು ಕಾಲರ್ ನೆಕ್ ಲೈನ್, ಫುಲ್ ಸ್ಲೀವ್, ಶೀರ್ ಸ್ಲೀವ್, ಸ್ಲಿಟ್ ಕಟ್, ಎ ಲೈನ್ ಕಟ್ ಹಾಗೂ ಅಂಬ್ರೆಲಾ, ಅನಾರ್ಕಲಿ ವಿನ್ಯಾಸ ಸೇರಿದಂತೆ ನಾನಾ ಶೈಲಿಯಲ್ಲಿ ಲಗ್ಗೆ ಇಟ್ಟಿವೆ.


ರಾಯಲ್ ಲುಕ್ ನೀಡುವ ವೆಲ್ವೆಟ್ ಸಲ್ವಾರ್ ಸೂಟ್
ಚಳಿಗಾಲಕ್ಕೆ ಬೆಚ್ಚಗಿಡುವ ಈ ಸಲ್ವಾರ್ ಸೂಟ್‌ಗಳು ಎಂಬ್ರಾಯ್ಡರಿ ಡಿಸೈನ್ ನಲ್ಲಿ ಹಾಗೂ ನಾನಾ ಬಗೆಯ ಹ್ಯಾಂಡ್ ವರ್ಕ್ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಇವು ರಾಯಲ್ ಲುಕ್ ಕಲ್ಪಿಸುತ್ತವೆ. ಮರೂನ್, ವೈನ್ ರೆಡ್, ರಾಯಲ್ ಬ್ಲ್ಯೂ, ಮೆಜೆಂತಾ, ಡಾರ್ಕ್ ಗ್ರೀನ್, ಹಾಟ್ ಚಾಕೋಲೆಟ್ ಬ್ರೌನ್ ಡಾರ್ಕ್ ವರ್ಣಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಈ ಕಲರ್‌ನ ಸಲ್ವಾರ್ ಸೂಟ್‌ಗಳು ರಾಯಲ್ ಲುಕ್‌ಗೆ ಸಾಥ್ ನೀಡುತ್ತವೆ. ಈ ವರ್ಣದ ವೆಲ್ವೆಟ್ ಔಟ್ ಫಿಟ್‌ಗಳನ್ನು ಧರಿಸಿದಾಗ ಎಕ್ಸ್ಟಾರ್ಡಿನರಿ ಲುಕ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್ ಕುಶ್.

ಸಾಫ್ಟ್ ವೆಲ್ವೆಟ್ ಸಲ್ವಾರ್ ಸೂಟ್
ಈ ಸಾಲಿನಲ್ಲಿ ಸಾಫ್ಟ್ ಫ್ಯಾಬ್ರಿಕ್‌ನಲ್ಲಿ ಲಭ್ಯವಿರುವಂತಹ ಸಲ್ವಾರ್ ಸೂಟ್‌ಗಳು ರೆಡಿಮೇಡ್ ಡಿಸೈನ್‌ನಲ್ಲಿ ದೊರೆಯುತ್ತಿವೆ. ಅವುಗಳಲ್ಲಿ ಹೆಚ್ಚಿನವು ನೆಕ್ಲೈನ್ ಹಾಗೂ ಸ್ಲೀವ್ ಡಿಸೈನ್ ಹೊಂದಿವೆ. ಇವು ಯುವತಿಯರು ಮಾತ್ರವಲ್ಲ, ವಿವಾಹಿತ ಮಹಿಳೆಯರಿಗೂ ಪ್ರಿಯವಾಗಿವೆ ಎನ್ನುತ್ತಾರೆ ಫ್ಯಾಷನ್ ಡಿಸೈನರ್ ರಾಧಿಕಾ. ಅವರ ಪ್ರಕಾರ, ವೆಲ್ವೆಟ್ ಸಲ್ವಾರ್ ಸೂಟ್‌ಗಳಲ್ಲಿ ಸಾಕಷ್ಟು ಬಗೆಯವು ನಾನಾ ವಿನ್ಯಾಸದ ಪ್ಯಾಂಟ್‌ಗಳನ್ನು ಹೊಂದಿವೆ ಎನ್ನುತ್ತಾರೆ.
ಸೆಲೆಬ್ರೆಟಿ ಲುಕ್‌ಗಾಗಿ ವೆಲ್ವೆಟ್ ಸಲ್ವಾರ್ ಸೂಟ್
ಈ ಸೀಸನ್‌ನಲ್ಲಿ ಯಾವುದೇ ಎಥ್ನಿಕ್ ಅಥವಾ ತಾರೆಯರ ಪ್ರೈವೆಟ್ ಸಮಾರಂಭಗಳಲ್ಲಿ, ಸಿಲ್ಕ್ ವೆಲ್ವೆಟ್ ಸಲ್ವಾರ್ ಸೂಟ್‌ಗಳನ್ನು ಕಾಣಬಹುದು. ಇವು ಹೈ ಫ್ಯಾಷನ್ ನ ಟಾಪ್ ಲಿಸ್ಟ್‌ನಲ್ಲೂ ಇವೆ. ಇದೀಗ ಈ ಔಟ್ ಫಿಟ್‌ಗಳು ಸಾಮಾನ್ಯ ಹುಡುಗಿಯರನ್ನು ಕೂಡ ಆವರಿಸಿಕೊಳ್ಳುತ್ತಿವೆ ಎನ್ನುತ್ತಾರೆ ಡಿಸೈನರ್ ರಾಶಿ.


ವೆಲ್ವೆಟ್ ನಿರ್ವಹಣೆ
ಸಾಮಾನ್ಯ ಫ್ಯಾಬ್ರಿಕ್‌ಗೆ ಹೋಲಿಸಿದಲ್ಲಿ ವೆಲ್ವೆಟ್ ಸಲ್ವಾರ್ ಸೂಟ್‌ಗಳು ಕೊಂಚ ದುಬಾರಿ. ನಿರ್ವಹಣೆ ಕೂಡ ಕಷ್ಟ. ಪದೇ ಪದೇ ವಾಶ್ ಮಾಡಿದರೇ ಮುದುರಿ ಹೋಗಬಹುದು. ಆದಷ್ಟೂ ಡ್ರೈ ವಾಶ್ ಮಾಡುವುದು ಅಗತ್ಯ ಎನ್ನುತ್ತಾರೆ ಡಿಸೈನರ್ ರಾಶಿ.


Winter Puffer Jacket Fashion: ಚುಮು ಚುಮು ಚಳಿಯಲ್ಲಿ ಟ್ರೆಂಡಿಯಾದ ವೈವಿಧ್ಯಮಯ ಪಫರ್ ಜಾಕೆಟ್ಸ್!
ವೆಲ್ವೆಟ್ ಸಲ್ವಾರ್ ಸೂಟ್ ಮೇಕೋವರ್ ಗೆ ಸಿಂಪಲ್ ಟಿಪ್ಸ್
• ಟ್ರೆಂಡಿಯಾಗಿರುವ ಹ್ಯಾಂಡ್ ವರ್ಕ್ ಇರುವಂತವನ್ನು ಸೆಲೆಕ್ಟ್ ಮಾಡಿ.
• ಸಲ್ವಾರ್ ಸೂಟ್ ಜೊತೆ ಫಂಕಿ ಅಥವಾ ಜಂಕ್ ಜ್ಯುವೆಲರಿ ಧರಿಸುವುದು ಬೇಡ!
• ಫಾಮರ್ಲ್ ಲುಕ್ ನೀಡುವುದರಿಂದ, ಮೇಕಪ್ ಆಕರ್ಷಕವಾಗಿರಲಿ.