Monday, 12th May 2025

ಲಖನೌನಲ್ಲಿ ಉಕ್ರೇನಿಯನ್ ಮಹಿಳೆಯ ಶವ ಪತ್ತೆ

ಲಖನೌ : ನಗರದ ಆಶಿಯಾನಾ ಪ್ರದೇಶದಲ್ಲಿರುವ ತನ್ನ ಅತ್ತೆಯ ಮನೆಯಲ್ಲಿ 27 ವರ್ಷದ ಉಕ್ರೇನ್ ದೇಶದ ಮಹಿಳೆ ಶವವಾಗಿ ಪತ್ತೆಯಾಗಿ ದ್ದಾರೆ.

ಒಕ್ಸಾನಾ ಮಂಚಾರ್ ಎಂಬಾಕೆ ಆಶಿಯಾನಾದ ಜೂಡ್ ಆಗಸ್ಟಿನ್ ಎಂಬಾತನನ್ನು ಮದುವೆಯಾಗಿದ್ದರು. ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

“ಒಕ್ಸಾನಾ ಅವರು ಮನೆಯ ಎರಡನೇ ಮಹಡಿಯಲ್ಲಿ ಸ್ಟೋರ್ ರೂಂ ಕಡೆಗೆ ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪಡೆದುಕೊಂಡಿದ್ದೇವೆ. ಜೊತೆಗೆ, ಆಕೆಯ ಅತ್ತೆ ಮೀನು ಸೇರಿದಂತೆ ಮನೆಯ ಇತರೆ ಸದಸ್ಯರು ಕೂಡ ಕಂಡು ಬಂದಿದ್ದಾರೆ. ಅತ್ತಿಗೆ ಯುಲನ್ ಕೆಳ ಮಹಡಿಯಲ್ಲಿ ಮಲಗಿದ್ದರು” ಎಂದು ಕಂಟೋನ್ಮೆಂಟ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅಭಿನವ್ ಯಾದವ್ ಮಾಹಿತಿ ನೀಡಿದ್ದಾರೆ.

ಸ್ಟೋರ್ ರೂಂ ಬಾಗಿಲು ಒಳಗಿನಿಂದ ಲಾಕ್ ಆಗಿದ್ದು, ಅದನ್ನು ಮುರಿದು ನೋಡಿದಾಗ ಒಕ್ಸಾನಾ ಕಿಟಕಿಯ ಕಬ್ಬಿಣದ ಗ್ರಿಲ್‌ನಿಂದ ಕುತ್ತಿಗೆಗೆ ಬೆಡ್‌ಶೀಟ್ ಕಟ್ಟಿಕೊಂಡು ನೇಣು ಬಿಗಿದುಕೊಂಡಿದ್ದರು. ಕೂಡಲೇ ಆಕೆಯನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲಿನ ವೈದ್ಯರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.