Saturday, 10th May 2025

Vastu Tips: ಹಣಕಾಸಿನ ಸಮಸ್ಯೆಯನ್ನು ದೂರ ಮಾಡುತ್ತದೆ ಪೊರಕೆ!

Vastu Tips

ಪೊರಕೆಯನ್ನು (vastu for broom) ಲಕ್ಷ್ಮಿ ದೇವಿಯ ರೂಪ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇದರ ಸಂಗ್ರಹ ಸರಿಯಾದ ದಿಕ್ಕಿನಲ್ಲಿ ಗೌರವ ಪೂರಕವಾಗಿ ಇರಿಸಬೇಕು. ಮನೆಯನ್ನು ಸ್ವಚ್ಛಗೊಳಿಸುವ ಪೊರಕೆಯಿಂದ ಸಾಕಷ್ಟು ಪ್ರಯೋಜನಗಳಿವೆ. ವಾಸ್ತು ನಿಯಮದ (Vastu Tips) ಪ್ರಕಾರ ಇದನ್ನು ಬಳಸಿದರೆ ಮನೆಯಲ್ಲಿರುವ ಆರ್ಥಿಕ ಸಂಕಷ್ಟವನ್ನು ಕೂಡ ದೂರ ಮಾಡಬಹುದು.

ಮನೆಯಲ್ಲಿ ಪೊರಕೆಗಳ ಅಸಮರ್ಪಕವಾಗಿ ಇರಿಸುವುದು ಮನೆಯೊಳಗೆ ನಕಾರಾತ್ಮಕ ಶಕ್ತಿಯ ಆಹ್ವಾನಕ್ಕೆ ಕಾರಣವಾಗುತ್ತದೆ. ವಾಸ್ತು ನಿಯಮಗಳ ಪ್ರಕಾರ ಆರೋಗ್ಯ, ಸಂಪತ್ತು ಮತ್ತು ಸಂಬಂಧಗಳ ಮೇಲೆ ಪೊರಕೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

Vastu Tips

ಯಾವ ದಿಕ್ಕಿನಲ್ಲಿ ಇಡಬೇಕು?

ಮನೆಯ ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಪೊರಕೆ ಇಡುವುದನ್ನು ತಪ್ಪಿಸಬೇಕು. ವಾಯುವ್ಯ ಅಥವಾ ಪಶ್ಚಿಮ ಮೂಲೆಯಲ್ಲಿ ಪೊರಕೆ ಇಡುವುದರಿಂದ ಒಳ್ಳೆಯದು ಎನ್ನಲಾಗುತ್ತದೆ. ಬೇರೆ ದಿಕ್ಕಿನಲ್ಲಿ ಪೊರಕೆಯನ್ನು ಇರಿಸುವುದರಿಂದ ಲಕ್ಷ್ಮಿ ದೇವಿಯನ್ನು ಅಸಂತೋಷಗೊಳಿಸುತ್ತದೆ. ಇದರಿಂದ ಹಣಕಾಸಿನ ತೊಂದರೆಗಳು ಉಂಟಾಗುತ್ತದೆ.

ಹೇಗೆ ಇಡಬೇಕು?

ಪೊರಕೆಯನ್ನು ನೇರವಾಗಿ ಕಾಣುವಂತೆ ಇಡಬಾರದು. ಅತಿಥಿಗಳಿಗೆ ಕಾಣದಂತೆ ದೂರ, ಸಮತಲವಾದ ಪ್ರದೇಶದಲ್ಲಿ ವಿಶ್ರಾಂತಿ ಸ್ಥಿತಿಯಲ್ಲಿ ಅವುಗಳನ್ನು ಇಡಬೇಕು. ಲಂಬವಾಗಿ ಅಥವಾ ತಲೆಕೆಳಗಾಗಿ ಅವುಗಳನ್ನು ಇರಿಸುವುದರಿಂದ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗಿದೆ.

Vastu Tips

ಎಲ್ಲಿ ಇಡಬಾರದು?

ವಾಸ್ತು ತತ್ತ್ವಗಳ ಪ್ರಕಾರ ಮನೆಯೊಳಗಿನ ಕೆಲವು ಪ್ರದೇಶಗಳಾದ ಪೂಜಾ ಕೋಣೆ, ಅಡುಗೆ ಕೋಣೆ ಮತ್ತು ಮಲಗುವ ಕೋಣೆಯಲ್ಲಿ ಪೊರಕೆಯನ್ನು ಅಶುಭವೆಂದು ಪರಿಗಣಿಸಲಾಗಿದೆ. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಸ್ವಚ್ಛತೆ ಅತಿಮುಖ್ಯ ಎನ್ನುತ್ತಾರೆ ಪಂಡಿತ್ ರಿಷಿಕಾಂತ್ ಮಿಶ್ರಾ ಶಾಸ್ತ್ರಿ.

ಇದನ್ನೂ ಓದಿ: Vastu Tips: ವಾಸ್ತು ದೋಷಗಳನ್ನೂ ನಿವಾರಿಸುತ್ತದೆ ಕ್ರಿಸ್‌ಮಸ್ ಮರ!

ಸೂರ್ಯಾಸ್ತದ ಅನಂತರ ಪೊರಕೆಯನ್ನು ಖರೀದಿ ಮಾಡಬಾರದು. ಭಾನುವಾರ ಮತ್ತು ಮಂಗಳವಾರ ಕೂಡ ಪೊರಕೆ ಖರೀದಿ ಮಾಡಬಾರದು. ಮನೆ ಮಂದಿ ಹೊರ ಹೋದ ತಕ್ಷಣ ಮನೆಯನ್ನು ಗುಡಿಸಬಾರದು. ಇದರಿಂದ ಅಪಘಾತಗಳಾಗುವ ಸಾಧ್ಯತೆ ಇದೆ ಎನ್ನುತ್ತದೆ ವಾಸ್ತು ಶಾಸ್ತ್ರ.