Saturday, 10th May 2025

Vastu Tips: ವಾಸ್ತು ದೋಷಗಳನ್ನೂ ನಿವಾರಿಸುತ್ತದೆ ಕ್ರಿಸ್‌ಮಸ್ ಮರ!

Vastu Tips

ಕ್ರಿಸ್‌ಮಸ್ ಹತ್ತಿರದಲ್ಲೇ ಇದೆ. ಸಂತೋಷ, ಸಕಾರಾತ್ಮಕತೆಯನ್ನು ತರುವ ಈ ಹಬ್ಬವನ್ನು ವಿಶ್ವದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಯೇಸು ಕ್ರಿಸ್ತನ ಜನ್ಮದಿನದ ಸಂಭ್ರಮವನ್ನು ವಿಶ್ವದಾದ್ಯಂತ ಜಾತಿ, ಮತ, ಧರ್ಮದ ಬೇಧವಿಲ್ಲದೆ ಆಚರಿಸುವಾಗ ವಿವಿಧ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಇದರಲ್ಲಿ ಪ್ರತಿ ಮನೆಯಲ್ಲೂ ಕ್ರಿಸ್‌ಮಸ್ ಟ್ರೀ (Christmas Tree) ಅನ್ನು ಇರಿಸುವುದು ವಾಡಿಕೆ. ಮನೆಯಲ್ಲಿ ಕ್ರಿಸ್‌ಮಸ್ ಟ್ರೀ ಇರಿಸುವುದು ವಾಸ್ತು (Vastu Tips) ದೋಷವನ್ನು ನಿವಾರಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಕ್ರಿಸ್‌ಮಸ್ ಸಂದರ್ಭದಲ್ಲಿ ಬಹುತೇಕ ಕ್ರಿಶ್ಚಿಯನ್ ಸಮುದಾಯದ ಮನೆಗಳಲ್ಲಿ ಕ್ರಿಸ್‌ಮಸ್ ವೃಕ್ಷವನ್ನು ಅಲಂಕರಿಸಲಾಗುತ್ತದೆ. ಇದು ಹಬ್ಬದ ಕೇಂದ್ರಬಿಂದುವೂ ಹೌದು. ಇದನ್ನು ಇರಿಸುವುದು ಕೇವಲ ಸೌಂದರ್ಯಕ್ಕಾಗಿ ಅಲ್ಲ. ಅದನ್ನು ಹೊರತಾಗಿ ಕ್ರಿಸ್‌ಮಸ್ ಮರ ಅದೃಷ್ಟವನ್ನು ತರುತ್ತದೆ ಎನ್ನುವ ನಂಬಿಕೆಯೂ ಇದೆ.

ಮನೆಯಲ್ಲಿ ಕ್ರಿಸ್‌ಮಸ್ ಮರವನ್ನು ಇರಿಸುವುದರಿಂದ ಸಾಕಷ್ಟು ಪ್ರಯೋಜನಗಳು ಇವೆ ಎನ್ನುತ್ತದೆ ವಾಸ್ತು ಶಾಸ್ತ್ರ. ಮುಖ್ಯವಾಗಿ ಇದು ಮನೆಯ ಹಾಗೂ ಸುತ್ತಮುತ್ತಲಿನ ವಾಸ್ತು ದೋಷಗಳನ್ನು ನಿವಾರಿಸುತ್ತದೆ. ಮನೆಯಲ್ಲಿ ಕ್ರಿಸ್‌ಮಸ್ ವೃಕ್ಷವನ್ನು ಇಡುವುದರಿಂದ ಮೂರು ಮುಖ್ಯ ಪ್ರಯೋಜನಗಳಿವೆ.

