Saturday, 10th May 2025

UP Shocker: ಹೆಂಡ್ತಿ ಮನೆಯವರ ಕಾಟಕ್ಕೆ ಬೇಸತ್ತು SSP ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡ ವ್ಯಕ್ತಿ! ವಿಡಿಯೊ ಇದೆ

Viral video

ಬದೌನ್‌: ಪತ್ನಿ ಮನೆಯವರ ಜೊತೆಗಿನ ಕೌಟುಂಬಿಕ ಕಲಹಕ್ಕೆ ಬೇಸತ್ತು ವ್ಯಕ್ತಿಯೋರ್ವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(SSP) ಕಚೇರಿ ಎದುರೇ ತನಗೇ ತಾನೇ ಬೆಂಕಿ ಹಂಚಿಕೊಂಡಿದ್ದಾನೆ(UP Shocker). ಉತ್ತರಪ್ರದೇಶದ ಬದೌನ್‌ನಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ(Viral Video). ಕಚೇರಿ ಎದುರು ಬೆಂಕಿ ಹಚ್ಚಿಕೊಂಡಿರುವ ವ್ಯಕ್ತಿಯ ರಕ್ಷಣೆಗೆ ಯತ್ನಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ವ್ಯಕ್ತಿ ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆ ಸ್ಥಳದಲ್ಲಿದ್ದ ಜನ ಜೋರಾಗಿ ಕಿರುಚಿಕೊಂಡಿದ್ದು, ಇದನ್ನು ಕೇಳಿದ ಪೊಲೀಸರು ಬೆಂಕಿ ನಂದಿಸಲು ಓಡಿ ಬಂದಿದ್ದಾರೆ. ಇನ್ನು ಮಾಹಿತಿ ಪ್ರಕಾರ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಆತನನ್ನು ಆ‍ಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತನ ಸ್ಥಿತಿ ಕ್ಷಣ ಕ್ಷಣ ಬಿಗಡಾಯಿಸುತ್ತಿದ್ದ ಕಾರಣ ಬರೇಲಿಯಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಇನ್ನು ವ್ಯಕ್ತಿಯನ್ನು ಗುಲ್ಪಾಮ್‌ ಎಂದು ಗುರುತಿಸಲಾಗಿದ್ದು, ಈತ ನೈ ಸರೈ ನಿವಾಸಿ. ಈತನ ಪತ್ನಿ ಕೌಟುಂಬಿಕ ಕಲಹದಿಂದಾಗಿ ಪ್ರತ್ಯೇಕವಾಗಿ ತನ್ನ ತವರು ಮನೆಯಲ್ಲಿ ವಾಸವಾಗಿದ್ದಳು. ಎರಡು ದಿನಗಳ ಹಿಂದೆ ಡಿಸೆಂಬರ್ 30 ರಂದು (ಸೋಮವಾರ) ಆತನ ಬಾವ ತನ್ನ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಗುಲ್ಪಾಮ್‌ ವಿರುದ್ಧ ದೂರು ದಾಖಲಿಸಿದ್ದ. ಇದರ ಬೆನ್ನಲ್ಲೇ ಗುಲ್ಪಾಮ್‌ ಈ ಕೃತ್ಯ ಎಸಗಿದ್ದಾನೆ. ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ), ಸಿಟಿ ಸರ್ಕಲ್ ಆಫೀಸರ್ (ಸಿಒ) ಮತ್ತು ಸ್ಥಳೀಯ ಶಾಸಕರಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಗುಲ್ಪಾಮ್‌ ಆರೋಪಿಸಿದ್ದಾನೆ. ಅಲ್ಲದೇ ಜಗಳದ ನಂತರ ಆತನ ಅತ್ತೆ ಮತ್ತು ಇತರ ಆರೋಪಿಗಳು ತನ್ನನ್ನು ಒತ್ತೆಯಾಳಾಗಿಟ್ಟುಕೊಂಡು ಮೊಬೈಲ್ ಫೋನ್, ನಗದು ಮತ್ತು ಇ-ರಿಕ್ಷಾವನ್ನು ಕಸಿದುಕೊಂಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾನೆ.

ಈ ಸುದ್ದಿಯನ್ನೂ ಓದಿ: Plane Crash : ವಿಮಾನ ಪತನಕ್ಕೂ ಮೊದಲಿನ ವಿಡಿಯೋ ವೈರಲ್‌! ಅಷ್ಟಕ್ಕೂ ಆಗಿದ್ದೇನು ಅಲ್ಲಿ ?