Monday, 12th May 2025

Vastu Tips: ಫ್ರಿಡ್ಜ್‌ ಮೇಲೆ ಈ ವಸ್ತುಗಳನ್ನು ಇಟ್ಟರೆ ಲಾಸ್ ಲಾಸ್ ಲಾಸ್!

Vastu Tips

ಪ್ರತಿಯೊಬ್ಬರ ಮನೆಯಲ್ಲೂ ಈಗ ರೆಫ್ರಿಜರೇಟರ್ (Vastu for fridge) ಇದ್ದೇ ಇರುತ್ತೆ. ಆದರೆ ಇದನ್ನು ಎಲ್ಲಿ, ಹೇಗೆ ಇಡಬೇಕು ಎಂಬುದು ಹೆಚ್ಚಿನವರಿಗೆ ಗೊತ್ತೇ ಆಗಲ್ಲ. ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಮನೆಯಲ್ಲಿ ರೆಫ್ರಿಜರೇಟರ್ ಇಡುವುದಕ್ಕೂ ಕೆಲವೊಂದು ನಿಯಮಗಳಿವೆ.

ರೆಫ್ರಿಜರೇಟರ್ ಇಂದು ಪ್ರತಿ ಮನೆಯಲ್ಲೂ ಬಳಸುವ ಪ್ರಮುಖ ಯಂತ್ರವಾಗಿದೆ. ಹೆಚ್ಚಿನವರಿಗೆ ಇದರ ಮೇಲೆ ಏನು ಇಡಬೇಕು, ಇಡಬಾರದು ಎಂಬುದು ಗೊತ್ತಿಲ್ಲ. ಕೆಲವೊಂದು ಸಾಮಾನ್ಯ ಬಳಕೆಯ ವಸ್ತುಗಳನ್ನು ರೆಫ್ರಿಜರೇಟರ್ ಮೇಲೆ ಇಡುತ್ತಾರೆ. ಇದರಿಂದ ಭವಿಷ್ಯದಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು.

ಮನೆಯಲ್ಲಿ ಫ್ರಿಡ್ಜ್ ಎಲ್ಲಿಡಬೇಕು, ಅದರ ಮೇಲೆ ಏನೆಲ್ಲಾ ಇಡಬಾರದು ಎನ್ನುವುದನ್ನು ವಾಸ್ತು ಶಾಸ್ತ್ರ ಹೇಳುವುದು ಹೀಗೆ..

Vastu Tips

ಯಾವುದನ್ನು ಇಡಬಾರದು?

ಹಣ, ಚಿನ್ನವನ್ನು ಫ್ರಿಡ್ಜ್ ಮೇಲೆ ಇಡಲೇಬಾರದು. ಅನೇಕರು ಫ್ರಿಡ್ಜ್ ಮೇಲೆ ಹಣ, ಚಿನ್ನವನ್ನು ಇಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಹಣ ಮತ್ತು ಚಿನ್ನದಂತಹ ಬೆಲೆಬಾಳುವ ವಸ್ತುಗಳನ್ನು ಫ್ರಿಡ್ಜ್ ಮೇಲೆ ಇರಿಸುವುದರಿಂದ ವ್ಯಾಪಾರದಲ್ಲಿ ನಷ್ಟವಾಗಬಹುದು.

ಇನ್ನು ಅನೇಕರು ಫ್ರಿಡ್ಜ್ ಮೇಲೆ ಮಕ್ಕಳ ಪದಕ, ಟ್ರೋಫಿಗಳನ್ನು ಇಡುತ್ತಾರೆ. ಇದು ಕೂಡ ಮಂಗಲಕಾರವಲ್ಲ ಎನ್ನಲಾಗುತ್ತದೆ.

ಇನ್ನು ಕೆಲವರು ಫ್ರಿಡ್ಜ್ ಮೇಲೆ ಅಲಂಕಾರದ ಉದ್ದೇಶಕ್ಕಾಗಿ ಸಸ್ಯಗಳನ್ನು ಇಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಬಿದಿರಿನ ಗಿಡಗಳನ್ನು ಫ್ರಿಡ್ಜ್ ಮೇಲೆ ಇಡಬಾರದು. ಬಿದಿರಿನ ಗಿಡಗಳನ್ನು ಇಟ್ಟುಕೊಳ್ಳುವುದರಿಂದ ಆರ್ಥಿಕ ತೊಂದರೆಗಳು ಉಂಟಾಗುತ್ತವೆ. ಯಾವುದೇ ಲಾಭವಾಗುವುದಿಲ್ಲ ಎನ್ನುತ್ತದೆ ವಾಸ್ತು ಶಾಸ್ತ್ರ.

Vastu Tips

ರೆಫ್ರಿಜರೇಟರ್‌ನ ಮೇಲೆ ಔಷಧಗಳನ್ನು ಇಡುವುದರಿಂದ ಅವುಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಫ್ರಿಡ್ಜ್‌ನಿಂದ ಹೊರಸೂಸುವ ಶಾಖವು ಔಷಧಗಳ ಮೇಲೆ ಪರಿಣಾಮ ಬೀರುತ್ತದೆ.

Vastu Tips: ತುಳಸಿ ಗಿಡದ ಧನಾತ್ಮಕ ಶಕ್ತಿಯನ್ನೇ ನಾಶ ಮಾಡುತ್ತವೆ ಈ ಸಸ್ಯಗಳು!

ಫ್ರಿಡ್ಜ್ ಅನ್ನು ಯಾವಾಗಲೂ ಗೋಡೆಯಿಂದ ಕನಿಷ್ಠ ಒಂದು ಅಡಿ ದೂರದಲ್ಲಿ ಇಡಬೇಕು. ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲು, ಯಾವಾಗಲೂ ಫ್ರಿಡ್ಜ್ ಅನ್ನು ಪಶ್ಚಿಮ ದಿಕ್ಕಿನಲ್ಲಿ ಇರಿಸುವುದು ಒಳ್ಳೆಯದು. ಇದಲ್ಲದೆ, ನೈಋತ್ಯ ದಿಕ್ಕನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ.