Monday, 12th May 2025

UP By Election: ಉತ್ತರಪ್ರದೇಶದಲ್ಲಿ ಮತದಾನಕ್ಕೆ ಖಾಕಿಯಿಂದಲೇ ಅಡ್ಡಿ- 7 ಪೊಲೀಸರು ಸಸ್ಪೆಂಡ್‌

UP By Election

ಲಖನೌ: ಬುಧವಾರ ಉತ್ತರ ಪ್ರದೇಶದಲ್ಲಿ (UP By Election) ಲೋಕಸಭಾ ಉಪಚುನಾವಣೆ ನಡೆಯುತ್ತಿದ್ದು ಚುನಾವಣೆ ಸಂದರ್ಭದಲ್ಲಿ ಕರ್ತವ್ಯ ಲೋಪವೆಸಗಿದ್ದ, 7 ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಭಾರತೀಯ ಚುನಾವಣಾ ಆಯೋಗ (Election Commission Of India) ಆದೇಶ ಹೊರಡಿಸಿದೆ. ಮತದಾರರ ತಪಾಸಣೆ ಮತ್ತು ಮತದಾನಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಂದು ಸಮಾಜವಾದಿ ಪಕ್ಷ (SP) ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ.

ಪೊಲೀಸರ ಮೇಲೆ ಬಂದ ಆರೋಪಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗ ಈ ನಿರ್ಧಾರವನ್ನು ಕೈಗೊಂಡಿದೆ. ಈ ಬಗ್ಗೆ ಮಾತನಾಡಿದ ಚುನಾವಣಾಧಿಕಾರಿ ಯಾರೂ ಕೂಡ ಮತದಾನದಿಂದ ವಂಚಿತರಾಗುವುದಿಲ್ಲ. “ಈಗಾಗಲೇ ಎಲ್ಲ ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಯಾರೂ ಕೂಡ ಮತಗಟ್ಟೆಯ ಹೊರಗೆ ದಾಖಲೆಗಳನ್ನು ಪರಿಶೀಲನೆ ಮಾಡುವುದಿಲ್ಲ. ಮತಗಟ್ಟೆಯ ಒಳಗೇ ದಾಖಲೆ ಪರಿಶೀಲನೆ ಆಗುತ್ತದೆ. ನಿಯಮ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಅಮಾನತುಗೊಂಡ ಏಳು ಅಧಿಕಾರಿಗಳಲ್ಲಿ ಇಬ್ಬರು ಕಾನ್ಪುರ ಜಿಲ್ಲೆ ಮತ್ತು ಇಬ್ಬರು ಮುಜಾಫರ್‌ನಗರ ಜಿಲ್ಲೆ ಹಾಗೂ ಮೂವರು ಮೊರಾದಾಬಾದ್‌ಗೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪೊಲೀಸ್ ಅಧಿಕಾರಿಗಳು ಮತದಾರರ ಕಾರ್ಡ್‌ಗಳು ಮತ್ತು ಆಧಾರ್ ಐಡಿಗಳನ್ನು ಕಾನೂನುಬಾಹಿರವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ನಂತರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು ಮತದಾರರನ್ನು ತಡೆಯುತ್ತಿರುವ ವಿಡಿಯೋ ಹಂಚಿಕೊಂಡಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಪೊಲೀಸರ ವಿರುದ್ಧ ಕೆಲವು ಸಮುದಾಯಗಳನ್ನು ಮತದಾನದಿಂದ ತಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಈ ದೂರಿನ ಆಧಾರಗಳ ಮೇಲೆ ಪರಿಶೀಲನೆ ನಡೆಸಿ ಚುನಾವಣಾ ಆಯೋಗ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ಸಮಾಜವಾದಿ ಪಕ್ಷ ಈ ಬಗ್ಗೆ ಮಾತನಾಡಿ ವೀಡಿಯೊ ಮತ್ತು ಫೋಟೋ ಸಾಕ್ಷ್ಯದ ಆಧಾರದ ಮೇಲೆ ಭ್ರಷ್ಟ ಮತ್ತು ಪಕ್ಷಪಾತಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಉಳಿದ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು, ಆದ್ದರಿಂದ ನೀವು ಯಾವುದೇ ಭಯವಿಲ್ಲದೆ ಹೋಗಬೇಕು ಮತ್ತು ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಹೇಳಿದೆ.

ಇದನ್ನೂ ಓದಿ : Assembly Elections 2024: ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ವೋಟಿಂಗ್‌ ಶುರು; 4 ರಾಜ್ಯಗಳ 15 ಕ್ಷೇತ್ರಗಳಲ್ಲಿ ಇಂದೇ ಉಪ ಚುನಾವಣೆ