Sunday, 11th May 2025

Vastu Tips: ಮನೆ ಮುಂದೆ ಪಪ್ಪಾಯಿ ಗಿಡ ನೆಡಬಹುದೇ? ಏನು ಹೇಳುತ್ತದೆ ವಾಸ್ತು ಶಾಸ್ತ್ರ?

Vastu Tips

ಎಲ್ಲೆಂದರಲ್ಲಿ ಬೆಳೆಯುವ ಗಿಡಗಳಲ್ಲಿ ಪಪ್ಪಾಯಿ ಗಿಡವೂ (papaya tree) ಒಂದು. ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈ ಹಣ್ಣು ಬಹುತೇಕ ಮಂದಿಗೆ ಪ್ರಿಯವಾಗಿರುತ್ತದೆ. ಆದರೆ ಇದರ ಗಿಡವನ್ನು ಮನೆಯ ಮುಂದೆ ಬೆಳೆಯಲು ಬಿಡಬಹುದೇ? ಈ ಕುರಿತು ಏನು ಹೇಳುತ್ತದೆ ವಾಸ್ತು (Vastu Tips) ನಿಯಮ ?

ವಾಸ್ತು ಶಾಸ್ತ್ರದಲ್ಲಿ ಎಲ್ಲಾ ಮರ ಮತ್ತು ಗಿಡಗಳನ್ನು ಸರಿಯಾದ ಸ್ಥಳದಲ್ಲಿ ನೆಡಬೇಕು ಎನ್ನುವ ನಂಬಿಕೆ ಇದೆ. ಮರ ಮತ್ತು ಸಸ್ಯಗಳನ್ನು ಸರಿಯಾದ ಸ್ಥಳ ಮತ್ತು ದಿಕ್ಕಿನಲ್ಲಿ ನೆಟ್ಟರೆ ಮನೆ ಮಂದಿಯ ಅದೃಷ್ಟ ಖುಲಾಯಿಸುತ್ತದೆ ಎನ್ನಲಾಗುತ್ತದೆ.

ಮನೆ ಸುತ್ತಮುತ್ತ ಮರ ಮತ್ತು ಗಿಡಗಳನ್ನು ನೆಡುವುದು ವಾಸ್ತು ಶಾಸ್ತ್ರದಲ್ಲೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹರಡುತ್ತದೆ ಎಂದು ಹೇಳಲಾಗುತ್ತದೆ.

ಮರ, ಗಿಡಗಳು ಕುಟುಂಬದ ಸದಸ್ಯರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಿಂದೂ ಶಾಸ್ತ್ರಗಳ ಪ್ರಕಾರ ಮರ ಮತ್ತು ಗಿಡಗಳು ದೇವರು ಮತ್ತು ದೇವತೆಗಳ ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಅನೇಕ ಜನರು ದಿನಕ್ಕೆ ಅನುಗುಣವಾಗಿ ಸರಿಯಾದ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿ ಅವುಗಳನ್ನು ನೆಡುತ್ತಾರೆ.

Vastu Tips

ಮನೆಯ ಮುಂದೆ ಪಪ್ಪಾಯಿ ಗಿಡ ನೆಡಬಹುದೇ?

ವಾಸ್ತು ಶಾಸ್ತ್ರದ ಪ್ರಕಾರ ಪಪ್ಪಾಯಿ ಗಿಡವನ್ನು ಮನೆಯ ಮುಂದೆ ನೆಡಬಾರದು. ಈ ಮರ ತಾನಾಗಿಯೇ ಬೆಳೆದರೂ ಅದನ್ನು ಅಗೆದು ಬೇರೆ ಜಾಗದಲ್ಲಿ ನೆಡಬೇಕು. ಇದಲ್ಲದೇ ಪಪ್ಪಾಯಿ ಮರ ದೊಡ್ಡದಾಗಿ ಬೆಳೆದು ಹಣ್ಣುಗಳು ಬರುವುದನ್ನು ನಿಲ್ಲಿಸಿದರೆ ಅದನ್ನು ಕತ್ತರಿಸುವ ಬದಲು ಅದರ ಕಾಂಡಕ್ಕೆ ರಂಧ್ರ ಮಾಡಿ ಇಂಗು ತುಂಬಿಸಬೇಕು. ಹೀಗೆ ಮಾಡುವುದರಿಂದ ಮನೆಗೆ ಬರುವ ಭಾದೆಗಳು ದೂರವಾಗುತ್ತದೆ.

ಮನೆ ಮುಂದೆ ಪಪ್ಪಾಯಿ ಗಿಡ ನೆಡುವುದರಿಂದ ಆರ್ಥಿಕ ಮುಗ್ಗಟ್ಟು ಉಂಟಾಗುತ್ತದೆ. ಕುಟುಂಬದಲ್ಲಿ ನೆಮ್ಮದಿಯ ಕೊರತೆ ಕಾಡುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪೂರ್ವಜರು ಪಪ್ಪಾಯಿ ಮರದಲ್ಲಿ ನೆಲೆಸಿರುತ್ತಾರೆ ಎನ್ನಲಾಗುತ್ತದೆ. ಹೀಗಾಗಿ ಅದನ್ನು ಮನೆಯ ಮುಂದೆ ನೆಡಬಾರದು ಎನ್ನಲಾಗುತ್ತದೆ. ಅಲ್ಲದೇ ಈ ಗಿಡವನ್ನು ಮನೆಯ ಮುಂದೆ ನೆಡುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತದೆ ಎನ್ನಲಾಗುತ್ತದೆ.

ಮನೆಯ ಅಂಗಳದಲ್ಲೂ ಪಪ್ಪಾಯಿ ಗಿಡ ಬೆಳೆಸಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಂಗಳದಲ್ಲಿ ಈ ಗಿಡ ನೆಡುವುದರಿಂದ ಮನೆಯಲ್ಲಿ ಯಾವಾಗಲೂ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ.

Vastu Tips: ಈ ಏಳು ಸಸ್ಯಗಳನ್ನು ಮನೆಯಲ್ಲಿ ಅಪ್ಪಿತಪ್ಪಿಯೂ ಇಡಬೇಡಿ

ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುವುದಿಲ್ಲ. ಅಲ್ಲದೇ ಮನೆಯಲ್ಲಿ ಯಾವಾಗಲೂ ಭಿನ್ನಾಭಿಪ್ರಾಯ ಮತ್ತು ಸಂಘರ್ಷದ ಪರಿಸ್ಥಿತಿ ಇರುತ್ತದೆ. ಹೀಗಾಗಿ ಮನೆಯ ಅಂಗಳದಲ್ಲಿ ಪಪ್ಪಾಯಿ ಗಿಡ ನೆಡಬೇಡಿ ಮತ್ತು ಬೆಳೆಯಲು ಬಿಡಬೇಡಿ ಎನ್ನುತ್ತದೆ ವಾಸ್ತು ಶಾಸ್ತ್ರ.