Sunday, 11th May 2025

ಉತ್ತರಾಖಂಡ್: ಆಮ್ ಆದ್ಮಿ ಪಕ್ಷದಲ್ಲಿ ತೀವ್ರ ಭಿನ್ನಮತ

ಡೆಹ್ರಾಡೂನ್: ಉತ್ತರಾಖಂಡ್ ನ ಆಮ್ ಆದ್ಮಿ ಪಕ್ಷದಲ್ಲಿ ತೀವ್ರ ಭಿನ್ನಮತ ಎದುರಾಗಿದ್ದು, 50 ಮಂದಿ ಹಿರಿಯ ನಾಯಕರು ಪಕ್ಷ ತೊರೆದಿದ್ದಾರೆ.
ಪಕ್ಷದ ರಾಜ್ಯ ಸಮನ್ವಯಕಾರ ಜೋತ್ ಸಿಂಗ್ ಬಿಸ್ತ್ ಸೇರಿದಂತೆ 50 ಮಂದಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ 2 ವರ್ಷಗಳಿಂದ ಆಮ್ ಆದ್ಮಿ ಪಕ್ಷ ಉತ್ತರಾಖಂಡ್ ನಲ್ಲಿ ನೆಲೆಕಂಡುಕೊಳ್ಳಲು ಯತ್ನಿಸುತ್ತಿದ್ದು, ಈಗ ತೀವ್ರ ಹಿನ್ನಡೆಯುಂಟಾಗಿದೆ. ಪಕ್ಷದ ರಾಜ್ಯ ವಕ್ತಾರ ಆರ್.ಪಿ.ರಾತೂರಿ, ರಾಜೇಂದ್ರ, ಕಮಲೇಶ್ ರಾಮನ್ ಸೇರಿದಂತೆ ಹಲವು ಪ್ರಮುಖ ನಾಯಕರು ಪಕ್ಷ ತೊರೆದಿದ್ದಾರೆ.
“ರಾಜ್ಯದಾದ್ಯಂತ 50 ಕ್ಕೂ ಹೆಚ್ಚು ನಾಯಕರು ಭಾನುವಾರ ಆಮ್ ಆದ್ಮಿ ಪಕ್ಷವನ್ನು ತೊರೆದಿದ್ದಾರೆ ಮತ್ತು ಸೋಮವಾರದ ವೇಳೆಗೆ ಅವರ ಸಂಖ್ಯೆ 200 ಕ್ಕಿಂತ ಹೆಚ್ಚಿರುವ ಸಾಧ್ಯತೆ ಇದೆ ಎಂದು ಹೇಳಿದರು. “ಕಳೆದ ನಾಲ್ಕು ತಿಂಗಳಿಂದ ಆಮ್ ಆದ್ಮಿ ಪಕ್ಷದ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಗಿ ದ್ದರೂ ಉತ್ತರಾಖಂಡದ ಉನ್ನತ ನಾಯಕತ್ವದಿಂದ ಮಾಡಲ್ಪಟ್ಟಿದೆ ಯಾವುದೇ ಮಹತ್ವದ ಪ್ರಗತಿಯಾಗಿಲ್ಲ. ಈ ಕ್ರಮದ ಕೊರತೆಯು ನನ್ನ ನಿರಾಶೆಗೆ ಕಾರಣವಾಯಿತು ಮತ್ತು ಅಂತಿಮವಾಗಿ ನನ್ನ ರಾಜೀನಾಮೆಗೆ ಕಾರಣವಾಯಿತು, ”ಎಂದು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *