Thursday, 15th May 2025

ತಮಿಳುನಾಡಿನಲ್ಲಿ ಐಟಿ ದಾಳಿ: ಅಘೋಷಿತ ಸಾವಿರ ಕೋಟಿ ಆದಾಯ ಪತ್ತೆ

ನವದೆಹಲಿ: ತಮಿಳುನಾಡಿನ ದಕ್ಷಿಣ ಭಾರತದ ಪ್ರಮುಖ ಚಿನ್ನ ವ್ಯಾಪಾರಿಗೆ ಸೇರಿದ ಕಚೇರಿ, ಮಳಿಗೆಗಳ ಮೇಲೆ ನಡೆಸಿದ ದಾಳಿ ವೇಳೆ, ಅಘೋಷಿತ ₹ 1,000 ಕೋಟಿಗೂ ಅಧಿಕ ಮೊತ್ತದ ಆದಾಯ ಪತ್ತೆಯಾಗಿದೆ.

ದಾಳಿ ವೇಳೆ ಪತ್ತೆಯಾದ ಲೆಕ್ಕಪತ್ರ ಇಲ್ಲದ ₹ 1.2 ಕೋಟಿ ನಗದನ್ನು ಜಪ್ತಿ ಮಾಡಲಾಗಿದೆ. ಆದರೆ ವ್ಯಾಪಾರಿಯ ಹೆಸರು ಹಾಗೂ ಇತರ ವಿವರಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಮಾ.4ರಂದು ಚೆನ್ನೈ, ಮುಂಬೈ, ಕೊಯಮತ್ತೂರು, ಮದುರೈ, ತಿರುಚಿರಾಪಳ್ಳಿ, ತ್ರಿಶ್ಶೂರ್, ನೆಲ್ಲೂರು, ಜೈಪುರ ಹಾಗೂ ಇಂದೋರ್‌ನ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿತ್ತು. ಲೆಕ್ಕಪತ್ರ ಇಲ್ಲದ ವ್ಯವಹಾರಗಳ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನು ದಾಳಿ ವೇಳೆ ಸಂಗ್ರಹಿಸಲಾಗಿದೆ’ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಪ್ರಕಟಣೆ ತಿಳಿಸಿದೆ.

‘ಚಿನ್ನದ ವ್ಯಾಪಾರಿ ಖರೀದಿಸಿರುವ ಚಿನ್ನದ ಗಟ್ಟಿಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ಇಲ್ಲ. ಹಳೆ ಚಿನ್ನವನ್ನು ಬಳಸಿ, ಆಭರಣ ಗಳನ್ನು ಮಾಡುವಾಗ ನಷ್ಟವಾಗಿರುವ ಹಾಗೂ ಸಾಲ ಹೊಂದಿರುವ ಬಗ್ಗೆ ಸುಳ್ಳು ಮಾಹಿತಿ ನೀಡಿರುವುದು ಸಹ ಪತ್ತೆಯಾಗಿದೆ’

 

Leave a Reply

Your email address will not be published. Required fields are marked *