Vastu Tips

ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ ಕ್ರಿಸ್‌ಮಸ್ ಟ್ರೀ ಸಕಾರಾತ್ಮಕತೆಯ ಸಂಕೇತವಾಗಿದೆ. ಇದು ತನ್ನ ಸುತ್ತಮುತ್ತಲಿನ ಋಣಾತ್ಮಕತೆಯನ್ನು ಹೀರಿಕೊಳ್ಳುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಮನೆಯಲ್ಲಿ ತುಂಬುತ್ತದೆ. ಆದರೆ ಇದನ್ನು ಎಲ್ಲಿ ನಿಯೋಜಿಸಲಾಗುತ್ತದೆ ಎಂಬುದು ಮುಖ್ಯವಾಗಿದೆ.

ಕ್ರಿಸ್‌ಮಸ್ ಮರವನ್ನು ಮನೆಯ ದಕ್ಷಿಣ ಭಾಗದಲ್ಲಿ ಇರಿಸಬಾರದು. ಯಾಕೆಂದರೆ ಇದರಿಂದ ಅದರ ಪ್ರಯೋಜನಗಳು ಕಡಿಮೆಯಾಗುತ್ತದೆ. ಸರಿಯಾದ ದಿಕ್ಕಿನಲ್ಲಿ ಅದನ್ನು ಇರಿಸುವುದರಿಂದ ಸಾಮರಸ್ಯ ಮತ್ತು ಯಶಸ್ಸಿನ ವಾತಾವರಣವನ್ನು ನಿರ್ಮಿಸಬಹುದು.

Vastu Tips

ಸಂಪತ್ತು ಮತ್ತು ಸಮೃದ್ಧಿ ತರುತ್ತದೆ

ಕ್ರಿಸ್‌ಮಸ್ ವೃಕ್ಷವು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯ ವಾಸಸ್ಥಾನವೆಂದು ನಂಬಲಾಗಿದೆ. ಅದನ್ನು ಮನೆಯ ಅಂಗಳದಲ್ಲಿ ನೆಡುವುದು ಅಥವಾ ಅದನ್ನು ಮನೆಗೆ ತರುವುದು ಆರ್ಥಿಕ ಸ್ಥಿರತೆ ಮತ್ತು ಸಂತೋಷದ ಹರಿವಿಗೆ ಕಾರಣವಾಗುತ್ತದೆ. ಅಲ್ಲದೇ ಕ್ರಿಸ್‌ಮಸ್ ವೃಕ್ಷವು ಮನೆಯವರಿಗೆ ನಿರಂತರ ದೇವರ ಆಶೀರ್ವಾದವನ್ನು ಕೊಡುತ್ತದೆ ಎನ್ನಲಾಗುತ್ತದೆ.

ಕುಟುಂಬದ ಏಕತೆಗೆ ಪ್ರೇರಣೆ

ಕ್ರಿಸ್‌ಮಸ್ ಟ್ರೀ ಒಗ್ಗಟ್ಟಿನ ಸಂಕೇತವಾಗಿದೆ. ಮನೆ ಮಂದಿಯೆಲ್ಲ ಸೇರಿ ಒಟ್ಟಿಗೆ ಮರವನ್ನು ಅಲಂಕರಿಸುವುದು ಕುಟುಂಬದ ಸದಸ್ಯರ ನಡುವೆ ಏಕತೆಯನ್ನು ಬೆಳೆಸುತ್ತದೆ. ತಲೆಮಾರುಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Vastu Tips: ಮನೆ ಮುಂದೆ ಪಪ್ಪಾಯಿ ಗಿಡ ನೆಡಬಹುದೇ? ಏನು ಹೇಳುತ್ತದೆ ವಾಸ್ತು ಶಾಸ್ತ್ರ?

ವಾಸ್ತು ಪ್ರಕಾರ ಮರವು ಸಾಮರಸ್ಯ ಮತ್ತು ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುತ್ತದೆ. ಉದ್ವಿಗ್ನತೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೌಟುಂಬಿಕ ಸಂಬಂಧಗಳನ್ನು ಬಲಪಡಿಸುತ್ತದೆ.