ಲಖನೌ: 36 ವರ್ಷದ ಮಹಿಳೆಯೊಬ್ಬಳು ತನ್ನ ಪತಿ ಮತ್ತು ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿ ಹೋಗಿರುವ ಘಟನೆಯೊಂದು ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ. ಆಕೆಯ ಪತಿ ರಾಜು ಎನ್ನುವವರು ಸೆಕ್ಷನ್ 87ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆ ಪೊಲೀಸರು ಆಕೆಯ ಹುಡುಕಾಟ ನಡೆಸಿದ್ದಾರೆ (Viral News).
ಮಗುವಿಗೆ ಬಟ್ಟೆ ತರಲೆಂದು ಮಾರುಕಟ್ಟೆಗೆ ತೆರಳಿದ ಮಹಿಳೆ ಮನೆಗೆ ಹಿಂತಿರುಗದ ಕಾರಣ ಪತಿ ಆತಂಕಗೊಂಡು ದೂರು ನೀಡಿದ್ದಾರೆ. ಬಳಿಕ ಆಕೆ ಭಿಕ್ಷುಕನ ಜತೆ ಓಡಿ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನು ಅರಿತ ಪತಿ ಆಕೆಯನ್ನು ಹುಡುಕಿ ಕೊಡಿ ಎಂದು ಪೊಲೀಸರ ಬಳಿ ಕಣ್ಣೀರಿಟ್ಟಿದ್ದಾರೆ.
ದೂರಿನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ
ʼʼರಾಜೇಶ್ವರಿ ಜತೆ ನಾನು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇನೆ. ನಮ್ಮಿಬ್ಬರಿಗೆ 6 ಮಕ್ಕಳಿದ್ದಾರೆ. 45 ವರ್ಷದ ನನ್ಹೆ ಪಂಡಿತ್ ಎನ್ನುವ ವ್ಯಕ್ತಿ ನಾವಿರುವ ಸ್ಥಳಕ್ಕೆ ಭಿಕ್ಷೆ ಬೇಡಲು ಆಗಾಗ ಮನೆಗೆ ಬರುತ್ತಿದ್ದ. ಇದೇ ವೇಳೆ ನನ್ನ ಪತ್ನಿ ಜತೆ ಆತ್ಮೀಯವಾಗಿ ಮಾತನಾಡುತ್ತಿದ್ದ. ಭಿಕ್ಷುಕ ಫೋನ್‌ನಲ್ಲೂ ತನ್ನ ಪತ್ನಿ ಜತೆ ಮಾತನಾಡುತ್ತಿದ್ದʼʼ ಎಂದು ದೂರಿನಲ್ಲಿ ರಾಜು ಹೇಳಿದ್ದಾರೆ.
ತಾನು ಎಮ್ಮೆಯನ್ನು ಮಾರಿ ಮನೆಯಲ್ಲಿ ಇರಿಸಿದ್ದ ಹಣದ ಸಮೇತ ಆಕೆ ಪರಾರಿಯಾಗಿದ್ದು ದಯವಿಟ್ಟು ತನ್ನ ಪತ್ನಿ ಯನ್ನು ಹುಡುಕಿ ಕೊಡಿ ಎಂದು ರಾಜು ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಮಹಿಳೆ ಪರಾರಿಯಾದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶಿಲ್ಪಾ ಕುಮಾರಿ ತಿಳಿಸಿದ್ದಾರೆ.
ಇದನ್ನು ಓದಿ:Viral Video: ಏಳು ಖಂಡಕ್ಕೆ ಪ್ರವಾಸ; 102ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ ಮಹಿಳೆ!