Thursday, 15th May 2025

ಟ್ರಕ್‍ಗೆ ಕಾರು ಡಿಕ್ಕಿ: ಮಗು ಸೇರಿ ಎಂಟು ಮಂದಿ ಪ್ರಯಾಣಿಕರು ಸಜೀವ ದಹನ

ಖನೌ: ತಡರಾತ್ರಿ ಹೆದ್ದಾರಿಯಲ್ಲಿ ಟ್ರಕ್‍ಗೆ ಕಾರು ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಮಗು ಸೇರಿದಂತೆ ಎಂಟು ಮಂದಿ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ.

ಸೆಂಟ್ರಲ್ ಲಾಕ್ ಆಗಿದ್ದ ಕಾರು ಬರೇಲಿಯಲ್ಲಿ ಏಳು ವಯಸ್ಕರು ಮತ್ತು ಮಗುವನ್ನು ಸಿಕ್ಕಿಹಾಕಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸ್ಥಳದ ದೃಶ್ಯಾವಳಿಗಳ ಪ್ರಕಾರ, ನೈನಿತಾಲ್ ಹೆದ್ದಾರಿಯಲ್ಲಿ ಟ್ರಕ್ ಪಕ್ಕದಲ್ಲಿ ಹೊತ್ತಿ ಉರಿಯುತ್ತಿರುವ ಕಾರು ಕಂಡುಬಂದಿದೆ.

ಕಾರು ಎದುರಿನ ಲೇನ್‍ಗೆ ತಿರುಗಿ ಟ್ರಕ್‍ಗೆ ಡಿಕ್ಕಿ ಹೊಡೆದಿದೆ ಎಂದು ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಚಂದ್ರ ತಿಳಿಸಿದ್ದಾರೆ. ಭೋಜಿಪುರದ ಬಳಿ ಹೆದ್ದಾರಿಯಲ್ಲಿ ಕಾರು ಟ್ರಕ್‍ಗೆ ಡಿಕ್ಕಿ ಹೊಡೆದು ಎಳೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತು. ಅದು ಸೆಂಟ್ರಲ್ ಲಾಕ್ ಆಗಿದ್ದು, ಬೆಂಕಿಯಿಂದಾಗಿ ಒಳಗಿದ್ದ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಯಾಣಿಕರು ಮದುವೆಗೆ ತೆರಳುತ್ತಿದ್ದರು, ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *